ಕೊಪ್ಪಳ: ಲಿಂಗಾಯತ ಶಾಸಕರು, ಸಚಿವರು ಒಟ್ಟಾಗಿ ಕೇಂದ್ರದ ಮೇಲೆ ಒತ್ತಡ ಹೇರಿದರೇ ಓಬಿಸಿ ಸ್ಥಾನಮಾನ ಸಾಧ್ಯ ಎಂದು ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ಶ್ರೀವಚನಾನಂದ ಸ್ವಾಮೀಜಿ ಹೇಳಿದರು.
ಎಲ್ಲ ಲಿಂಗಾಯತರಿಗೆ ಕೇಂದ್ರದಲ್ಲಿ ಓಬಿಸಿ ಸ್ಥಾನಮಾನ ಸಿಗಬೇಕಿದೆ. ಈ ಕುರಿತು ಅನೇಕ ಬಾರಿ ಸಿಎಂ ಜತೆ ಮಾತನಾಡಿದ್ದೇನೆ. ಎಲ್ಲ ಲಿಂಗಾಯತ ಶಾಸಕರು, ಸಚಿವರು ಒಟ್ಟಾಗಿ ಕೇಂದ್ರದ ಮೇಲೆ ಒತ್ತಡ ಹೇರಿದರೇ ಓಬಿಸಿ ಸ್ಥಾನಮಾನ ದೊರೆಯುತ್ತದೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಯಬೇಕಿದೆ ಎಂದರು.
ಬೆಳಗಾವಿಯಲ್ಲಿ ಪಂಚಮಸಾಲಿ ಸಮಾಜದವರ ಮೇಲೆ ಲಾಠಿ ಚಾರ್ಜ್ ಪ್ರಕರಣದಲ್ಲಿ ಅಂದು ನಾನು ಹೋರಾಟಕ್ಕೆ ಸ್ಪಂದಿಸಿದ್ದೇನೆ. ಆದರೆ, ನಾನು ವಿನಾಕಾರಣ ಹೋರಾಟಕ್ಕೆ ಸ್ಪಂದಿಸಿಲ್ಲ ಎನ್ನುವುದು ಸರಿಯಲ್ಲ. ನಾವೆಲ್ಲ ಸ್ವಾಮೀಜಿಗಳು ಒಂದೇ ಇದ್ದೇವೆ ಎಂದರು.ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್ ಮಾತನಾಡಿ, ಸಣ್ಣ-ಪುಟ್ಟ ಭಿನ್ನಾಭಿಪ್ರಾಯ ದೂರವಿಟ್ಟು ನಾವೆಲ್ಲ ಒಂದಾಗಿ ಸಂಘಟಿತರಾಗೋಣ.
ಮಾಜಿ ಸಂಸದ ಶಿವರಾಮೇಗೌಡ ಮಾತನಾಡಿ, ಪಂಚಮಸಾಲಿ ಸಮುದಾಯದ ಸಂಘಟನೆ ೧೯೯೩ರಿಂದ ಆರಂಭವಾಗಿದೆ. ಅಂದಿನಿಂದಲೂ ಸಂಘಟನೆಯ ಜಪ ಮಾಡುತ್ತಲೇ ಬಂದಿದ್ದೇವೆ. ಇದು ನಾಚಿಕೆಗೇಡಿತನದ ಸಂಗತಿಯಾಗಿದೆ. ಸಮಾಜದ ಸದಸ್ಯತ್ವ ನೋಂದಣಿ ಅಭಿಯಾನ ಹಿಂದುಳಿಯಲು ಕಾರಣವೇನು...?ಎಂಬುದರ ಆತ್ಮವಲೋಕನ ಮಾಡಿಕೊಳ್ಳಬೇಕಿದೆ ಎಂದರು.
ಸಮಾಜದ ಮುಖಂಡ ಬಸವನಗೌಡ ತೊಂಡಿಹಾಳ, ಬಸವಲಿಂಗಪ್ಪ ಭೂತೆ, ದೇವೇಂದ್ರಪ್ಪ ಬಳೂಟಗಿ, ಅಮರೇಶ ಕರಡಿ, ಡಾ. ಬಸವರಾಜ ಕ್ಯಾವಟರ್, ಕಳಕನಗೌಡ ಪಾಟೀಲ್, ಬಿ.ಎಸ್. ಪಾಟೀಲ್ ತಾವರಗೇರಾ, ಶಂಭುಲಿಂಗನಗೌಡ ಪಾಟೀಲ್ ಹಲಗೇರಿ, ವೀರಬಸಪ್ಪ ಪಟ್ಟಣ ಶೆಟ್ಟಿ, ಪರಮೇಶ ಪಟ್ಟಣಶೆಟ್ಟಿ, ವೀರಣ್ಣ ಅಣ್ಣಿಗೇರಿ, ಶಿವಪ್ಪ, ಕರಿಯಪ್ಪ ಮೇಟಿ, ಮಹಾಂತೇಶ ಮಲ್ಲನಗೌಡರ, ಬಸವರಾಜ ಸಂಕನಗೌಡರ, ಸುಮಂಗಲಾ ಹಂಚಿನಾಳ, ಕೋಟ್ರೇಶ ಕಿಚಡಿ, ಬಸವರಾಜ ಗದ್ದಿ ಗಿಣಿಗೇರಿ ಸೇರಿದಂತೆ ಇನ್ನಿತರರು ಇದ್ದರು.