ನಮ್ಮ ಗೃಹಮಂತ್ರಿಗಳು ಬಿಗ್‌ ಝೀರೋ

KannadaprabhaNewsNetwork | Published : Mar 17, 2025 12:30 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ನಮ್ಮ ಗೃಹ ಮಂತ್ರಿಗಳಂತೂ ಬಿಗ್ ಝೀರೋ, ಅವರು ರಾಜೀನಾಮೆ ಕೊಟ್ಟು ಬೇರೆ ಖಾತೆಯನ್ನಾದ್ರು ತೆಗೆದುಕೊಳ್ಳುತ್ತಿಲ್ಲ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಟೀಕಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನಮ್ಮ ಗೃಹ ಮಂತ್ರಿಗಳಂತೂ ಬಿಗ್ ಝೀರೋ, ಅವರು ರಾಜೀನಾಮೆ ಕೊಟ್ಟು ಬೇರೆ ಖಾತೆಯನ್ನಾದ್ರು ತೆಗೆದುಕೊಳ್ಳುತ್ತಿಲ್ಲ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಟೀಕಿಸಿದರು.

ನಗರದಲ್ಲಿ ಬಿಡದಿಯಲ್ಲಿ ಪಾಕಿಸ್ತಾನ ಪರ ಬರಹ ವಿಚಾರದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ನೋಡಿ ಸಾಕಾಗಿದೆ. ಹಿಂದೂ ಹೆಣ್ಣುಮಕ್ಕಳ ಕೊಲೆಗಳಾಗುತ್ತಿವೆ. ರಾಜ್ಯ ಸರಕಾರದ ಬಗ್ಗೆ ಭಯ ಉಳಿದಿಲ್ಲ. ಪಾಕಿಸ್ತಾನದ ಬಗ್ಗೆ ಬರಹ ಬರಿತಾರೆ ಅಂದ್ರೆ, ಅವರು ಎಷ್ಟು ಸ್ವೇಚ್ಛಾಚಾರದ ಜೀವನ ಮಾಡುತ್ತಿದ್ದಾರೆ ಅನ್ನೊದು ತಿಳಿಯುತ್ತದೆ. ಮದರಸಾಗೆ, ಉರ್ದು ಶಾಲೆಗೆ ಹಣ ಕೊಡುತ್ತಾರೆ. ಮದರಸಾದಲ್ಲಿ ಏನು ಕಲಿಸುತ್ತಾರೆ?, ಅಲ್ಲಿ ದೇಶ ವಿರೋಧಿ ವಿಚಾರಗಳೇ ಇರುತ್ತವೆ. ಪಾಕಿಸ್ತಾನಕ್ಕೆ ಜೈ ಅನ್ನೋದನ್ನೆ ಕಲಿಸುತ್ತಾರೆ. ಅಲ್ಲಿ ಇಸ್ಲಾಂ ಅಂದ್ರೆ ಇಡಿ ಅನ್ಯ ಧರ್ಮದವರನ್ನ ನಾಶ ಮಾಡಬೇಕು, ಲವ್ ಜಿಹಾದ್ ಮಾಡಬೇಕು ಎಂಬುದನ್ನು ಕಲಿಸುತ್ತಾರೆ. ಸಿದ್ದರಾಮಯ್ಯ ಸರ್ಕಾರ ಅವರಿಗೆ ಹಣ ಕೊಡುತ್ತಿರುವದರಿಂದ ಅವರಿಗೆ ದೊಡ್ಡ ಶಕ್ತಿ ಬಂದಿದೆ ಎಂದು ಆರೋಪಿಸಿದರು.

ಮುಸ್ಲಿಂ ಯುವತಿಯರಿಗೆ ಆತ್ಮರಕ್ಷಣೆ ತರಬೇತಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಮುಸ್ಲಿಂ ಯುವತಿಯರಿಗೆ ಆತ್ಮರಕ್ಷಣೆ ಕಲಿಸಲು ಆಕ್ಷೇಪ ವ್ಯಕ್ತಪಡಿಸಿದರು. ಮುಸ್ಲಿಂ ಯುವತಿಯರಿಗೆ ಆತ್ಮರಕ್ಷಣೆ ಕಲಿಸಿದ್ರೆ, ನಿತ್ಯ ನಮ್ಮ ಹೆಣ್ಣು ಮಕ್ಕಳ ಜೊತೆಗೆ ಹೊಡೆದಾಡಬೇಕಾ?. ಮುಸ್ಲಿಂ ಹೆಣ್ಣುಮಕ್ಕಳಿಗೆ ಅನ್ಯಾಯವಾಗಿದೆಯಾ?, ಹಿಂದೂ ಹೆಣ್ಣುಮಕ್ಕಳ ಕೊಲೆಗುತ್ತಿವೆ. ನಿನ್ನೆ ಹಾವೇರಿಯಲ್ಲಿ ಹಿಂದೂ ಯುವತಿಯನ್ನು ಮುಸ್ಲಿಂ ಯುವಕ ಕೊಲೆ ಮಾಡಿದ್ದಾನೆ. ನಿರಂತರವಾಗಿ ಹಿಂದೂ-ದಲಿತ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇನ್ನೊಂದಿಷ್ಟು ದಿನಗಳಲ್ಲಿ ಜನರೇ ದಂಗೆ ಏಳುತ್ತಾರೆ ಎಂದು ಹೇಳಿದರು.

ರನ್ಯಾ ಪ್ರಕರಣದಲ್ಲಿ ಕೇಂದ್ರದವರ ತಪ್ಪಿದೆ ಎಂದು ಸಚಿವ ಲಾಡ್ ಆರೋಪ ವಿಚಾರದ ಬಗ್ಗೆ ಮಾತನಾಡಿ, ಯಾರು ತಪ್ಪು ಮಾಡಿದ್ರೂ ಅದು ತಪ್ಪೆ. ನಾವು ಬಿಜೆಪಿಯವರನ್ನು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಕೇಂದ್ರದ ಅಧಿಕಾರಿಗಳ ತಪ್ಪಿದ್ರೆ ತಪ್ಪೆ, ನಮ್ಮ ಕೇಂದ್ರದ ಸಚಿವರು ಇದರಲ್ಲಿ ಭಾಗಿ ಇಲ್ಲ. ರನ್ಯಾಳಿಗೆ ಜಮೀನು ಕೊಟ್ಟಿದ್ದನ್ನ ಸ್ವತಃ ನಿರಾಣಿ ಒಪ್ಪಿಕೊಂಡಿದ್ದಾರೆ. 12 ಎಕರೆ ಜಮೀನು ಕೊಟ್ಟಿದ್ದು, ಹಣ ಕಟ್ಟದೆ ಇರೋದಕ್ಕೆ ಅದು ರದ್ದಾಗಿದೆ. 12 ಎಕರೆಯದ್ದು ಯಾರೋ ಒಬ್ಬರು ಹಣ ಕೊಡ್ತೀನಿ ಎಂದಿದ್ದರು ಅವ್ರು ಕೊಟ್ಟಿಲ್ಲ. ಹಣ ಕೊಡ್ತೀನಿ ಎಂದವರು ಸಚಿವರಾ? ಎನ್ನುವ ಪ್ರಶ್ನೆಗೆ ಮುಗುಳ್ನಕ್ಕರು.

ಯತ್ನಾಳ ನಮ್ಮ ಸಮಾಜದ ನಾಯಕರು ಎಂಬ ಮಾಜಿ ಶಾಸಕ ರೇಣುಕಾಚಾರ್ಯ ಹೇಳಿಕೆ ಹಾಗೂ ರೇಣುಕಾಚಾರ್ಯ ಬೇಡ ಜಂಗಮ ಪ್ರಮಾಣ ಪತ್ರ ಪಡೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ನಾವು ವೀರಶೈವ ಲಿಂಗಾಯತರು. ಅವರು ದಲಿತರ ಹಕ್ಕು ಕಸಿದುಕೊಂಡಿದ್ದಾರೆಂದು ರೇಣುಕಾಚಾರ್ಯ ವಿರುದ್ದ ವಾಗ್ದಾಳಿ ನಡೆಸಿದರು. ನಾನು ಎಸ್ಸಿ ಸರ್ಟಿಫಿಕೆಟ್ ತೆಗೆದುಕೊಂಡರೆ ಮನುಷ್ಯತ್ವ ಎನ್ನುತ್ತಾರಾ?. ಸ್ಪರ್ಷ ಜನಾಂಗ ಹಾಗೂ ಅಸ್ಪರ್ಷ ಜನಾಂಗ ಎಂದು ಡಾ.ಅಂಬೇಡ್ಕರ ಅವರು ಎರಡು ವರ್ಗ ಮಾಡಿದ್ದಾರೆ. ಸಾವಿರಾರು ವರ್ಷಗಳಿಂದ ತುಳಿತಕ್ಕೊಳಗಾದ ದೂರವಿಟ್ಟಿದ್ದ ಜನರಿಗೆ ಮೀಸಲಾತಿ ನೀಡಿದ್ದಾರೆ. ನಾ ಲಿಂಗಾಯತನಾಗಿ ಎಸ್ಸಿ ಸರ್ಟಿಫಿಕೇಟ್ ತೆಗೆದುಕೊಳ್ಳಬಾರದು. ಎಸ್ಸಿ, ಎಸ್ಟಿ ಸಮಾಜದ ಹಣ ಕಾಂಗ್ರೆಸ್ ಸರ್ಕಾರ ದುರುಪಯೋಗ ಮಾಡಿಕೊಂಡಿದೆ. ಕಾಂಗ್ರೆಸ್ ಎಸ್ಸಿ,ಎಸ್ಟಿ ಸಮಾಜದ ಜನರ ವಿರೋಧಿಯಾಗಿದೆ. 24 ಸಾವಿರ ಕೋಟಿ ಹಣ ಇತರೆ ಕೆಲಸಗಳಿಗೆ ದುರುಪಯೋಗ ಮಾಡಿಕೊಂಡಿದ್ದಾರೆ. ಎಸ್ಸಿ,ಎಸ್ಟಿ ಸಮಾಜದ ಮೀಸಲು ಹಣ ಬೇರೆ ಕೆಲಸಕ್ಕೆ ಬಳಕೆಯಾಗಿದೆ. ಎಸ್‌ಸಿಎಸ್‌ಪಿ- ಟಿಎಸ್‌ಪಿ ಹಣ ಜನರಲ್ ಕಾಮಗಾರಿಗಳಿಗೆ ಬಳಕೆಯಾಗಿದೆ. ಗುಡ್ಡಗಾಡುಗಳಲ್ಲಿ ಪ್ರಾಣಿಗಳ ತಡೆಗೆ ಬೇಲಿ ನಿರ್ಮಿಸಲು ಎಸ್ಸಿ,ಎಸ್ಟಿ ಹಣ ಬಳಕೆಯಾಗಿದೆ. ಮುಸ್ಲಿಂ ಸಮಾಜದ ಜನರಿಗೆ ಮೀಸಲಿಟ್ಟ ಹಣ ಬಳಕೆ ಮಾಡಿಕೊಂಡಿಲ್ಲ. ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣ ಉಚಿತ ಬಸ್ ಗಾಗಿ, ಅಕ್ಕಿ ನೀಡಲು ಬಳಕೆ ಮಾಡಿಕೊಳ್ಳಬಾರದು ಎಂದರು.ಕೋಟ್‌

ನಟಿ ರನ್ಯಾ ಗೋಲ್ಡ್ ಸ್ಮಗ್ಲಿಂಗ್‌ನಲ್ಲಿ ಸಚಿವರ ಹೆಸರು ನನಗೆ ಗೊತ್ತಿದೆ. ರನ್ಯಾ ನಂಟು ಹೊಂದಿರೋ ಸಚಿವರು ಯಾರು ಅನ್ನೋದು ಗೊತ್ತಿದೆ, ಬಹಿರಂಗ ಪಡೆಸುವೆ. ಅಧಿವೇಶನಲ್ಲಿ ಸಚಿವರ ಹೆಸರು ಪ್ರಸ್ತಾಪಿಸುವೆ. ರನ್ಯಾ ಜೊತೆಗೆ ಸಂಬಂಧ ಹೊಂದಿದವರು, ಆಕೆಗೆ ಪ್ರೋಟೊಕಾಲ್ ಕೊಟ್ಟವರ ಮಾಹಿತಿ ಸಂಗ್ರಹ ಮಾಡಿದ್ದೇವೆ. ಗೋಲ್ಡ್ ಎಲ್ಲಿಂದ ತಂದ್ರು? ಗೋಲ್ಡ್ ಎಲ್ಲಿಟ್ಟು ತಂದ್ರು ಎಂಬುದು ಗೊತ್ತಿದೆ.

ಬಸನಗೌಡ ಪಾಟೀಲ ಯತ್ನಾಳ, ನಗರ ಶಾಸಕ

Share this article