ಭಜನಾ ಕಾರ್ಯಕ್ರಮದಲ್ಲಿ ಕೋದಂಡರಾಮ್ ಭಾಗಿ

KannadaprabhaNewsNetwork |  
Published : Jan 12, 2026, 01:45 AM IST
ಹೊಳೆನರಸೀಪುರದ ದೇವಾಂಗ ಜನಾಂಗದವರು ಧನುರ್ಮಾಸದಲ್ಲಿ ನಡೆಸುವ ಭಜನಾ ಕಾರ್ಯಕ್ರಮದಲ್ಲಿ ಶನಿವಾರ ತಿರುಪತಿ ತಿರುಮಲ ಕರ್ನಾಟಕ ಭವನದ ವಿಶೇಷ ಅಧಿಕಾರಿ ಕೆ.ಕೋದಂಡರಾಮ್ ಅವರನ್ನು ದೇವಾಂಗ ಯುವಕ ಸಂಘದ ಅಧ್ಯಕ್ಷ ಶಂಕರ್ ಸನ್ಮಾನಿಸಿದರು. ಎಚ್.ವಿ.ಸುರೇಶ್ ಕುಮಾರ್, ಕುಮಾರ್, ಮೋಹನ್ ಇದ್ದರು. | Kannada Prabha

ಸಾರಾಂಶ

ದೇವಾಂಗ ಜನಾಂಗದ ಧನುರ್ಮಾಸದ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ತಿರುಪತಿಯಿಂದ ಆಗಮಿಸಿದ್ದ ಶ್ರೀಯುತರನ್ನು ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ದೇವಾಂಗ ಯುವಕ ಸಂಘದ ಅಧ್ಯಕ್ಷ ಶಂಕರ್ ಹಾಗೂ ಸದಸ್ಯರು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕೋಡಂಡರಾಮ್ ಆಧ್ಯಾತ್ಮ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸ್ಸಿಗೆ ನೆಮ್ಮದಿ ಎನಿಸುತ್ತದೆ. ಧನುರ್ಮಾಸದಲ್ಲಿ ಜನರು ದೇವಾಲಯಗಳಿಗೆ ಬೆಳಗಿನ ಜಾವ ಭೇಟಿ ನೀಡಿ ಸಂಕಲ್ಪ ಮಾಡಿಕೊಳ್ಳುತ್ತಾರೆ. ತಿರುಮಲದ ವೆಂಕಟೇಶ್ವರನಿಗೂ ಧನುರ್ಮಾಸದಲ್ಲಿ ವೈಕುಂಠ ಏಕಾದಶಿ ಪೂಜೆ ಮಾಡುತ್ತಾರೆ ಎಂದರು.

ಹೊಳೆನರಸೀಪುರ ಪಟ್ಟಣದ ದೇವಾಂಗ ಜನಾಂಗದವರು ಧನುರ್ಮಾಸದ ಬ್ರಾಹ್ಮಿ ಮಹೂರ್ತದಲ್ಲಿ ಒಂದು ತಿಂಗಳ ಕಾಲ ನಡೆಸುವ ಭಜನಾ ಕಾರ್ಯಕ್ರಮದಲ್ಲಿ ತಿರುಪತಿ ತಿರುಮಲ ಕರ್ನಾಟಕ ಭವನದ ವಿಶೇಷಾಧಿಕಾರಿ ಕೆ. ಕೋದಂಡರಾಮ್ ಭಾಗವಹಿಸಿ ಭಕ್ತಿ ಸಮರ್ಪಿಸಿದರು.ದೇವಾಂಗ ಜನಾಂಗದ ಧನುರ್ಮಾಸದ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ತಿರುಪತಿಯಿಂದ ಆಗಮಿಸಿದ್ದ ಶ್ರೀಯುತರನ್ನು ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ದೇವಾಂಗ ಯುವಕ ಸಂಘದ ಅಧ್ಯಕ್ಷ ಶಂಕರ್ ಹಾಗೂ ಸದಸ್ಯರು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕೋಡಂಡರಾಮ್ ಆಧ್ಯಾತ್ಮ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸ್ಸಿಗೆ ನೆಮ್ಮದಿ ಎನಿಸುತ್ತದೆ. ಧನುರ್ಮಾಸದಲ್ಲಿ ಜನರು ದೇವಾಲಯಗಳಿಗೆ ಬೆಳಗಿನ ಜಾವ ಭೇಟಿ ನೀಡಿ ಸಂಕಲ್ಪ ಮಾಡಿಕೊಳ್ಳುತ್ತಾರೆ. ತಿರುಮಲದ ವೆಂಕಟೇಶ್ವರನಿಗೂ ಧನುರ್ಮಾಸದಲ್ಲಿ ವೈಕುಂಠ ಏಕಾದಶಿ ಪೂಜೆ ಮಾಡುತ್ತಾರೆ. ಈ ದಿನಗಳಲ್ಲಿ ದೇಶ ವಿದೇಶಗಳ ಲಕ್ಷಾಂತರ ಜನರು ತಿರುಪತಿಗೆ ಬಂದು ವೆಂಕಟೇಶ್ವರಸ್ವಾಮಿಯ ದರ್ಶನ ಮಾಡುತ್ತಾರೆ ಎಂದು ತಿಳಿಸಿ, ತಿರುಪತಿಯಿಂದ ತಂದಿದ್ದ ಲಾಡು ಪ್ರಸಾದವನ್ನು ಭಜನೆಯಲ್ಲಿ ಭಕ್ತರೆಲ್ಲರಿಗೂ ನೀಡಿದರು.

ಭಜನೆ ಸಾಗುವ ಮಾರ್ಗದಲ್ಲಿ ಚಂದ್ರ, ಅರುಣ್, ಗಣೇಶ್, ನಾರಾಯಣ ದೇವರನಾಮಗಳನ್ನು ಹಾಡಿದರು. ರಾಜಣ್ಣ ಹಾಗೂ ಎಚ್.ಆರ್.ರವಿಕುಮಾರ್ ತಬಲಾ, ಮಂಜು ಹಾಗೂ ಕಾಳಾಚಾರ್ ಹಾರ್ಮೋನಿಯಂ ನುಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ