ಕನ್ನಡಪ್ರಭ ವಾರ್ತೆ ಅಥಣಿ
ತಾಲೂಕಿನ ನಂದೇಶ್ವರ ಗ್ರಾಮದಲ್ಲಿ ಸ್ವಾಮೀಜಿಯವರಿಗೆ ಸಂಸ್ಕೃತ ವಿಶ್ವವಿದ್ಯಾಲಯದಿಂದ ಗೌರವ ಡಿ.ಲೀಟ್ ಪದವಿ ಪಡೆದ ಅಂಗವಾಗಿ ಏರ್ಪಡಿಸಿದ ಅಭಿನಂದನಾ ಸಮಾರಂಭ ಏರ್ಪಡಿಸಿದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಪದವಿ ಪಡೆದ ನಂತರ ಅಹಂಕಾರ ಬರಬಾರದು, ಬದಲಾಗಿ ಪದವಿ ಪ್ರಶಸ್ತಿಗಳು ಜವಾಬಾರಿಯನ್ನು ಇನ್ನಷ್ಟು ಹೆಚ್ಚುಸುತ್ತೇವೆ. ನಾನು ಈ ಗ್ರಾಮದಲ್ಲಿ ಸಂಸ್ಕ್ರತ ಭಾಷೆಯನ್ನು ಬೆಳೆಸಲು ಇನ್ನಷ್ಟು ಯೋಜನೆಗಳನ್ನು ಹಾಕಿಕೊಳ್ಳುತ್ತೇನೆ ಎಂದು ತಿಳಿಸಿದರು.
ಪ್ರಭು ಪೂಜಾರಿ ಮಾತನಾಡಿ, ಸ್ವಾಮೀಜಿಯವರು ಸಂಸ್ಕ್ರತ ಭಾಷೆ ಬೆಳೆಸುವುದಕ್ಕೆ ಹಗಲಿರುಳು ಶ್ರಮಿಸುತಿದ್ದಾರೆ. ಅವರು ನಾಡಿನಲ್ಲಿ ನಮ್ಮ ಶ್ರೀಮಂತ ಸಂಸ್ಕೃತಿ ಬಗ್ಗೆ ಪ್ರತಿಯೊಬ್ಬರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತಿದ್ದಾರೆ ಎಂದು ತಿಳಿಸಿದರು.ಸಮಾರಂಭದಲ್ಲಿ ಭೈರವನಾಥ ಸ್ವಾಮೀಜಿ, ಹಣಮಂತ ಬಡಿಗೇರ, ಜಡೆಪ್ಪ ಕುಂಬಾರ, ನೇಮಿನಾಥ ನಂದಗಾಂವ, ಬಸಪ್ಪ ಮುಧೋಳ, ಭಾಗಲಕೋಟಿ ಜಿಲ್ಲಾ ಸಂಸ್ಕೃತ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಂತೇಶ ಅಂಗಡಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಆರತಿ ಖೋತ, ನಾಗೇಶ ಕೊಕಟನೂರ ಸೇರಿ ಮುಂತಾದವರು ಉಪಸ್ಥಿತರಿದ್ದರು.
ಭವ್ಯ ಮೆರವಣಿಗೆ: ಡಿ.ಲೀಟ್ ಪ್ರಶಸ್ತಿ ಪಡೆದ ಸದ್ಗುರು ದುಂಡೇಶ್ವರ ಸ್ವಾಮೀಜಿಯವರನ್ನು ಪೂರ್ಣ ಕುಂಭ, ಕಳಸ ವಾದ್ಯಮೇಳ ಉತ್ಸವದಿಂದ ವೇದಿಕೆಗೆ ಬರಮಾಡಿಕೊಳ್ಳಲಾಯಿತು.ಸಮಸ್ತ ನಾಗರಿಕರಿಂದ ಮತ್ತು ವಿವಿಧ ಗ್ರಾಮಸರಿಂದ ಸಂಘ-ಸಂಸ್ಥೆಗಳಿಂದ ಶ್ರೀಗಳಿಗೆ ಸನ್ಮಾನ ಜರುಗಿತು.