ಕೊಡವ ಕೌಟುಂಬಿಕ ಹಾಕಿ: ಕುಲ್ಲೆಟಿರ, ಚೆಂದಂಡ, ನೆಲ್ಲಮಕ್ಕಡ ಸೆಮಿಫೈನಲ್‌ ಪ್ರವೇಶ

KannadaprabhaNewsNetwork |  
Published : Apr 26, 2024, 12:46 AM IST
3 | Kannada Prabha

ಸಾರಾಂಶ

ನಾಪೋಕ್ಲು ಸಮೀಪದ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರಿಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಗುರುವಾರದ ಕ್ವಾರ್ಟರ್ ಫೈನಲ್ ಪಂದ್ಯಾಟದಲ್ಲಿ ಕುಲ್ಲೆಟಿರ, ಚೆಂದ೦ಡ ಮತ್ತು ನೆಲ್ಲಮಕ್ಕಡ ತಂಡಗಳು ಸೆಮಿಫೈನಲ್ ಪ್ರವೇಶಿಸಿದವು. ಫೈನಲ್ಸ್ ಭಾನುವಾರ ನಡೆಯಲಿದೆ.

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿನ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರಿಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಗುರುವಾರದ ಕ್ವಾರ್ಟರ್ ಫೈನಲ್ ಪಂದ್ಯಾಟದಲ್ಲಿ ಕುಲ್ಲೆಟಿರ, ಚೆಂದ೦ಡ ಮತ್ತು ನೆಲ್ಲಮಕ್ಕಡ ತಂಡಗಳು ಸೆಮಿಫೈನಲ್ ಪ್ರವೇಶಿಸಿದವು.

ಕುಲ್ಲೇಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೆಪ್ಪುಡಿರ ದಂಡ 2-1 ಅಂತರದ ಗೆಲವು ಸಾಧಿಸಿತು. ಕುಲ್ಲೇಟಿರ ತಂಡದ ಆಟಗಾರರಾದ ನಿಶ್ಚಲ್ ಒಂದು ಗೋಲ್ ಮತ್ತು ಅವಿನಾಶ್ ಒಂದು ಗೋಲ್ ಗಳಿಸುವುದರ ಮೂಲಕ ತಂಡಕ್ಕೆ ಗೆಲವು ತಂದು ಕೊಟ್ಟರು. ಚೆಪ್ಪುಡಿರ ತಂಡದ ತೇಜಸ್ ಕೇವಲ ಒಂದು ಗೋಲು ಗಳಿಸಿದರು.

ಚೇಂದಂಡ ಮತ್ತು ಬೋವೆರಿಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೇಂದಂಡ 3-1 ಅಂತರದ ಗೆಲವು ಸಾಧಿಸಿತು. ಚೇಂದಂಡ ನಿಕ್ಕಿನ್ ಎರಡು ಗೋಲ್ ಗಳಿಸಿದರು. ಸೋನು ಪೊನ್ನಣ್ಣ ಒಂದು ಗೋಲು ಗಳಿಸಿದರು.ಬೊವೇರಿಯಂಡ ತಂಡದ ಜಿತಿನ್ ಒಂದು ಗೋಲು ಗಳಿಸಿದರು.

ನೆಲ್ಲಮಕ್ಕಡ ಮತ್ತು ಪುದಿಯೋಕ್ಕಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನೆಲ್ಲ ಮಕ್ಕಡ ಗೆಲವು ಸಾಧಿಸಿತು. ನೆಲ್ಲಮಕ್ಕಡ 3-1 ಅಂತರದ ಗೆಲವು ಸಾಧಿಸಿತು. ಪುದಿಯೋಕ್ಕಡ ಪ್ರಧಾನ್ ಒಂದು ಗೋಲ್, ನೆಲ್ಲ ಮಕ್ಕಡ ಮೋನಪ್ಪ. ಆಶಿಕ್, ಸೋಮಯ್ಯ ತಲಾ ಒಂದೊಂದು ಗೋಲು ಗಳಿಸಿದರು.

ಕುಪ್ಪಂಡ ಭರ್ಜರಿ ವಿಜಯ:

ನೆರವಂಡ ಮತ್ತು ಕುಪ್ಪಂಡ (ಕೈಕೇರಿ ) ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಕುಪ್ಪಂಡ (5-1) ಐದು ಒಂದು ಗೋಲಿನಿಂದ ಭರ್ಜರಿ ಜಯಗಳಿಸಿತು. ನೆರವಂಡ ತಂಡದ ಆಟಗಾರರಾದ ವಿಶಾಲ್ ದೇವಯ್ಯ ಒಂದು ಗೋಲು ಪಡೆದರೆ ಕುಪ್ಪಂಡ ತಂಡದಿಂದ ಸೋಮಯ್ಯ ಎರಡು ಗೋಲು, ಪ್ರಧಾನ್, ಕವನ್, ಜಗತ್ ಒಂದೊಂದು ಗೋಲು ಗಳಿಸಿದರು.

ಇಂದು ಪಂದ್ಯಗಳಿಗೆ ರಜೆ:

ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ಪಂದ್ಯಗಳು ನಡೆಯುವುದಿಲ್ಲ. ಶನಿವಾರ ಸೆಮಿಫೈನಲ್ ಪಂದ್ಯಾಟಗಳು ಜರುಗಲಿದೆ.

ನಾಳೆ ವಿಶಿಷ್ಟ ಸ್ಪರ್ಧೆ:

ಶನಿವಾರ ಕೊಡವ ಪುರುಷರಿಗೆ ಕೊಂಬಮೀಸೆರ ಬಂಬ, ಹಾಗೂ ಕೊಡವತಿ ಮಹಿಳೆಯರಿಗೆ ಬೋಜಿ ಜಡೆರ ಬೋಜಕ್ಕ ಎನ್ನುವ ಪೈಪೋಟಿ ಆಯೋಜಿಸಲಾಗಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ