ಮಡಿಕೇರಿ: ಕೊಡಗು ಗೌಡ ನಿವೃತ್ತ ನೌಕರರ ಸಂಘದ ವತಿಯಿಂದ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮುದಾಯದ ವಧು-ವರರ ಸಮಾವೇಶವನ್ನು ಜೂ.13 ರಂದು ಕೊಡಗು ಗೌಡ ಸಮಾಜ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಚೊಕ್ಕಾಡಿ.ಎಸ್.ಅಪ್ಪಯ್ಯ ತಿಳಿಸಿದರು.
ಜಿಲ್ಲೆಯಲ್ಲಿ ರೈತಾಪಿ ವರ್ಗದ ಯುವಕರಿಗೆ ಯುವತಿಯರು ಇಂದು ಸಿಗುತ್ತಿಲ್ಲ. ಯುವತಿಯರು ನಗರ ಪ್ರದೇಶದತ್ತ ಆಕರ್ಷಿತರಾಗಿ ಅತ್ತ ಮುಖ ಮಾಡುತ್ತಿದ್ದಾರೆ. ಪರಿಣಾಮ ರೈತಾಪಿ ಯುವಕರಿಗೆ ಯುವತಿಯರು ಸಿಗುತ್ತಿಲ್ಲ. ಆದ್ದರಿಂದ ಗೌಡ ನಿವೃತ್ತ ನೌಕರರ ಸಂಘದ ವತಿಯಿಂದ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮುದಾಯದ ವಧು-ವರರ ಸಮಾವೇಶವನ್ನು ಆಯೋಜಿಸಲಾಗಿದೆ. ಆನ್‌ಲೈನ್ ನೋಂದಣಿಗೆ appaiahchokkadira1@gmail.com ಅಥವಾ ಹೆಚ್ಚಿನ ಮಾಹಿತಿಗೆ 9448884673 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದರು.
ಕೊಡಗು ಗೌಡ ನಿವೃತ್ತ ನೌಕರರ ಸಂಘದ ಖಜಾಂಚಿ ಕುಯ್ಯಮುಡಿ ಅಶ್ವಿನಿ ಕುಮಾರ್ ಮಾತನಾಡಿ, ಇಂದು ಸಂಬಂಧಗಳು ವೇಗವಾಗಿ ಹಾಳಾಗುತ್ತಿದೆ. ಇಂದು ಮದುವೆ ಆಗುತ್ತಾರೆ. ನಾಳೆ ವಿಚ್ಛೇದನಕ್ಕೆ ಸಲ್ಲಿಸುವ ಪ್ರಕರಣಗಳು ಕಾಣುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಸೆಟ್ಟೆಜ್ಜನ ಗಣಪತಿ, ಕಾರ್ಯದರ್ಶಿ ಕುಂಜಿಲನ ರತ್ನಕುಮಾರಿ, ಕಟ್ರತನ ಲಲಿತ ಅಯ್ಯಣ್ಣ, ಪ್ರಮುಖರಾದ ಸೂರ್ತಲೆ ರಾಮಚಾರಿ ಇದ್ದರು.