ಇಂದು ಕೊಡಗು ಬಂದ್‌: ವಿವಿಧ ಸಂಘಟನೆಗಳ ಬೆಂಬಲ

KannadaprabhaNewsNetwork | Published : Dec 12, 2024 12:32 AM

ಸಾರಾಂಶ

ವೀರ ಸೇನಾನಿಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಮಾನ ಮಾಡಿದ ಆರೋಪಿ ಗಡಿಪಾರಿಗೆ ಆಗ್ರಹಿಸಿ ಗುರುವಾರ ಕೊಡಗು ಬಂದ್‌ ನಡೆಯಲಿದೆ. ಬೆಳಗ್ಗೆ 6ರಿಂದ ಮಧ್ಯಾಹ್ನ 12ಗಂಟೆಯ ವರೆಗೆ ಕೊಡಗು ಸರ್ವಜನಾಂಗ ಒಕ್ಕೂಟ ಕೊಡಗು ಬಂದ್ ಗೆ ಕರೆ ಕೊಟ್ಟಿರುವ ಹಿನ್ನಲೆ ಹಲವು ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ವೀರ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್ ತಿಮ್ಮಯ್ಯ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಮಾನ ಮಾಡಿದ ಆರೋಪಿ ಗಡಿಪಾರಿಗೆ ಆಗ್ರಹಿಸಿ ಗುರುವಾರ ಕೊಡಗು ಬಂದ್‌ ನಡೆಯಲಿದೆ. ಬೆಳಗ್ಗೆ 6ರಿಂದ ಮಧ್ಯಾಹ್ನ 12ಗಂಟೆಯ ವರೆಗೆ ಕೊಡಗು ಸರ್ವಜನಾಂಗ ಒಕ್ಕೂಟ ಕೊಡಗು ಬಂದ್ ಗೆ ಕರೆ ಕೊಟ್ಟಿರುವ ಹಿನ್ನಲೆ ಹಲವು ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ.

ಮುಂಜಾಗ್ರತಾ ಕ್ರಮವಾಗಿ ಖಾಸಗಿ ಬಸ್‌ಗಳು ಬಂದ್ ಅವಧಿ ಸಂಚರಿಸುವುದಿಲ್ಲ. ಪರಿಸ್ಥಿತಿ ಪರಿಶೀಲಿಸಿ ಓಡಾಟ ನಡೆಸಲಾಗುವುದು, ಬಸ್‌ ಸಂಚಾರ ನಿಲ್ಲಿಸುವುದಿಲ್ಲ ಎಂದು ಕೆಎಸ್‌ಆರ್‌ಟಿಸಿ ಮೂಲಗಳು ತಿಳಿಸಿವೆ.

ಹಲವು ಕೊಡವ ಸಮಾಜಗಳ ಪೈಕಿ ಅಖಿಲ ಕೊಡವ ಸಮಾಜ, ಪೊನ್ನಂಪೇಟೆ ಕೊ.ಸ., ವಿರಾಜಪೇಟೆ, ಅಮ್ಮತ್ತಿ, ಬೆಂಗಳೂರು, ತವಳಗೇರಿ ಮೂಂದ್‌ನಾಡ್, ಟಿ.ಶೆಟ್ಟಿಗೇರಿ, ನಾಪೋಕ್ಲು ಸಮಾಜಗಳು ಬೆಂಬಲ ಘೋಷಿಸಿವೆ.

ಬಿಜೆಪಿ, ಕೊಡಗು ಜಿಲ್ಲಾ ರೋಮನ್ ಕ್ಯಾಥೊಲಿಕ್ ಅಸೋಸಿಯೇಷನ್, ಕೊಡಗು ಮುಸ್ಲಿಂ ಅಸೋಸಿಯೇಷನ್, ಕೇಸರಿ ಯೂತ್ ಮೂವ್‌ಮೆಂಟ್ ಸೇವಾ ಸಮಿತಿ, ಪೊಂಬೊಳ್ಚ ಕೂಟ ವಿರಾಜಪೇಟೆ, ರೂಟ್ಸ್ ಆಫ್ ಕೊಡಗು, ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘ ವಿರಾಜಪೇಟೆ, ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್, ಕೊಡವ ಪೊಮ್ಮಕ್ಕಡ ಕೂಟ, ಗ್ರಾಮಸ್ಥರು, ಆರ್ಜಿ ಗ್ರಾಮ, ಗ್ರಾಮಸ್ಥರು, ಕದನೂರು ಗ್ರಾಮ, ಗೋಣಿಕೊಪ್ಪ ಕಾವೇರಿ ಪೊಮ್ಮಕ್ಕಡ ಕೂಟ, ಕೊಡಗು ವೆಲ್ಫೇರ್ ಅಸೋಸಿಯೇಷನ್ ಬೆಂಗಳೂರು, ಕೊಡವ ಕೂಟಾಳಿಯಡ ಕೂಟ, ಚಿನ್ನ- ಬೆಳ್ಳಿ ವರ್ತಕರ ಸಂಘ, ಗೋಣಿಕೊಪ್ಪ, ಪಿಪಿಕೆ ಪ್ರತೀಕ್ ಪೊನಣ್ಣ, ಸೇವ್ ರಿವರ್ ಕಾವೇರಿ ಕೊಡಗು, ಚೇಂಬರ್ ಆಫ್ ಕಾಮರ್ಸ್ ಪೊನ್ನಂಪೇಟೆ, ಕುಶಾಲ ಕುಂಬಾರ ಸಂಘ ಕೊಡಗು, ಕೊಡವ ಟಗ್ ಆಫ್ ವಾರ್ ಅಕಾಡೆಮಿ ಕೊಡಗು, ಉಳ್ಳಿಯಡ ಎಂ. ಪೂವಯ್ಯ, ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ), ತಿರಿ ಬೊಳ್ಚ ಕೂಟ, ಮಡಿಕೇರಿ, ಕೊಡವ ಬೈಕರ್ಸ್ ಅಸೋಸಿಯೇಷನ್, ಕೊಡಗು, ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘ ಕೈಕೇರಿ, ಕೊಡಗು ರಕ್ಷಣಾ ವೇದಿಕೆ, ಕೊಡಗು ತಮಿಳ್ ಯೂತ್ ಫೆಡರೇಷನ್, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್, ಬೆಪ್ಪು ನಾಡ್ ಕೊಡವ ಸಂಘ, ಅರಮೇರಿ, ಕೊಡಗು ಹೊಟೇಲ್, ರೆಸ್ಟೋರೆಂಟ್ ಮತ್ತು ರೆಸಾರ್ಟ್ ಮಾಲೀಕರ ಸಂಘ, ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್, ಕೊಡಗು, ಮಿಷನ್ ಮೋದಿ ಡೆಮಾಕ್ರಸಿ ಡೆವೆಲಪ್ ಮೆಂಟ್ ಟ್ರಸ್ಟ್ ಮೈಸೂರು ಜಿಲ್ಲೆ ಪ್ರಭಾರಿ ಕೊಡಗು ಜಿಲ್ಲೆ, ಗೋಣಿಕೊಪ್ಪ ಪ್ರಗತಿ ಅಟೋ ಚಾಲಕರ ಹಾಗೂ ಮಾಲೀಕರ ಸಂಘ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿದೆ.

...................

ಬಂದ್‌ ಹಿನ್ನೆಲೆಯಲ್ಲಿ ಈ ಕೆಳಗಿನ ಸೇವೆಗಳು ಇರುವುದಿಲ್ಲ:

ಹೊಟೇಲ್, ಆಟೋ, ಅಂಗಡಿ ಮುಂಗಟ್ಟು, ಅನುದಾನ ರಹಿತ ಶಾಲೆಗಳು, ಖಾಸಗಿ ಬಸ್‌ಗಳು

ಬಂದ್‌ ಕರೆ ಹೊರತೂ ಈ ಸೇವೆಗಳು ಇರುತ್ತವೆ...

ಮೆಡಿಕಲ್, ಆಸ್ಪತ್ರೆ, ಪೆಟ್ರೋಲ್ ಬಂಕ್‌ಗಳು, ಸರ್ಕಾರಿ ಶಾಲೆಗಳು, ಸರ್ಕಾರಿ ಬಸ್‌ಗಳು ಎಂದಿನಂತೆ ಕಾರ್ಯಾಚರಿಸಲಿವೆ.

Share this article