ಉಡುಪಿ ಜಯಕರ್ನಾಟಕ ಸಂಘಟನೆ ಅಧ್ಯಕ್ಷರಾಗಿ ಲೂವಿಸ್ ಎಂ. ಆಯ್ಕೆ

KannadaprabhaNewsNetwork |  
Published : Jun 09, 2026, 02:45 AM IST
08ಜಯಕರ್ನಾಟಕ | Kannada Prabha

ಸಾರಾಂಶ

ಜಯ ಕರ್ನಾಟಕದ ಜಿಲ್ಲಾ ಶಾಖೆಯನ್ನು ಪುನಃಶ್ಚೇತನಗೊಳಿಸುವ ದಿಸೆಯಲ್ಲಿ ಕಾರ್ಯಪ್ರವೃತ್ತವಾಗುವ ‌ಸದುದ್ದೇಶದಿಂದ 2026ರ ಜೂ. 7ರಂದು ಇಲ್ಲಿನ ಸನಿಲ್ ಪ್ಲಾಜದಲ್ಲಿ ಸಮಾಲೋಚನಾ ಸಭೆ ಸುಧಾಕರ್ ರಾವ್ ಬಾರ್ಕೂರು ನೇತೃತ್ವದಲ್ಲಿ ಜರುಗಿತು.

ಉಡುಪಿ: ಜಯ ಕರ್ನಾಟಕದ ಜಿಲ್ಲಾ ಶಾಖೆಯನ್ನು ಪುನಃಶ್ಚೇತನಗೊಳಿಸುವ ದಿಸೆಯಲ್ಲಿ ಕಾರ್ಯಪ್ರವೃತ್ತವಾಗುವ ‌ಸದುದ್ದೇಶದಿಂದ 2026ರ ಜೂ. 7ರಂದು ಇಲ್ಲಿನ ಸನಿಲ್ ಪ್ಲಾಜದಲ್ಲಿ ಸಮಾಲೋಚನಾ ಸಭೆ ಸುಧಾಕರ್ ರಾವ್ ಬಾರ್ಕೂರು ನೇತೃತ್ವದಲ್ಲಿ ಜರುಗಿತು. ಲೂವಿಸ್ ಎಮ್. ಅಧ್ಯಕ್ಷರಾಗಿ, ನಿತ್ಯಾನಂದ ಅಮೀನ್ ಕಾರ್ಯದರ್ಶಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಜಯಕರ್ನಾಟಕದ ಸ್ಥಾಪಕಾಧ್ಯಕ್ಷ ಮುತ್ತಪ್ಪ ರೈ ಅವರ ಸಲಹೆ, ಮಾರ್ಗದರ್ಶನದಂತೆ ಉಡುಪಿ ಜಿಲ್ಲಾ ಜಯಕರ್ನಾಟಕ ಸಂಘಟನೆಯು ಅತ್ಯಗತ್ಯ ಇರುವ ಅರ್ಹ ಜನರಿಗೆ ಸಹಕಾರ ನೀಡುವ ಸತ್ಕಾರ್ಯ ನಿರ್ವಹಿಸುತ್ತಿತ್ತು. ರೈಯವರು ಅಸ್ತಂಗತರಾದ ನಂತರ ಬೇರೆ ಬೇರೆ ಕಾರಣಗಳಿಂದಾಗಿ ‌ಚಟುವಟಿಕೆ ಕುಂಠಿತಗೊಂಡಿತ್ತು. ಪ್ರಾರಂಭದಲ್ಲಿ ಮುತ್ತಪ್ಪ ರೈ ಅವರ ಬೆಂಬಲ, ಸಹಕಾರವನ್ನು ನೆನಪಿಸಿ ಅವರ ಆತ್ಮಕ್ಕೆ ಶಾಂತಿಗಾಗಿ ಪ್ರಾರ್ಥಿಸಿ ಮೌನ ಆಚರಿಸಲಾಯಿತು.

ನಿತ್ಯಾನಂದ ಅಮೀನ್, ಲೋಕೇಶ್ ಹೆಗ್ಡೆ, ಲೂವಿಸ್ ಎಂ., ಕರುಣಾಕರ ಪೂಜಾರಿ, ಸುಬ್ರಮಣ್ಯ, ಪ್ರಶಾಂತ್, ಪ್ರತಾಪ್ ಶೆಟ್ಟಿ, ನಾಗರಾಜ ಗಾಣಿಗ, ರತ್ನಾಕರ್ ಹಾವಂಜೆ, ಪ್ರದೀಪ್ ಕಲ್ಮಾಡಿ, ಗಿರೀಶ್ ಕಲ್ಮಾಡಿ, ವಿವೇಕ್ ಕಲ್ಮಾಡಿ, ನೀತಿನ್ ಕುಂದರ್, ಸುಬ್ರಹ್ಮಣ್ಯ ಬೈಂದೂರು, ಮಾಣಿಕ್ಯ ಬೈಂದೂರು, ಶಂಕರ ಶೆಟ್ಟಿ, ಪ್ರಕಾಶ್ ಶೆಟ್ಟಿ, ಮತ್ತು ಶ್ರೀನಿವಾಸ ಶೆಟ್ಟಿ ತೋನ್ಸೆ ಸಾಂದರ್ಭಿಕ ಸೂಕ್ತ ಸಲಹೆಯನ್ನಿತ್ತು ಸಹಕರಿಸಿದರು. ನಿತ್ಯಾನಂದ ಅಮೀನ್ ಸ್ವಾಗತಿಸಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಐಗೂರು ಪ್ರೌಢಶಾಲೆ: ಕಿಚನ್‌ ಗಾರ್ಡನ್‌ಗೆ ಚಾಲನೆ
ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ. ರಾಜೇಂದ್ರ ಕುಮಾರ್‌ಗೆ ಸನ್ಮಾನ