ಕನ್ನಡಪ್ರಭ ವಾರ್ತೆ ಸಿದ್ದಾಪುರ
ಮೂರು ವಲಯಗಳ ನಡುವೆ ನಡೆದ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಸಿದ್ದಾಪುರ ವಲಯ 337 ಅಂಕಗಳೊಂದಿಗೆ ಚಾಂಪಿಯನ್ ಪ್ರಶಸ್ತಿ ಪಡೆಯಿತು.
ಕುಶಾಲನಗರ ವಲಯ 292 ಅಂಕಗಳನ್ನು ಪಡೆದು ದ್ವಿತೀಯ ಮತ್ತು 266 ಅಂಕಗಳನ್ನು ಪಡೆದು ವಿರಾಜಪೇಟೆ ತೃತೀಯ ಸ್ಥಾನ ಪಡೆಯಿತು. ಸಿದ್ದಾಪುರ ವಲಯ ಸೀನಿಯರ್ ವಿಭಾಗದಲ್ಲಿ 104 ಮತ್ತು ಸೂಪರ್ ಸೀನಿಯರ್ ವಿಭಾಗದಲ್ಲಿ 94 ಅಂಕ ಪಡೆದು ಎರಡೂ ವಿಭಾಗದಲ್ಲಿ ಕೂಡ ಚಾಂಪಿಯನ್ ಪಟ್ಟ ಅಲಂಕರಿಸಿದರು.ವಿರಾಜಪೇಟೆ ವಲಯ 78 ಅಂಕಗಳನ್ನು ಪಡೆದು ಜೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯಿತು.
ಫೆಸ್ಟ್ ಐಕಾನ್ ಪ್ರಶಸ್ತಿ:
ಜೂನಿಯರ್ ವಿಭಾಗದಲ್ಲಿ ಸಿದ್ದಾಪುರ ವಲಯದ ನಿಹಾಲ್ (38) ಅಂಕ, ಸೀನಿಯರ್ ವಿಭಾಗದಲ್ಲಿ ವಿರಾಜಪೇಟೆ ವಲಯದ ತೌಫೀಕ್ (22) ಅಂಕ ಹಾಗೂ ಸೂಪರ್ ಸೀನಿಯರ್ ವಿಭಾಗದಲ್ಲಿ ಸಿದ್ದಾಪುರ ವಲಯದ ಇಸ್ಮಾಯಿಲ್ ಕಂಡಕರೆ 28 ಅಂಕಗಳನ್ನು ಪಡೆದು ಫೆಸ್ಟ್ ಐಕಾನ್ ಪ್ರಶಸ್ತಿ ಪಡೆದುಕೊಂಡರು.
ಜೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ ನಡೆದ ತ್ವಲಬಾ ವಿಭಾಗದ ಸ್ಪರ್ಧೆಯಲ್ಲಿ ಕುಶಾಲನಗರ ವಲಯ 199 ಅಂಕಗಳನ್ನು ಪಡೆದು ಚಾಂಪಿಯನ್ ಪಟ್ಟ ಅಲಂಕರಿಸಿತು.
ತ್ವಲಬಾ ವಿಭಾಗದ ಜೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ ಕುಶಾಲನಗರ ವಲಯವು ಚಾಂಪಿಯನ್ ಪಟ್ಟ ಪಡೆಯಿತು.
ಕೊಡಗು ಜಿಲ್ಲಾ ಮಟ್ಟದ ಇಸ್ಲಾಮಿಕ್ ಕಲೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ಪ್ರತಿಭೆಗಳು ಡಿ. 14 ಮತ್ತು 15ರಂದು ಮೈಸೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಇಸ್ಲಾಮಿಕ್ ಕಲೋತ್ಸವದಲ್ಲಿ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.