ಕೇಂದ್ರ ಸಚಿವ ವಜಾಕ್ಕೆ ಕೊಡಗು ಮಹಿಳಾ ಕಾಂಗ್ರೆಸ್ ಆಗ್ರಹ

KannadaprabhaNewsNetwork |  
Published : Mar 01, 2026, 03:15 AM IST
 | Kannada Prabha

ಸಾರಾಂಶ

ಮಡಿಕೇರಿ ನಗರದ ಇಂದಿರಾ ಗಾಂಧಿ ವೃತ್ತದಿಂದ ಮೊಂಬತ್ತಿ ಹಿಡಿದು ಹಳೆ ಖಾಸಗಿ ಬಸ್ ನಿಲ್ದಾಣದವರೆಗೆ ಮೆರವಣಿಗೆ ಮೂಲಕ ಸಾಗಿದ ಪ್ರತಿಭಟನಾಕಾರರು ಹರ್ ದೀಪ್ ಸಿಂಗ್ ಪುರಿ, ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಗಂಭೀರ ಆರೋಪ ಎದುರಿಸುತ್ತಿರುವ ಜೆಫ್ರಿ ಎಫ್‌ಸ್ಟೀನ್‌ ಜೊತೆ ಸಂಪರ್ಕ ಹೊಂದಿರುವ ಟೀಕೆಗೆ ಗುರಿಯಾಗಿರುವ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಹಾಗೂ ಬಿಜೆಪಿ ಮುಖಂಡ ಹರ್ ದೀಪ್ ಸಿಂಗ್ ಪುರಿ ಅವರನ್ನು ತಕ್ಷಣ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಮತ್ತು ಬಂಧಿಸಬೇಕು ಎಂದು ಒತ್ತಾಯಿಸಿ ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ನಗರದಲ್ಲಿ ಪ್ರತಿಭಟನೆ ನಡೆಸಿತು.

ಶುಕ್ರವಾರ ಸಂಜೆ ಮಡಿಕೇರಿ ನಗರದ ಇಂದಿರಾ ಗಾಂಧಿ ವೃತ್ತದಿಂದ ಮೊಂಬತ್ತಿ ಹಿಡಿದು ಹಳೆ ಖಾಸಗಿ ಬಸ್ ನಿಲ್ದಾಣದವರೆಗೆ ಮೆರವಣಿಗೆ ಮೂಲಕ ಸಾಗಿದ ಪ್ರತಿಭಟನಾಕಾರರು ಹರ್ ದೀಪ್ ಸಿಂಗ್ ಪುರಿ, ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಜಿ.ಆರ್. ಪುಷ್ಪಲತಾ ಮಾತನಾಡಿ, ಬಾಲಕಿಯರನ್ನು ಅಪಹರಿಸಿ ಪ್ರಭಾವಿಗಳನ್ನು ಅಪರಾಧ ಕೃತ್ಯದಲ್ಲಿ ಭಾಗಿಯಾಗುವಂತೆ ಮಾಡಿದ ಆರೋಪ ಎದುರಿಸುತ್ತಿರುವ ಜೆಫ್ರಿ ಎಫ್‌ಸ್ಟೀನ್ ನೊಂದಿಗೆ ಕೇಂದ್ರ ಸಚಿವ ಸಂಪರ್ಕ ಹೊಂದಿರುವುದು ಬಹಿರಂಗವಾಗಿದ್ದರೂ ಅವರನ್ನು ಪ್ರಧಾನಿಯವರು ಸಚಿವ ಸಂಪುಟದಲ್ಲಿ ಯಾಕೆ ಮುಂದುವರೆಸಿದ್ದಾರೆ ಎಂದು ಪ್ರಶ್ನಿಸಿದರು. ಹರ್ ದೀಪ್ ಸಿಂಗ್ ಪುರಿ ಬಂಧನವಾಗುವವರೆಗೆ ಮಹಿಳಾ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದು ತಿಳಿಸಿದರು.

ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಮಾತನಾಡಿ, ಎಫ್‌ಸ್ರೀನ್‌ ಫೈಲ್ ನಲ್ಲಿ ಹೆಸರು ಬಹಿರಂಗಗೊಂಡಿರುವ ಬ್ರಿಟನ್ ಮಾಜಿ ಯುವರಾಜ ಸಹಿತ ಅನೇಕ ದೇಶದ ಪ್ರಮುಖ ವ್ಯಕ್ತಿಗಳ ಬಂಧನವಾಗಿದೆ. ವಿಶ್ವ ಸಂಸ್ಥೆ ಮತ್ತು ಅಮೆರಿಕದ ಸೆನೆಟ್ ಸದಸ್ಯರು ರಾಜೀನಾಮೆ ನೀಡಿದ್ದಾರೆ. ಆದರೆ ಭಾರತದ ಗೌರವಕ್ಕೆ ಧಕ್ಕೆ ತಂದಿರುವ ಸಚಿವರ ವಿರುದ್ಧ ಕ್ರಮ ಕೈಗೊಳ್ಳದೆ ಪ್ರಧಾನಮಂತ್ರಿಗಳು ಮೌನಕ್ಕೆ ಜಾರಿರುವುದು ಸರಿಯಲ್ಲ ಎಂದರು.

ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಶಿ, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ, ಕೆಪಿಸಿಸಿ ಸದಸ್ಯರಾದ ಬೇಕಲ್ ರಮಾನಾಥ್, ಕೊಕ್ಕಂಡ ರೂಪಾ ಭೀಮಯ್ಯ, ಪ್ರಮುಖರಾದ ಸುನಿತಾ ಮಂಜುನಾಥ್, ಪಂಕಜ, ಶ್ರೀಜಾ ಸಾಜಿ, ಆಶಾ ಪೂಣಚ್ಚ, ಸುಮಿತಾ ಎಂ.ಜಿ. ಧನ್ಯ, ಸುನಿತಾ ರಾಜನ್, ಪಾರ್ವತಿ ಫ್ಯಾನ್ಸಿ, ಲೀಲಾ ಶೇಷಮ್ಮ, ಶಿವಮ್ಮ, ಮೀನಾಜ್ ಪ್ರವೀಣ್, ಶ್ರೀಮತಿ ಬಂಗೇರ, ವೀಣಾಕ್ಷಿ, ಜಯಮ್ಮ, ಭಾಗ್ಯಮ್ಮ, ಸವಿತ, ವಿಮಲ, ಉದಯ ಚಂದ್ರಿಕ, ಪವಿತ್ರ, ಜಿ.ಸಿ. ಜಗದೀಶ್, ಮಂಡಿರ ಸದಾ ಮುದ್ದಪ್ಪ, ಚಂದ್ರಶೇಖರ್, ಕವನ್ ಕೊತ್ತೋಳಿ, ದಿನೇಶ್ ಕೆ.ಆರ್. ನಿರಂಜನ್, ಅರ್ಜುನ್, ಶರಣ್, ಸುರೇಶ್, ಪ್ರತಾಪ್ ಸೇರಿದಂತೆ ಅನೇಕ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಂಸ್ಕೃತಿಕ ಸಂಘಟನೆಗೆ ಮತ್ತೊಂದು ಹೆಸರು ಸುಮನಸಾ: ಡಾ. ತಲ್ಲೂರು
ಬ್ರಹ್ಮರ ಕೂಟ್ಲು ಟೋಲ್ ವಿರುದ್ಧ 3ರಂದು ಬೃಹತ್ ಪ್ರತಿಭಟನೆ