ಕನ್ನಡಪ್ರಭ ವಾರ್ತೆ ಮಡಿಕೇರಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಕಕಾಲದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಅರಣ್ಯ ಹಕ್ಕು ಕೋಶವನ್ನು ಉದ್ಘಾಟಿಸಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಮಾರ್ಗದರ್ಶನದಲ್ಲಿ ನಗರದ ಜಿ.ಪಂ. ಭವನದ ಐಟಿಡಿಪಿ ಕಚೇರಿಯಲ್ಲಿ ಅರಣ್ಯಹಕ್ಕು ಕೋಶ ತೆರೆಯಲಾಗಿದೆ. ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ಈ ಕೋಶ ಕಾರ್ಯನಿರ್ವಹಿಸಲಿದ್ದು, ಈಗಾಗಲೇ ಅರಣ್ಯ ಹಕ್ಕುಪತ್ರವನ್ನು ಪಡೆದಿರುವ ಕುಟುಂಬಗಳಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವುದು ಮತ್ತು ಸಂಗ್ರಹವಾಗಿರುವ ದತ್ತಾಂಶಗಳನ್ನು ಡಿಜಿಟಲೀಕರಣಗೊಳಿಸುವುದು ಅರಣ್ಯ ಹಕ್ಕು ಕೋಶದ ಪ್ರಮುಖ ಕಾರ್ಯವಾಗಿರುತ್ತದೆ ಎಂದು ಮಾಹಿತಿ ನೀಡಿದರು.ಅರಣ್ಯ ಹಕ್ಕು ಪತ್ರ ಹೊಂದಿಲ್ಲದವರ ಮತ್ತು ಅರ್ಜಿ ಸಲ್ಲಿಸಿ ತಿರಸ್ಕೃತಗೊಂಡಿರುವ ಕುಟುಂಬಗಳ ಕುರಿತು ಪುನರ್ ಪರಿಶೀಲನೆ ನಡೆಸಿ ಅರ್ಹ ಅರಣ್ಯವಾಸಿಗಳಿಗೆ ಅಗತ್ಯ ಸೌಕರ್ಯ ಒದಗಿಸಲು ಅರಣ್ಯ ಹಕ್ಕು ಕೋಶ ಪೂರಕವಾಗಿದೆ ಎಂದು ತಿಳಿಸಿದರು.
ಈ ಕುರಿತಂತೆ ಯಾವುದೇ ದೂರು, ಸಲಹೆ ಮತ್ತು ಮಾಹಿತಿಗಳು ಬೇಕಿದ್ದಲ್ಲಿ ನೋಡಲ್ ಅಧಿಕಾರಿ ದೇವರಾಜ್ 9108813845, ಸಹಾಯಕ ನೋಡಲ್ ಅಧಿಕಾರಿ ಆಶಿಕ್ 8861957577, ತಾಂತ್ರಿಕ ಸಂಯೋಜಕರಾದ ಮಾದಯ್ಯ 9845771807, ತಾಂತ್ರಿಕ ಸಹಾಯಕ ಸಂಯೋಜಕರಾದ ಸಂಜಯ್ 7348841734 ರವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಎಸ್.ಹೊನ್ನೇಗೌಡ ಅವರು ತಿಳಿಸಿದ್ದಾರೆ.