ಕೊಡವೂರು ಶಂಕರನಾರಾಯಣ ದೇವಸ್ಥಾನ: ಮುದ್ದುಕೃಷ್ಣ ವೇಷ ಸ್ಪರ್ಧೆ ಸಂಭ್ರಮ

KannadaprabhaNewsNetwork |  
Published : Sep 13, 2025, 02:06 AM IST
11ಮುದ್ದು | Kannada Prabha

ಸಾರಾಂಶ

ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟನಮಿ ಪ್ರಯುಕ್ತ ಮುದ್ದುಕೃಷ್ಣ ಸ್ಪರ್ಧೆ ಸಂಪನ್ನಗೊಂಡಿತು.

ಉಡುಪಿ: ಆಧುನಿಕ ಸಂಸ್ಕೃತಿ ವಿಜೃಂಭಿಸುತ್ತಿರುವ ಈ ಕಾಲಘಟ್ಟದಲ್ಲಿ ಮಕ್ಕಳಿಗೆ ಈ ನೆಲದ ಮಣ್ಣಿನ ಸಂಸ್ಕೃತಿ ಹಾಗೂ ದೈವಿಕ ಪ್ರಜ್ಞೆಯ ಜಾಗೃತಿಯನ್ನು ಎಳವೆಯಲ್ಲಿಯೇ ಮೂಡಿಸಬೇಕಾದ ಕರ್ತವ್ಯ ನಮ್ಮೆಲ್ಲರದ್ದಾಗಿದೆ ಎಂದು ಹಿರಿಯ ರಂಗಕರ್ಮಿ ಎಂ.ಎಸ್.ಭಟ್ ಹೇಳಿದ್ದಾರೆ.

ಇಲ್ಲಿನ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟನಮಿ ಪ್ರಯುಕ್ತ ನಡೆದ ಮುದ್ದುಕೃಷ್ಣ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೂರು ವರ್ಷದ ಒಳಗಿನ ಹಾಗೂ ಮೂರರಿಂದ ಆರು ವರ್ಷದೊಳಗಿನ ಮಕ್ಕಳಿಗೆ ಎರಡು ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ 85 ಸ್ಪರ್ಧಿಗಳು ಭಾಗವಹಿಸಿದ್ದರು.

ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ ಕೊಡವೂರು ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಜಿಲ್ಲಾ ಖಜಾನಾಧಿಕಾರಿ ಟಿ. ಚಂದ್ರಶೇಖರ್, ಭಕ್ತವೃಂದದ ಅಧ್ಯಕ್ಷ ದಿವಾಕರ ಶೆಟ್ಟಿ ತೋಟದ ಮನೆ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಭಾಸ್ಕರ್ ಪಾಲನ್, ರಾಜ ಸೇರಿಗಾರ, ಯಶೋದರ ಸಾಲ್ಯಾನ್, ಕೆ.ಬಾಬಾ, ಉಷಾ, ಶೀಲಾ ಕೆ.ದೇವಾಡಿಗ, ದೇವಳದ ಲೆಕ್ಕ ಪರಿಶೋಧಕ ಉಮೇಶ್ ರಾವ್, ವ್ಯವಸ್ಥಾಪಕ ವಾಸುದೇವ ಉಪಾಧ್ಯ, ಪ್ರಧಾನ ಅರ್ಚಕ ಸೀತಾರಾಮ ಆಚಾರ್ಯ, ಗೋವಿಂದ ಪಾಲನ್ ಇದ್ದರು.

ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದ ಎಂ.ಎಸ್.ಭಟ್, ಮಲ್ಲಿಕಾ ದೇವಿ, ಬಾಲಕೃಷ್ಣ ಕೊಡವೂರು ಇವರನ್ನು ಗೌರವಿಸಲಾಯಿತು. ಸತೀಶ್ ಕೊಡವೂರು ಸ್ವಾಗತಿಸಿ, ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಡೂರು ಉತ್ಸವ ಆಚರಣೆ ಮುಂದೂಡಿಕೆ: ಜಿಮ್ ಚೇತನ್
ನಗರದ ವಿದ್ಯಾರ್ಥಿಗಳಿಗೆ ಹಳ್ಳಿಯಜೀವನದ ಪಠ್ಯ ಅಗತ್ಯ: ಡಿಸಿಎಂ