ಕೊಡವೂರ್ದ ಬ್ರಹ್ಮಕಲಶೋತ್ಸವ: ಪೂರ್ವಭಾವಿ ಸಭೆ

KannadaprabhaNewsNetwork |  
Published : Sep 28, 2026, 02:15 AM IST
ಕೊಡವೂರು ದೇವಳದ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ ನಡೆಯಿತು | Kannada Prabha

ಸಾರಾಂಶ

ಕೊಡವೂರಿನ ಮಹಾತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ, 2027ರ ಜ.20ರಂದು ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ. ಇದರ ಪೂರ್ವಭಾವಿ ಸಮಾಲೋಚನಾ ಸಭೆ ದೇವಳದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್ ನೇತೃತ್ವದಲ್ಲಿ ನಡೆಯಿತು.

ಉಡುಪಿ: ಇಲ್ಲಿನ ಕೊಡವೂರಿನ ಮಹಾತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ, 2027ರ ಜ.20ರಂದು ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ. ಇದರ ಪೂರ್ವಭಾವಿ ಸಮಾಲೋಚನಾ ಸಭೆ ದೇವಳದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್ ನೇತೃತ್ವದಲ್ಲಿ ನಡೆಯಿತು.ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾಗು ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಕೊಡವೂರು, ಬ್ರಹ್ಮಕಲಶೋತ್ಸವ ಸಮಾರಂಭ ಅತ್ಯಂತ ವಿಜೃ೦ಭಣೆಯಿಂದ ಮಾಡಲು ನಿರ್ಧರಿಸಿದ್ದೇವೆ. ಅದಕ್ಕೆ ಎಲ್ಲ ಭಗವದ್ಭಕ್ತರ ಸರ್ವರೀತಿಯ ಸಹಕಾರ ಬೇಕು ಎಂದರು.

ನಂತರ ಸಭೆಯಲ್ಲಿ ಧಾರ್ಮಿಕ, ಹೊರೆಕಾಣಿಕೆ, ಮೆರವಣಿಗೆ, ಪ್ರಚಾರ, ಆರೋಗ್ಯ, ಸ್ವಾಗತ, ಸಾಂಸ್ಕೃತಿಕ, ಉಗ್ರಾಣ, ಊಟೋಪಚಾರ, ಕಚೇರಿ ನಿರ್ವಹಣಾ, ಸ್ವಯಂ ಸೇವಕರ, ಸ್ವಚ್ಛತಾ, ವಿದ್ಯುತ್ ಅಲಂಕಾರ, ಚಪ್ಪರ, ಮಹಿಳಾ ಘಟಕ, ಭದ್ರತಾ ವ್ಯವಸ್ಥೆ, ಪಾರ್ಕಿಂಗ್, ವೇದಿಕೆ, ಭಜನಾ, ಬಾಣಸಿಗರ ಹೀಗೆ ಹತ್ತು ಹಲವು ಸಮಿತಿಗಳನ್ನು ರಚಿಸಲಾಯಿತು.

ಪ್ರಮುಖರಾದ ಆನಂದ ಪಿ. ಸುವರ್ಣ, ನಾಗರಾಜ್ ಸಾಲ್ಯಾನ್, ಹರಿಯಪ್ಪ ಕೋಟ್ಯಾನ್, ಕೃಷ್ಣಮೂರ್ತಿ ಆಚಾರ್ಯ, ತೋಟದಮನೆ ದಿವಾಕರ ಶೆಟ್ಟಿ, ಪಿ. ಗುರುರಾಜ್ ರಾವ್, ಪಾಂಡುರಂಗ ಮಲ್ಪೆ, ಆಶಾಚಂದ್ರ ಶೇಖರ್, ವಿಜಯ ಕೊಡವೂರು, ಮೀನಾಕ್ಷಿ ಮಾಧವ ಬನ್ನಂಜೆ, ನಾರಾಯಣ ಬಲ್ಲಾಳ್, ಉಮೇಶ್‌ ರಾವ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಭಾಸ್ಕರ್ ಪಾಲನ್, ಎ. ರಾಜ ಸೇರಿಗಾರ್, ಕೆ. ಬಾಬ, ಉಷಾ ಎ. ಸುವರ್ಣ, ಶೀಲಾ ಸೇರಿಗಾರ್ ಇದ್ದರು.

ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಜನಾರ್ದನ್ ಕೊಡವೂರು ಸ್ವಾಗತಿಸಿ, ಸಮಿತಿ ಪ್ರಧಾನ ಕಾರ್ಯದರ್ಶಿ ಸತೀಶ್ ಕೊಡವೂರು ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್ ಶಾಸಕರಿಗೇ ಸರ್ಕಾರದ ಮೇಲೆ ವಿಶ್ವಾಸವಿಲ್ಲ: ಮಟ್ಟಾರು
ಕುಟುಂಬದ ಭದ್ರತೆಗೆ ಮನೆಯ ಹಿರಿಯರು ಬೇರು ಇದ್ದಂತೆ : ನ್ಯಾ. ರಾಮಲಿಂಗಪ್ಪ