ಕನ್ನಡಪ್ರಭ ವಾರ್ತೆ ಶ್ರೀಮಂಗಲ
ಜನಸಂಖ್ಯೆ ಹೆಚ್ಚಾದಷ್ಟೂ ನಮ್ಮ ಸಂಸ್ಕೃತಿ ಬಲಗೊಳ್ಳುತ್ತದೆ. ಸಮಾಜದಲ್ಲಿ ಹೆಚ್ಚಿನ ಸ್ಥಾನಮಾನ ಪಡೆದುಕೊಳ್ಳಲು ಸಹಕಾರವಾಗುತ್ತದೆ. ನಮ್ಮ ಜನಾಂಗದ ಮುಂದಿನ ಭವಿಷ್ಯವನ್ನು ಮನಸಿನಲ್ಲಿಟ್ಟುಕೊಂಡು ಮಕ್ಕಳ ಸಂಖ್ಯೆಯನ್ನು ವೃದ್ಧಿಸಲು ಮನಸ್ಸು ಮಾಡಬೇಕು ಎಂದರು.ಮತ್ತೋರ್ವ ಅತಿಥಿ ಮುಕ್ಕಾಟಿರ ವಾಣಿ ವಾಸು ಮಾತನಾಡಿ, ಚಂಗ್ರಾಂದಿ ಪತ್ತಲೋದಿಯ ಹೆಸರಿನಲ್ಲಿ ಸೃಷ್ಠಿ ಮಾಡಿದ ಈ ಸಾಂಸ್ಕೃತಿಕ ವೇದಿಕೆಯನ್ನು ಎಲ್ಲರೂ ಉತ್ತಮವಾಗಿ ಬಳಸಿಕೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವಂತಾಗಬೇಕು. ಕೊಡವ ಭಾಷೆಯನ್ನು ಉಳಿಸಿ ಬೆಳೆಸುವ ಸಲುವಾಗಿ ಪೋಷಕರು ಮಕ್ಕಳೊಂದಿಗೆ ಕೊಡವ ಭಾಷೆಯಲ್ಲೇ ಮಾತನಾಡಬೇಕು ಎಂದು ಹೇಳಿದರು.ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ ಹಾಗೂ ಉಪಾಧ್ಯಕ್ಷ ಮಚ್ಚಮಾಡ ಸುಮಂತ್, ಕೊಡವ ಸಮಾಜ ಕೊಡವ ಜನಾಂಗ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ಕೈಗೊಂಡಿರುವ ಕಾರ್ಯ ಚಟುವಟಿಕೆಗಳ ಮಾಹಿತಿಯನ್ನು ಸಭೆಗೆ ನೀಡಿದರು.ವೇದಿಕೆಯಲ್ಲಿ ಉಪಸ್ಥಿತರಿದ್ದ ಮತ್ತೋರ್ವ ಅತಿಥಿ ಚೆಟ್ಟಂಗಡ ಗ್‌ಣಿ ಕಾರ್ಯಪ್ಪ, ಪತ್ತಲೋದಿ ಶುಭ ಹಾರೈಸಿದರು.ಈ ಸಂದರ್ಭ ದಾನಿಗಳಾದ ಬಾದುಮಂಡ ಚಿಮ್ಮ ಉತ್ತಯ್ಯ ಅವರನ್ನು ಟಿ.ಶೆಟ್ಟಿಗೇರಿ ಕೊಡವ ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಚೆಟ್ಟಂಗಡ ಕುಟುಂಬದ ಮಹಿಳೆಯರ ‘ಬದ್‌ಕ್‌ರ ಪಾಟ’ ನಾಟಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಪ್ರದರ್ಶನ ಹಾಗೂ ಆಂಗೋಡ್ ಕೇರಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಜನರ ಮನ ಗೆಲುವಲ್ಲಿ ಯಶಸ್ವಿಯಾಯಿತು.