ಕೊಡಗು-ಮೈಸೂರು ಚೆಕ್‌ಪೋಸ್ಟ್‌: ಬಸ್‌ಗಳ ತಪಾಸಣೆ

KannadaprabhaNewsNetwork |  
Published : Mar 25, 2024, 12:48 AM IST
ಸರಕಾರಿ ಬಸ್ಗಳ ತಪಾಸಣೆ ಸಂದರ್ಭ | Kannada Prabha

ಸಾರಾಂಶ

ಮೈಸೂರು ಕಡೆಯಿಂದ ತಪಾಸಣಾ ಕೇಂದ್ರ ಮೂಲಕ ಮಡಿಕೇರಿ ಕಡೆಗೆ ತೆರಳುತ್ತಿದ್ದ ಬಸ್‌ಗಳಲ್ಲಿ ಪ್ರಯಾಣಿಕರ ಲಗೇಜ್‌ಗಳನ್ನು ತಪಾಸಣೆಗೆ ಒಳಪಡಿಸಿ ಅಕ್ರಮ ಹಣ ಸಾಗಾಟದ ಬಗ್ಗೆ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕೊಡಗು-ಮೈಸೂರು ಜಿಲ್ಲೆಗಳ ಗಡಿಭಾಗ ಕುಶಾಲನಗರದ ವಾಹನ ತಪಾಸಣಾ ಕೇಂದ್ರದಲ್ಲಿ ಚುನಾವಣಾ ಅಧಿಕಾರಿಗಳು, ಸಿಬ್ಬಂದಿ ಸರ್ಕಾರಿ ಬಸ್‌ಗಳನ್ನು ನಿಲ್ಲಿಸಿ ಪರಿಶೀಲನೆ ನಡೆಸಿದರು.ಕುಶಾಲನಗರ ಪಟ್ಟಣ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್‌ ಪ್ರಕಾಶ್ ಮತ್ತು ಚುನಾವಣಾ ಅಧಿಕಾರಿ ಟಿ.ವೆಂಕಟೇಶ್ ನೇತೃತ್ವದಲ್ಲಿ ಮೈಸೂರು ಕಡೆಯಿಂದ ತಪಾಸಣಾ ಕೇಂದ್ರ ಮೂಲಕ ಮಡಿಕೇರಿ ಕಡೆಗೆ ತೆರಳುತ್ತಿದ್ದ ಬಸ್‌ಗಳಲ್ಲಿ ಪ್ರಯಾಣಿಕರ ಲಗೇಜ್‌ಗಳನ್ನು ತಪಾಸಣೆಗೆ ಒಳಪಡಿಸಿ ಅಕ್ರಮ ಹಣ ಸಾಗಾಟದ ಬಗ್ಗೆ ಪರಿಶೀಲನೆ ನಡೆಸಿದರು.

ಮೈಸೂರು ಕುಶಾಲನಗರ ಮೂಲಕ ಸಾಗುವ ವಾಹನಗಳ ತಪಾಸಣೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಗಡಿ ಭಾಗದಿಂದ ಕೊಪ್ಪ ಕಡೆಗೆ ಉದ್ದಕ್ಕೂ ವಾಹನಗಳು ಸಾಲಾಗಿ ನಿಂತಿದ್ದ ದೃಶ್ಯ ಗೋಚರಿಸಿತು.ಸಿದ್ದಾಪುರ: ಬಿಜೆಪಿ ಕಾರ್ಯಕರ್ತರ ಸಭೆ

ಪ್ರಧಾನಿ ನರೇಂದ್ರ ಮೋದಿ ಭಾರತದ ಪರಂಪರೆಯನ್ನು ರಕ್ಷಿಸುತ್ತ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯುತ್ತಿದ್ದಾರೆ ಎಂದು ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.ಸಿದ್ದಾಪುರ ಎಸ್ ಎನ್ ಡಿ ಪಿ ಸಭಾಂಗಣದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಸುವರ್ಣ ಯುಗಕ್ಕೆ ಮುನ್ನುಡಿ ಬರೆದಿದ್ದು ಭಾರತವನ್ನು ಅಭಿವೃದ್ಧಿ ಪಡಿಸಿದ್ದಾರೆ ಎಂದರು.ಮಾಜಿ ಶಾಸಕ ಕೆ ಜಿ ಬೋಪಯ್ಯ ಮಾತನಾಡಿದರು. ನಿಗದಿತ ಸಮಯಕ್ಕಿಂತ ತಡವಾಗಿ ಆಗಮಿಸಿದ ಯದುವೀರ್ ಓಡೆಯರಿಗೆ ಪಾಲಿಬೆಟ್ಟ ರಸ್ತೆಯಿಂದ ಚಂಡೆ ಮೇಳ ಹಾಗೂ ದೀಪ ಹಿಡಿದ ಮಹಿಳೆಯರು ಅಭೂತಪೂರ್ವವಾಗಿ ಸ್ವಾಗತಿಸಲಾಯಿತು.

ಈ ಸಂದರ್ಭ ಎಂಎಲ್ಸಿ ಸುಜಾ ಕುಶಾಲಪ್ಪ, ಪಕ್ಷದ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಕಾರ್ಯದರ್ಶಿ ನೆಲ್ಲಿರ ಚಲನ್, ವಿ ಕೆ ಲೋಕೇಶ್, ಅಪ್ರು ರವಿಂದ್ರ, ಸುವಿನ್ ಗಣಪತಿ ಸೇರಿದಂತೆ ಇತರೆ ನಾಯಕರು, ಸಿದ್ದಾಪುರ, ನೆಲ್ಯಹುದಿಕೇರಿ, ಮಾಲ್ದಾರೆ, ಚೆನ್ನಯ್ಯನಕೋಟೆ, ಇಂಜಿಲಗೆರೆ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ ಕಾರ್ಯಕರ್ತರು ಇದ್ದರು.ಚುನಾವಣಾ ಅಧಿಕಾರಿಗಳ ತಂಡದ ಸದಸ್ಯರಾದ ವಿಜಯಾನಂದ, ಮಂಜು, ಪಿಎಸ್ಐ ಬಿ.ಎಸ್. ಉಮಾ, ಪೊಲೀಸ್ ಸಿಬ್ಬಂದಿ ಸಿದ್ದರಾಜು, ಮಹೇಶ್, ಜಯಪ್ರಕಾಶ್ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಬಸವಣ್ಣ ಜೀವ ವೈವಿಧ್ಯ ಉದ್ಯಾನವನ
ಕೆಎಂಎಫ್‌ನಲ್ಲಿ ಉದ್ಯೋಗದ ನೆಪದಲ್ಲಿ50 ಲಕ್ಷ ವಂಚನೆ:ಇಬ್ಬರ ವಿರುದ್ಧ ಕೇಸ್‌