ಮಡಿಕೇರಿ : ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಸ್ವಯಂ ಆಡಳಿತ ಕೊಡವರ ಜನ್ಮಸಿದ್ಧ, ಅಂತರ್ಗತ, ಮೂಲಭೂತ, ಸಾಂವಿಧಾನಿಕ ಹಾಗೂ ಮಾನವ ಹಕ್ಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಪ್ರತಿಪಾದಿಸಿದರು.
ಭಾರತದ ವಿವಿಧ ಪ್ರದೇಶಗಳಿಗೆ ನೀಡಿರುವ ಸ್ವಾಯತ್ತ ವ್ಯವಸ್ಥೆಗಳ ಮಾದರಿಯಲ್ಲಿ ಕೊಡವಲ್ಯಾಂಡ್‌ಗೂ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಸ್ವಯಂ ಆಡಳಿತ ನೀಡಬೇಕು. ಕೊಡವರು ಜಾತಿ ಅಥವಾ ಧರ್ಮವಲ್ಲ, ವಿಶಿಷ್ಟ ಜನಾಂಗೀಯ ಸಮುದಾಯವಾಗಿದ್ದು, 2027ರ ರಾಷ್ಟ್ರೀಯ ಜನಗಣತಿಯಲ್ಲಿ ಪ್ರತ್ಯೇಕವಾಗಿ ಗುರುತಿಸಿ ದಾಖಲಿಸಬೇಕು ಎಂದು ಹೇಳಿದರು.
ಕೊಡವ ತಕ್ಕ್ ಭಾಷೆಗೆ 8ನೇ ಅನುಸೂಚಿಯಲ್ಲಿ ಸ್ಥಾನ, ಕೊಡವರ ಆಧ್ಯಾತ್ಮಿಕ ತಾಣಗಳಾದ ಮಂದ್ ಮತ್ತು ದೇವಬನಗಳಿಗೆ ಮಾನ್ಯತೆ, ತಲಕಾವೇರಿಯ ಪವಿತ್ರತೆಯ ಗುರುತಿಸುವಿಕೆ, ದೇವಟ್‌ಪರಂಬು ನರಮೇಧ ಸ್ಥಳದಲ್ಲಿ ಸ್ಮಾರಕ ನಿರ್ಮಾಣ, ಕೊಡವ ಪ್ರದೇಶಕ್ಕೆ ಇನ್ನರ್ ಲೈನ್ ಪರ್ಮಿಟ್ ಮಾದರಿಯ ರಕ್ಷಣೆ ಹಾಗೂ ಕೊಡವ ಸಾಂಪ್ರದಾಯಿಕ ಬಂದೂಕು ಪರಂಪರೆಗೆ ಸಂವಿಧಾನಾತ್ಮಕ ಮಾನ್ಯತೆ ನೀಡುವಂತೆ ಒತ್ತಾಯಿಸಿದರು.ಮಾನವ ಸರಪಳಿಯಲ್ಲಿ ಭಾಗವಹಿಸಿದವರು ಕೊಡವರ ಭೂಮಿ, ಸಂಸ್ಕೃತಿ ಮತ್ತು ಹಕ್ಕುಗಳ ರಕ್ಷಣೆಗೆ ಸಿಎನ್‌ಸಿಯ ಹೋರಾಟಕ್ಕೆ ತಮ್ಮನ್ನು ಸಮರ್ಪಿಸಿಕೊಂಡು ಪ್ರಮಾಣವಚನ ಸ್ವೀಕರಿಸಿದರು. ಮಾಣಿಪಂಡ ಪಾರ್ವತಿ ಜೋಯಪ್ಪ, ಮೂಡೆರ ಸುಮಿ ದೇವಯ್ಯ, ಬಾಚರಣಿಯಂಡ ಜಾನಕಿ, ನೂರೆರ ಸಹನಾ ಮುತ್ತಮ್ಮ, ಅಜ್ಜಿಕುಟ್ಟಿರ ಸುಶೀಲ, ನಾಮೆರ ಸೋನು, ಕೋಟೆರ ಅಶ್ವಿ ಅಕ್ಕಮ್ಮ, ಚಂಗುಲಂಡ ಸೂರಜ್, ಚೆಕ್ಕೆರ ಸಚಿನ್ ಸೋಮಯ್ಯ, ಕೋಳೆರ ರಾಜ ನರೇಂದ್ರ, ಬಾಚರಣಿಯಂಡ ಚಿಪ್ಪಣ್ಣ , ಕಿರಿಯಮಾಡ ಶೆರಿನ್ ಕೊಡವ, ಅಜ್ಜಿಕುಟ್ಟಿರ ಲೋಕೇಶ್ ಮತ್ತಿತರರು ಪಾಲ್ಗೊಂಡಿದ್ದರು.