ದುಗ್ಗಳ ಸದಾನಂದ ಕನ್ನಡಪ್ರಭ ವಾರ್ತೆ ನಾಪೋಕ್ಲು
ನೆಲ್ಲಮಕ್ಕಡ ತಂಡದ ಆಟಗಾರರಾದ ಪ್ರತೀಕ್ ಪೂವಣ್ಣ ಹೊಡೆದ ಎರಡು ಗೋಲುಗಳು, ಆಶಿಕ್ ಅಪ್ಪಣ್ಣ ಮತ್ತು ಅಯ್ಯಪ್ಪ ಹೊಡೆದ ತಲಾ ಒಂದು ಗೋಲುಗಳ ನೆರವಿನಿಂದ ದಾಸಂಡ ತಂಡದ ವಿರುದ್ಧ 4-0 ಅಂತರದ ಭರ್ಜರಿ ಜಯ ಗಳಿಸಿ ನೆಲ್ಲಮಕ್ಕಡ ಮುಂದಿನ ಸುತ್ತು ಪ್ರವೇಶಿಸಿತು.ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯ ಶನಿವಾರದ ಪಂದ್ಯಗಳಲ್ಲಿ ಕರ್ತ ಮಾಡ ತಂಡ ಮೊಣ್ಣಂಡ ವಿರುದ್ಧ 3- 0 ಅಂತರದಿಂದ, ಕಲ್ಯಾಟಂಡ ಮಾದಂಡ ವಿರುದ್ಧ 1-0 ಅಂತರದಿಂದ, ಅರೆಯಡ ಅಮ್ಮಂಡ ವಿರುದ್ಧ 2-0 ಅಂತರದಿಂದ, ಮಂಡೆಪಂಡ ಅಪ್ಪಡೇರಂಡ ವಿರುದ್ಧ 4-1 ಅಂತರದಿಂದ ಜಯಗಳಿಸಿತ್ತು.
ಬೊಳ್ಳೇಪಂಡ ಮತ್ತು ಕರೋಟಿರ ತಂಡಗಳ ನಡುವಿನ ಆಟ ಸಮಬಲದಿಂದ ಕೂಡಿದ್ದು ಬಳಿಕ ಟೈ ಬ್ರೇಕರ್ ನಲ್ಲಿ ಕರೋಟಿರ ತಂಡ ನಾಲ್ಕು ಗೋಲು ಗಳಿಸಿದರೆ ಬೊಳ್ಳೇಪಂಡ ತಂಡ ಮೂರು ಗೋಲು ಗಳಿಸಿತು. ಕರೋಟಿರ ತಂಡ ಸೋಲನ್ನು ಒಪ್ಪಿಕೊಂಡಿತು.ಕಡಿಯಮಾಡ ಮತ್ತು ಕೊಕ್ಕಂಡ ತಂಡಗಳು ನಡುವೆಯೂ ಸಮಬಲದ ಹೋರಾಟ ನಡೆದು ವೀಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿತು. ಬಳಿಕ ಟೈ ಬ್ರೇಕರ್ ನಲ್ಲಿ ಕೊಕ್ಕಂಡ ತಂಡದ ಆಟಗಾರರು ಆರು ಗೋಲು ಗಳಿಸಿದರೆ ಕಡಿಯಮಾಡ ಐದು ಗೋಲು ಗಳಿಸಿತು.
ಅಪ್ಪಚಟ್ಟೋಳಂಡ ಮತ್ತು ಮಚ್ಚಾರಂಡ ತಂಡಗಳ ನಡುವೆಯೂ ಸಮಬಲದ ಹೋರಾಟ ನಡೆಯಿತು. ಬಳಿಕ ಟೈ ಬ್ರೇಕರ್ ನಲ್ಲಿ ತಂಡದ ಆಟಗಾರರು 5 ಗೋಲು ಗಳಿಸಿದರು. ಮಚ್ಚಾರಂಡ ತಂಡದ ಆಟಗಾರರು ನಾಲ್ಕು ಗೋಲು ಗಳಿಸಿದರು. ಅಪ್ಪಚೆಟ್ಟೋಳಂಡ ತಂಡ ಮುಂದಿನ ಸುತ್ತು ಪ್ರವೇಶಿಸಿತು.ಉಳಿದಂತೆ ಪೆಮ್ಮಂಡ ಮೂಕಳೆರ ವಿರುದ್ಧ 2-0 ಅಂತರದಿಂದ, ಮುಕ್ಕಾಟಿರ (ಹರಿಹರ )ಬಾದುಮಂಡ ವಿರುದ್ಧ 3-0 ಅಂತರದಿಂದ, ನಾಗಂಡ ಅಜ್ಜಮಾಡ ವಿರುದ್ಧ 3- 2 ಅಂತರದಿಂದ, ಐನಂಡ ಕಂಬೇಯಂಡ ವಿರುದ್ಧ 2-0 ಅಂತರದಿಂದ, ಮಂದನೆರವಂಡ ಮುರುವಂಡ ವಿರುದ್ಧ 5-0 ಅಂತರದಿಂದ ಜಯಗಳಿಸಿತು.
ಹಾಕಿ ಪಟುಗಳ ಸಮ್ಮಿಲನ: ಕುಂಡ್ಯೋಳಂಡ ಕಪ್ ಹಾಕಿ ಉತ್ಸವದ ಅಂಗವಾಗಿ ಹಾಕಿ ಪಟುಗಳ ಸಮ್ಮಿಲನ ಕಾರ್ಯಕ್ರಮವನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಮಾಜಿ ಅಂತಾರಾಷ್ಟ್ರೀಯ, ದೇಶಿಯ ಮತ್ತು ರಾಜ್ಯಮಟ್ಟದ ಹಾಕಿ ಆಟಗಾರರು ಇವರೊಂದಿಗೆ ಹಾಕಿ ಅಂಪೈರ್ ಗಳು, ಕೋಚ್ ಗಳು, ವೀಕ್ಷಕ ವಿವರಣೆಗಾರರನ್ನು ಒಳಗೊಂಡಂತೆ ಈ ಸಮ್ಮಿಲನ ಕಾರ್ಯಕ್ರಮವನ್ನು ಏ. 27ರಂದು ಬೆಳಗ್ಗೆ 10 ರಿಂದ 4ರ ವರೆಗೆ ನಾಪೋಕ್ಲು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಸಲಾಗುವುದು. ಭಾಗವಹಿಸಲು ಇಚ್ಛಿಸುವವರು ಚೆಪ್ಪುಡಿರ ಕಾರ್ಯಪ್ಪ ಅವರನ್ನು ಸಂಪರ್ಕಿಸಲು ಕೋರಲಾಗಿದೆ. ಚೆಪ್ಪುಡಿರ ಕಾರ್ಯಪ್ಪ ಅವರ ಮೊಬೈಲ್ ಸಂಖ್ಯೆ 9900369212ಕುಂಡ್ಯೋಳಂಡ ಹಾಕಿ ಉತ್ಸವ -2024: ನಾಪೋಕ್ಲುವಿನಲ್ಲಿ ಆಯೋಜಿತ 24 ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವದ ಈವರೆಗಿನ ಮಾಹಿತಿ
ಒಟ್ಟು ತಂಡಗಳು - 360, ಆಟವಾಡಿ ಹೊರಹೋದ ತಂಡಗಳು - 217, ಒಟ್ಟು ದಾಖಲಾದ ಗೋಲ್ ಗಳು - 511, ಪೆನಾಲ್ಟಿ ಕಾರ್ನರ್ ಗಳು - 865, ಗೋಲಾಗಿ ಪರಿವರ್ತನೆಯಾದ ಪೆನಾಲ್ಟಿ ಕಾರ್ನರ್ ಗಳು - 82, ಗ್ರೀನ್ ಕಾಡ್೯ - 35 ( ರೆಡ್ ಮತ್ತು ಎಲ್ಲೋ ಕಾಡ್೯ಗಳು ಈವರೆಗೂ ದಾಖಲಾಗಿಲ್ಲ)ಟ್ರೈಬ್ರೇಕರ್ - 16, ಫೀಲ್ಡ್ ಸ್ರ್ಕೋಕ್ - 05, ಮಹಿಳಾ ಆಟಗಾರರು - 32, ವೀಕ್ಷಕ ವಿವರಣೆಗಾರರು - 12, ಅಂಪೈರ್ ಗಳು 21 ಪುರುಷ 2 ಮಹಿಳೆಯರು
ಶನಿವಾರದವರೆಗೆ 3 ನೇ ಮೈದಾನದಲ್ಲಿ ನಿಗದಿತ ಎಲ್ಲಾ ಪಂದ್ಯಾಟ ಮುಕ್ತಾಯಗೊಂಡಿದೆ. 1 ಮತ್ತು 2 ನೇ ಮೈದಾನದಲ್ಲಿ ಮುಂದಿನ ಪಂದ್ಯಾಟಗಳು ನಿಗದಿಯಂತೆ ನಡೆಯಲಿದೆಇಂದಿನ ಪಂದ್ಯಗಳು: ಮೈದಾನ ಒಂದು: 9 ಗಂಟೆಗೆ ಮಲ್ಚಿರ-ಚೌರೀರ(ಹೊದ್ದೂರು), 10 ಗಂಟೆಗೆ ಕಾಂಡಂಡ-ಬಾಳೆಯಡ, 11 ಗಂಟೆಗೆ ಮಣವಟ್ಟೀರ-ಮಾಳೇಟಿರ, 12 ಗಂಟೆಗೆ ಉದಿಯಂಡ-ಕುಲ್ಲೇಟಿರ, 1 ಗಂಟೆಗೆ ಚೆಪ್ಪುಡಿರ-ಚೊಟ್ಟೆಯಂಡಮಾಡ, 2 ಗಂಟೆಗೆ ಮಾಚಿಮಮಡ-ಚಿರಿಯಪಂಡ, 3 ಗಂಟೆಗೆ ಕೇಲಪಂಡ-ಚೇನಂಡ, 4 ಗಂಟೆಗೆ ಐಚೆಟ್ಟಿರ-ಚಂಗೇಟಿರ
ಮೈದಾನ 2: 9 ಗಂಟೆಗೆ ತಿರುತೆರ-ಅಂಜಪರವಂಡ, 10 ಗಂಟೆಗೆ ಬೇಪಡಿಯಂಡ-ಕೂತಂಡ, 11 ಗಂಟೆಗೆ ಮಾಪಣಮಾಡ-ಚಿಂದಮಾಡ, 12 ಗಂಟೆಗೆ ವಲ್ಲಂಡ-ನೆರವಂಡ, 1ಗಂಟೆಗೆ ಮೂಕೊಂಡ-ಕುಮ್ಮಂಡ, 2 ಗಂಟೆಗೆ ಬೊಳ್ಳಂಡ-ಕಾಣತಂಡ, 3 ಗಂಟೆಗೆ ಪುಲ್ಲಂಗಡ-ಇಟ್ಟೀರ, 4 ಗಂಟೆಗೆ ಪಾಂಡಂಡ-ಚಂಗುಲಂಡ