ಕೊಡವ ಕೌಟುಂಬಿಕ ಹಾಕಿ: ಕಾಂಡಂಡ ರೋಚಕ ಗೆಲವು

KannadaprabhaNewsNetwork |  
Published : Apr 23, 2026, 02:45 AM IST
22-ಎನ್ಪಿ ಕೆ—3.ನಾಪೋಕ್ಲು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ  ಚೇನಂಡ  ಕೊಡವ ಕೌಟುಂಬಿಕ ಹಾಕಿಟೂರ್ನಿಯಲ್ಲಿ ಬುಧವಾರದ ಪಂದ್ಯದ  ದೃಶ್ಯ.22-ಎನ್ಪಿ ಕೆ—4ನಾಪೋಕ್ಲು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ  ಚೇನಂಡ  ಕೊಡವ ಕೌಟುಂಬಿಕ ಹಾಕಿಪಂದ್ಯಾವಳಿಯಲ್ಲಿ ಪಾಲ್ಗೊಂಡು ಸೋತು ನಿರ್ಗಮಿಸುತ್ತಿರುವ ತಂಡಕ್ಕೆ ವಿಶೇಷ ಕೊಡುಗೆಯಾಗಿ ಚೆಂಬದುಡಿಯನ್ನುನೀಡಲಾಗುತ್ತಿದ್ದು ಜನಪದ ತಜ್ಞರಾದ ಬೊಟ್ಟೋಳಂಡ ಕಾಶಿ ಅಚ್ಚಯ್ಯ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.   22-ಎನ್ಪಿ ಕೆ—5.ಚೇನಂಡ ಕುಟುಂಬದ ವಿಶೇಷ ಪಾಪುಲಿ ಸ್ಮರಣೆಯೊಂದಿಗೆ ವಿಶೇಷ ಕೊಡುಗೆಯಾಗಿ ಸೋತು ನಿರ್ಗಮಿಸುತ್ತಿರುವ ತಂಡಕ್ಕೆ ಚೆಂಬದುಡಿಯನ್ನುನೀಡಿ ಗೌರವಿಸಲಾಗುತ್ತಿದೆ . | Kannada Prabha

ಸಾರಾಂಶ

ಚೇನಂಡ ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಬುಧವಾರದ ಪಂದ್ಯಗಳಲ್ಲಿ ಕಾಂಡಂಡ ಮತ್ತು ಮೂಕಳಮಾಡ ತಂಡಗಳು ಬಿರುಸಿನ ಆಟದಿಂದ ವೀಕ್ಷಕರಲ್ಲಿ ಕುತೂಹಲ ಕೆರಳಿಸಿದರು. ಪಂದ್ಯದಲ್ಲಿ ಎರಡೂ ತಂಡಗಳು ತಲಾ ಮೂರು ಗೋಲು ಗಳಿಸಿದವು. ಬಳಿಕ ಗೆಲುವಿಗಾಗಿ ಟೈ ಬ್ರೇಕರ್ ಮೊರೆ ಹೋಗಬೇಕಾಯಿತು. ಟೈ ಬ್ರೇಕರ್ ನಲ್ಲಿ ಕಾಂಡಂಡ ಮೂಕಳ ಮಾಡ ವಿರುದ್ಧ 4-3 ರಿಂದ ಗೆಲುವು ಸಾಧಿಸಿತು.

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಚೇನಂಡ ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಬುಧವಾರದ ಪಂದ್ಯಗಳಲ್ಲಿ ಕಾಂಡಂಡ ಮತ್ತು ಮೂಕಳಮಾಡ ತಂಡಗಳು ಬಿರುಸಿನ ಆಟದಿಂದ ವೀಕ್ಷಕರಲ್ಲಿ ಕುತೂಹಲ ಕೆರಳಿಸಿದರು. ಪಂದ್ಯದಲ್ಲಿ ಎರಡೂ ತಂಡಗಳು ತಲಾ ಮೂರು ಗೋಲು ಗಳಿಸಿದವು. ಬಳಿಕ ಗೆಲುವಿಗಾಗಿ ಟೈ ಬ್ರೇಕರ್ ಮೊರೆ ಹೋಗಬೇಕಾಯಿತು. ಟೈ ಬ್ರೇಕರ್ ನಲ್ಲಿ ಕಾಂಡಂಡ ಮೂಕಳ ಮಾಡ ವಿರುದ್ಧ 4-3 ರಿಂದ ಗೆಲುವು ಸಾಧಿಸಿತು.ಬೋವ್ವೇರಿಯಂಡ , ಕುಂಡ್ಯೋಳಂಡ ವಿರುದ್ಧ 4-2ರಿಂದ , ಅಮಣಿಚಂಡ , ಮುರುವಂಡ ವಿರುದ್ಧ 2-1ರಿಂದ, ಸಣ್ಣುವಂಡ ಕುಪ್ಪಂಡ ವಿರುದ್ಧ 4-2 ರಿಂದ , ಮೇಚಿಯಂಡ ಅಪ್ಪನೆರವಂಡ ವಿರುದ್ಧ 1-0ಯಿಂದ, ಚೌರಿರ (ಹೊದ್ದೂರು) ಪುಲ್ಲಂಗಡ ವಿರುದ್ಧ 1-0 ಯಿಂದ , ಕೂತಂಡ ಬಲಚಂಡ ವಿರುದ್ಧ 3-0ಯಿಂದ, ಬಿದ್ದಾಟಂಡ ಡ ನೆರವಂಡ ವಿರುದ್ಧ 5-3 ರಿಂದ ಗೆಲುವು ಸಾಧಿಸಿದವು.

ಒಟ್ಟು 383 ಕುಟುಂಬಗಳ ಪೈಕಿ 321 ಕುಟುಂಬಗಳು ಪಂದ್ಯಾವಳಿಯಿಂದ ನಿರ್ಗಮಿಸಿವೆ. ಎರಡು ಮೈದಾನಗಳಲ್ಲಿ 62 ಕುಟುಂಬಗಳು ಇದೀಗ ಸ್ಪರ್ಧಿಸುತ್ತಿದ್ದು ಪಂದ್ಯಗಳು ವೀಕ್ಷಕರ ಮನಸಳೆಯುತ್ತಿವೆ.ಪಂದ್ಯಾವಳಿಯಲ್ಲಿ ಪಾಲ್ಗೊಂಡು ಸೋತು ನಿರ್ಗಮಿಸುತ್ತಿರುವ ಪ್ರತಿ ತಂಡಕ್ಕೆ ಚೇನಂಡ ಕುಟುಂಬದ ವಿಶೇಷ ಪಾಪುಲಿ ಸ್ಮರಣೆಯೊಂದಿಗೆ ವಿಶೇಷ ಕೊಡುಗೆಯಾಗಿ ಚೆಂಬದುಡಿಯನ್ನು ನೀಡಲಾಗುತ್ತಿದೆ. ಪ್ರತಿ ಪಂದ್ಯದಲ್ಲಿ ಪಂದ್ಯ ಪುರುಷೋತ್ತಮನಾಗಿ ಆಯ್ಕೆಯಾಗುವ ಆಟಗಾರನಿಗೆ ಜಿಲ್ಲೆಯ ಒಲಂಪಿಯನ್ ಗಳು ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವವರು, ಚೇನಂಡ ಕುಟುಂಬದ ಅಧ್ಯಕ್ಷರು, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷರು ಸೇರಿದಂತೆ 16 ಮಂದಿ ಸಹಿ ಮಾಡಿರುವ ಹಾಕಿ ಸ್ಟಿಕ್ ಕೊಡುಗೆಯಾಗಿ ನೀಡಲಾಗುತ್ತಿದೆ. ಅಂತಿಮ ಹಂತ ತಲುಪಿದ ಅರವತ್ತ ನಾಲ್ಕು ಕುಟುಂಬಗಳಿಗೆ ಚಂಬದುಡಿ ವಿತರಣೆ ಮಾಡಲಾಗುತ್ತಿದ್ದು ಇದಕ್ಕೆ ಜನಪದ ತಜ್ಞರಾದ ಬೊಟ್ಟೋಳಂಡ ಕಾಶಿ ಅಚ್ಚಯ್ಯ ಸೇರಿದಂತೆ ಇನ್ನಿತರರು ಚಾಲನೆ ನೀಡಿದರು. ಸೋಮವಾರದಿಂದ ಪರಾಜಿತ ತಂಡಗಳಿಗೆ ದುಡಿ ನೀಡಲಾಗುತ್ತಿದೆ.

ಚೇನಂಡ ಕಪ್ ವಿಜೇತ ಕುಟುಂಬಕ್ಕೆ ಮೂರು ಲಕ್ಷ ನಗದು ಬಹುಮಾನ ಹಾಗೂ ಟ್ರೋಫಿ, ರನ್ನರ್ಸ್ ಅಪ್ ತಂಡಕ್ಕೆ 2 ಲಕ್ಷ ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಗುವುದು . ಮೂರು ಮತ್ತು ನಾಲ್ಕನೇ ಸ್ಥಾನ ಪಡೆದ ತಂಡಗಳಿಗೆ ತಲಾರು ಒಂದು ಲಕ್ಷ ಸೇರಿ ಒಟ್ಟು ಏಳು ಲಕ್ಷ ನಗದು ಬಹುಮಾನ ನೀಡಲಾಗುವುದು. ಜೊತೆಗೆ ಕೊಡವ ಹಾಕಿ ಅಕಾಡೆಮಿಯ ಒಂದು ಕೆಜಿ ತೂಕದ ಬೆಳ್ಳಿಯ ರೋಲಿಂಗ್ ಟ್ರೋಫಿ ಸೇರಿದಂತೆ ಪ್ರಯೋಜಕರಿಂದ ವಿವಿಧ ಬಹುಮಾನಗಳು ಲಭಿಸಲಿವೆ.

ಮಹಿಳಾ ಹಾಕಿ ವಿಜೇತ ತಂಡಕ್ಕೆ 2 ಲಕ್ಷ ರು. ನಗದು ಹಾಗೂ ರನ್ನರ್ ಅಪ್ ತಂಡಕ್ಕೆ ಒಂದು ಲಕ್ಷ ರು. ನಗದು ಲಭಿಸಲಿದೆ. ಭಾರತ ಹಾಕಿ ತಂಡಕ್ಕೆ ಆಡಿದ ಪ್ರಥಮ ಕೊಡವ ಮಹಿಳೆ ಪಾಂಡಂಡ ಪುಷ್ಪ ಸುಬ್ಬಯ್ಯ ಬಹುಮಾನ ಪಾಯೋಜಿಸುತ್ತಿದ್ದಾರೆ. ಮಹಿಳಾ ಹಾಕಿ ಉತ್ಸವ ಏಪ್ರಿಲ್ 25 ರಿಂದ ಆರಂಭಗೊಳ್ಳಲಿದೆ.

ಇಂದಿನ ಪಂದ್ಯಗಳು:

ಮೈದಾನ 19ಕ್ಕೆ ಕೋಳೇರ v/s ಕರೋಟಿರ 10ಕ್ಕೆ ಮುಕ್ಕಾಟಿರ (ಪುಲಿಕೋಟ್) v/s ಸೋಮೆಯಂಡ 11ಕ್ಕೆನಾಗಂಡ v/ಚೆಪ್ಪುಡಿರ12ಕ್ಕೆ ಮಣವಟ್ಟೀರ v/s ಕಂಬೀರಂಡ 1ಕ್ಕೆಮುಕ್ಕಾಟಿರ (ಹರಿಹರ)v/s ನಾಪಂಡ 2ಕ್ಕೆ ಅಂಜಪರವಂಡ v/s ಅರಮಣಮಾಡ

ಮೈದಾನ 29ಕ್ಕೆ ಕೊಲ್ಲೀರ v/s ನಂದೇಟಿರ 9.00am10ಕ್ಕೆ ಮುಕ್ಕಾಟಿರ (ಮೂವತ್ತೋಕ್ಲು)v/s ನೆಲ್ಲಮಕ್ಕಡ11ಕ್ಕೆ ಕುಪ್ಪಂಡ(ಕೈಕೇರಿ) /s ಚಂದುರ 12ಕ್ಕೆ ಕನ್ನಂಡ v/s ಬೋಟೋಳಂಡ 1ಕ್ಕೆ ಪುದಿಯೊಕ್ಕಡ v/s ಬಲ್ಲಚಂಡ

2ಕ್ಕೆಮಂಡೇಟಿರ v/s ಮೂಕೊಂಡ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೆದ್ದಾರಿ ಅತಿಕ್ರಮಣ ವಿರುದ್ಧ ಕ್ರಮಕ್ಕೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಸೂಚನೆ
ಮಂಜನಾಡಿ ಗುಡ್ಡ ಕುಸಿತ ಮಾನವ ನಿರ್ಲಕ್ಷ್ಯ: ಎನ್‌ಐಟಿಕೆ ವರದಿ ಬಹಿರಂಗ