ಕೊಡವ ಕೌಟುಂಬಿಕ ಹಾಕಿ: ಕೂತಂಡ ಭರ್ಜರಿ ಮುನ್ನಡೆ

KannadaprabhaNewsNetwork |  
Published : Apr 22, 2026, 02:45 AM IST
ನಾಪೋಕ್ಲು ಕೆಪಿಎಸ್ ಶಾಲೆಯ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ  ಕೊಡವ ಕೌಟುಂಬಿಕ ಹಾಕಿಯ ಪಂದ್ಯಾವಳಿಯಲ್ಲಿ ರೋಚಕ ಕ್ಷಣಗಳು.  | Kannada Prabha

ಸಾರಾಂಶ

ಕೆಪಿಎಸ್ ಶಾಲೆಯ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಚೇನಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಮಂಗಳವಾರ ಕೂತಂಡ ಕಾರೇರ ವಿರುದ್ಧ 6-0 ಸೊನ್ನೆ ಅಂತರದ ಭರ್ಜರಿ ಜಯಗಳಿಸಿತು.

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿನ ಕೆಪಿಎಸ್ ಶಾಲೆಯ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಚೇನಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಮಂಗಳವಾರ ಕೂತಂಡ ಕಾರೇರ ವಿರುದ್ಧ 6-0 ಸೊನ್ನೆ ಅಂತರದ ಭರ್ಜರಿ ಜಯಗಳಿಸಿತು. ಕೂತಂಡ ತಂಡದ ಆಟಗಾರರಾದ ಬೋಪಣ್ಣ -1, ಸಂತೋಷ್

-2, ಸೋಮಣ್ಣ-1, ಪೂಣಚ್ಚ-1 ಹಾಗೂ ಸಜನ್ ದೇವಯ್ಯ-1 ಗೋಲು ಗಳಿಸಿ ತಂಡಕ್ಕೆ ಭರ್ಜರಿ ಜಯ ತಂದಿತ್ತರು.

ಅಂಜಪರವಂಡ ಮುಂಡಿಯೋಳಂಡ ಮುಂದು ವಿರುದ್ಧ 2-0 ಅಂತರದಿಂದ, ಚೇಂದೀರ ಕೋಟೆರ ವಿರುದ್ಧ 3-1 ಅಂತರದಿಂದ, ಕನ್ನಂಡ ಮೇವಡ ವಿರುದ್ಧ 2-1 ಅಂತರದಿಂದ ಜಯಗಳಿಸಿತು.

ಪಾಡೆಯಂಡ ಮತ್ತು ಕಾಯಪಂಡ ತಂಡಗಳ ನಡುವೆ ಸಮಬಲದ ಹೋರಾಟ ನಡೆಯಿತು .ಪಂದ್ಯದಲ್ಲಿ ಎರಡೂ ತಂಡಗಳು ತಲಾ ಒಂದು ಗೋಲು ಗಳಿಸಿದವು.

ಪಾಡೆಯಂಡ ಕಾಯಪಂಡ ವಿರುದ್ಧ 4-3 ಅಂತರದಿಂದ ಟೈಬ್ರೇಕರ್ ನಲ್ಲಿ ಜಯಗಳಿಸಿತು.

ಇಂದಿನ ಪಂದ್ಯಗಳು

ಮೈದಾನ 1`9 ಕ್ಕೆ ಕರವಂಡ v/s ಚೇನಂಡ 10 ಕ್ಕೆ ಕರ್ತಮಾಡ v/s ಕುಲ್ಲೇಟಿರ

11ಕ್ಕೆ ಕುಂಡ್ಯೋಳಂಡ v/s ಬೊವೇರಿಯಂಡ 12ಕ್ಕೆ ಕಲಿಯಂಡ v/s ಪೆಮ್ಮಂಡ 1ಕ್ಕೆ ಮೇಚಿಯಂಡ v/s ಅಪ್ಪನೆರವಂಡ 2ಕ್ಕೆ ಬಿದ್ದಾಟಂಡ v/s ನೆರವಂಡ ಮೈದಾನ 2

9ಕ್ಕೆ ಪಳಂಗಂಡ v/s ಮಾತಂಡ 10ಕ್ಕೆ ಮೂಕಳಮಾಡ v/s ಕಾಂಡಂಡ 11ಕ್ಕೆ ಅಮ್ಮಣಿಚಂಡ v/s ಮುರುವಂಡ 12ಕ್ಕೆ ಕುಪ್ಪಂಡ (ನಾಂಗಾಲ) v/s ಸಣ್ಣುವಂಡ 1ಕ್ಕೆ ಚೌರೀರ (ಹೊದ್ದೂರ್) v/s‌ ಪುಲ್ಲಂಗಡ 2ಕ್ಕೆ ಬೊಳ್ಳಚಂಡ v/s ಕೂತಂಡ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭರತನಾಟ್ಯ ಕರಗತ ಮಾಡಿಕೊಳ್ಳುವುದೇ ಕಲೆ: ಡಾ. ಮೋಹನ್ ಆಳ್ವ
ಮಾಹೆ: ವೈರೋಗ್ಲೋಬಲ್ 2026’ ಸಮ್ಮೇಳನ ಸಂಪನ್ನ