ಕನ್ನಡಪ್ರಭ ವಾರ್ತೆ ಮಡಿಕೇರಿ
ಅಮ್ಮತ್ತಿ ಕೊಡವ ಸಮಾಜವು ಸಾಹಿತಿಕ ಹಾಗೂ ಸಾಂಸ್ಕೃತಿಕವಾಗಿ ಸಿಂಗಾರಗೊಳ್ಳುತ್ತಿದೆ. ಮಾರ್ಚ್ 29, 30ರಂದು ನಡೆಯಲಿರುವ ‘ಕೊಡವ ಬಲ್ಯನಮ್ಮೆ’ಗೆ ಸಕಲ ಸಿದ್ಧತೆಗಳು ನಡೆಯುತ್ತಿದೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಅಮ್ಮತ್ತಿ ಕೊಡವ ಸಮಾಜದ ಸಹಯೋಗದಲ್ಲಿ ನಡೆಸುತ್ತಿರುವ ಕೊಡವ ಬಲ್ಯನಮ್ಮೆಯು ವಿವಿಧ ಕಾರ್ಯಕ್ರಮಗಳು ನಡೆಯಲಿದೆ ಎಂದು ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಕೊಡವ ಬಲ್ಯನಮ್ಮೆಯ ಮೊದಲ ದಿನ ಬೆಳಗ್ಗೆ 9 ಗಂಟೆಗೆ ಹೊಸೂರು ಜಂಕ್ಷನ್‌ನಿಂದ ಕೊಡವ ಸಮಾಜದ ವರೆಗೆ ಕೊಡವ ಸಾಂಸ್ಕೃತಿಕ-ಜಾನಪದ ಮೆರವಣಿಗೆಯನ್ನು ಅಮ್ಮತ್ತಿ ನಾಡಿನ ಹಿರಿಯರು ಹಾಗೂ ಸಮಾಜ ಸೇವಕ ನೆಲ್ಲಮಕ್ಕಡ ಶಂಭು ಸೋಮಯ್ಯ, ಕಾವಾಡಿಚಂಡ ಯು. ಗಣಪತಿ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
2022-23 ಮತ್ತು 2023-24ನೇ ವರ್ಷದ ಕೊಡವ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪ್ರಶಸ್ತಿ ಪುರಸ್ಕೃತರನ್ನು ಅಕಾಡೆಮಿಯು ಆಯ್ಕೆಮಾಡಿದ್ದು, ಇದರ ಪ್ರದಾನ ಸಮಾರಂಭ ಕಾರ್ಯಕ್ರಮ ಅಧ್ಯಕ್ಷತೆಯನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ವಹಿಸುವರು ಎಂದರು.ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಐನಂಡ ಪ್ರಕಾಶ್ ಗಣಪತಿ ಕಾರ್ಯಕ್ರಮ ಉದ್ಘಾಟಿಸುವರು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ವಹಿಸಲಿದ್ದು, ವಿಧಾನ ಪರಿಷತ್ ಸದಸ್ಯರಾದ ಮಂಡೇಪಂಡ ಸುಜಾ ಕುಶಾಲಪ್ಪ, ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಕೆ. ಸುಬ್ರಮಣಿ, ಕೊಡವ ಸಮಾಜ ಒಕ್ಕೂಟ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯ ಚೆಪ್ಪುಡಿರ ಅರುಣ್ ಮಾಚಯ್ಯ, ಸೋಮವಾರಪೇಟೆ ಕೊಡವ ಸಮಾಜ ಅಧ್ಯಕ್ಷ ಮಾಳೇಟಿರ ಅಭಿಮನ್ಯುಕುಮಾರ್, ಕೊಡವ ಭಾಷಾ ಸಮುದಾಯಗಳ ಕೂಟ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ, ಸವಿತಾ ಸಮಾಜದ ಅಧ್ಯಕ್ಷ ತಾಪನೆರ ಎಂ.ಸಾಬು, ಬಣ್ಣ ಸಮಾಜ ಅಧ್ಯಕ್ಷ ಬೀಕಚಂಡ ಬೆಳ್ಯಪ್ಪ, ಅರಮನೆಪಾಲೆ ಸಮಾಜದ ಮುಖ್ಯಸ್ಥ ಅರಮನೆಪಾಲೆರ ದೇವಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
‘ಪಟ್ಟೋಲೆ ಪಳಮೆ’ಯ ನಡಿಕೇರಿಯಂಡ ಚಿಣ್ಣಪ್ಪ ಅವರ ಜ್ಞಾಪಕಾರ್ಥವಾಗಿ ನಡೆಸುವ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೆಪ್ಪುಡಿರ ಪಿ. ಬೆಳ್ಯಪ್ಪ ವಹಿಸಲಿದ್ದಾರೆ. ಮೇ.ಮುಂಡಂಡ ಎಂ. ಮಾಚಯ್ಯ ಅವರು ಬರೆದಿರುವ ‘ಎಳ್ತ್ರ ಜೊಪ್ಪೆ’, ಕ್ಯಾ.ಬಿದ್ದಂಡ ನಾಣಿ ದೇವಯ್ಯ ಬರೆದಿರುವ ‘ಬೊಳ್ಳಿ ಕೊಂಬ್‌ರ ಕೂತ್’, ಸಣ್ಣುವಂಡ ಎಂ. ವಿಶ್ವನಾಥ್ (ಪ್ರಕಾಶ) ಬರೆದಿರುವ ‘ಕೂತ್‌ಂಗೊರೆ’, ಉಡುವೆರ ರಾಜೇಶ್ ಉತ್ತಪ್ಪ ಬರೆದಿರುವ ‘ಕೂಟ್‌ಕರಿ’, ಅಜ್ಜಿನಿಕಂಡ ಪ್ರಮೀಳ ನಾಚಯ್ಯ ಬರೆದಿರುವ ‘ಮರಕೊಟ್ಟ’, ಮುಂಡಂಡ ಎ. ಪೂಣಚ್ಚ ಬರೆದಿರುವ ‘ಎಳ್ತ್ರ ಪತ್ತಾಯ’, ದಿ. ಬಾಚಮಡ ಡಿ. ಗಣಪತಿ ಅವರ ‘ಕೊಡವ: ಓರ್ ಚಿತ್ರಕಥೆ’, ಮುಕ್ಕಾಟಿರ ಸರೋಜ ಸುಬ್ಬಯ್ಯ ಬರೆದಿರುವ ‘ಸರೋಜ’, ಬೊಳ್ಳಚೆಟ್ಟಿರ ವಿಜಯ ಚೆಟ್ಟಿಚ ಬರೆದಿರುವ ‘ಚೆಂಬಂದುಡಿ’ ಎಂಬ ಪುಸ್ತಕವನ್ನು ಐಆರ್‌ಎಸ್ ಅಧಿಕಾರಿ ದೇವಣಿರ ಪ್ರೀತ್ ಗಣಪತಿ ಬಿಡುಗಡೆ ಮಾಡಲಿದ್ದಾರೆ ಎಂದು ವಿವರಿಸಿದರು.ಬೆಳಗ್ಗೆ 11 ಗಂಟೆಗೆ ತ್ರಿಭಾಷಾ ಸಾಹಿತಿ ಮಂಡಿರ ಜಯ ಅಪ್ಪಣ್ಣ ಜ್ಞಾಪಕಾರ್ಥವಾಗಿ ನಡೆಯುವ ಕೊಡವ ಆಟ್-ಪಾಟ್ ಸ್ಪರ್ಧಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದ್ಮಶ್ರೀ ಐಮುಡಿಯಂಡ ರಾಣಿ ಮಾಚಯ್ಯ ವಹಿಸಲಿದ್ದು, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ ವಿವಿಧ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸಮಾಜ ಸೇವಕ ಪಾಲಂದಿರ ಎ. ಜೋಯಪ್ಪ, ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ಪುದಿಯೊಕ್ಕಡ ಕಾಶಿ ಕರುಂಬಯ್ಯ, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮೋರಿ ರಾಜಪ್ಪ ಇವರ ಜ್ಞಾಪಕಾರ್ಥವಾಗಿ ವಿವಿಧ ಸ್ಫರ್ಧಾ ಕಾರ್ಯಕ್ರಮಗಳಾದ ಉಮ್ಮತ್ತಾಟ್-ಪೊನ್ನಾಜಿರ ಧರಣಿ, ಬೊಳಕಾಟ್-ಕುಕ್ಕೆರ ಜಯ ಚಿಣ್ಣಪ್ಪ, ಕೋಲಾಟ್-ಡಾ.ಅಜ್ಜಿನಿಕಂಡ ಸಿ. ಗಣಪತಿ, ಕತ್ತಿಯಾಟ್-ಮಲ್ಲಪನೆರ ವಿನು ಚಿಣ್ಣಪ್ಪ, ಉರ್‌ಟಿಕೊಟ್ಟ್ ಆಟ್-ಕುಡಿಯರ ಶಾರದ, ಕಪ್ಪೆಯಾಟ್-ಚೊಟ್ಟೆಯಂಡ ಸಮಿತ್ ಸೋಮಣ್ಣ, ಬಾಳೋಪಾಟ್-ಬೊಟ್ಟೋಳಂಡ ಕಾಶಿ ಅಚ್ಚಯ್ಯ, ಕೊಂಬು-ಕೊಟ್ಟ್- ಶ್ರೀನಿವಾಸ್, ವಾಲಗತಾಟ್- ಅಜ್ಜಿಕುಟ್ಟಿರ ಸಿ. ಗಿರೀಶ್, ಸಮ್ಮಂಧ ಕೊಡ್‌ಪ-ಚೇನಂಡ ರಘು ಉತ್ತಪ್ಪ, ಪರಿಯಕಳಿ-ಪಾಲೇಂಗಡ ಅಮಿತ್ ಭೀಮಯ್ಯ, ಮಂಡೆಕ್ ‘ತುಣಿ’ ಕೆಟ್ಟುವ-ಕ್ಯಾಲೇಟಿರ ಪವಿತ್ ಪೂವಯ್ಯ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ರಿಜಿಸ್ಟ್ರಾರ್ ಚಿನ್ನಸ್ವಾಮಿ ಹಾಗೂ ಸದಸ್ಯರಾದ ಕಂಬೆಯಂಡ ಡೀನಾ ಭೋಜಣ್ಣ, ನಾಯಕಂಡ ಬೇಬಿ ಚಿಣ್ಣಪ್ಪ, ನಾಯಂದಿರ ಆರ್. ಶಿವಾಜಿ, ನಾಪಂಡ ಸಿ. ಗಣೇಶ್ ಹಾಗೂ ಪುತ್ತರಿರ ಪಪ್ಪು ತಿಮ್ಮಯ್ಯ, ಮೊಳ್ಳೆಕುಟ್ಟಂಡ ದಿನು ಭೋಜಪ್ಪ, ಪೊನ್ನಿರ ಯು. ಗಗನ್, ಚೊಟ್ಟೆಯಂಡ ಸಂಜು ಕಾವೇರಪ್ಪ ಹಾಜರಿದ್ದರು.
ಪ್ರಶಸ್ತಿ ಪುರಸ್ಕೃತರು:ಕೊಡವ ಸಂಸ್ಕೃತಿ, ಪಾಟ್-ಪಡಿಪು ಕ್ಷೇತ್ರ-ಕೋಡಿಮಣಿಯಂಡ ತಮ್ಮುಣಿ ಬೋಪಯ್ಯ, ಕೊಡವ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರ- ಕಾಟಿಮಡ ಜಿಮ್ಮಿ ಅಣ್ಣಯ್ಯ, ಕೊಡವ ಜಾನಪದ ಕ್ಷೇತ್ರ-ಚೇನಂಡ ರಘು ಉತ್ತಪ್ಪ, ದಾನ-ಧರ್ಮ, ಸಮಾಜ ಸೇವಾ ಕ್ಷೇತ್ರ- ಕೈಬುಲಿರ ಪಾರ್ವತಿ ಬೋಪಯ್ಯ, ಕೊಡವ ಆಟ್-ಪಾಟ್, ಸಂಸ್ಕೃತಿ ಕ್ಷೇತ್ರ-ಚೀಯಕಪೂವಂಡ ಬಿ. ದೇವಯ್ಯ, ಜನ ಸೇವಾ ಕ್ಷೇತ್ರ- ಹೀರಕುಟ್ಟಡ ಟಸ್ಸಿ ಸದನ್ ಅವರಿಗೆ ಗೌರವ ಪ್ರಶಸ್ತಿ ಹಾಗೂ ಮಚ್ಚಮಡ ಲಾಲ ಕುಟ್ಟಪ್ಪ-‘ಮೂಪಾಜೆ ನಿಗಂಟ್’, ಐಚಂಡ ರಶ್ಮಿ ಮೇದಪ್ಪ-‘ಸಾಂಸ್ಕೃತಿರ ಪಿಞ್ಞ ಧಾರ್ಮಿಕ ಹಿನ್ನಲೆಲ್ ಕೊಡವಡ ಐನ್‌ಮನೆ ಅಧ್ಯಯನ ಗ್ರಂಥ ಪುಸ್ತಕ, ಕೊಟ್ಟ್ಕತ್ತಿರ ಪ್ರಕಾಶ್ ಕಾರ್ಯಪ್ಪ-‘ನಾಡ ಕೊಡಗ್(ಕಾದಂಬರಿ)’ ಹಾಗೂ ಚೊಟ್ಟೆಯಂಡ ಲಲಿತ ಕಾರ್ಯಪ್ಪ-‘ಅಗ್ಗೇನ’ ಎಂಬ ಪುಸ್ತಕಕ್ಕೆ ಪುಸ್ತಕ ಪ್ರಶಸ್ತಿಯನ್ನು ನೀಡಲಾಗುವುದು.