ಕೋಡಿ: ಗ್ರಾಪಂ ವ್ಯಾಪ್ತಿಯಲ್ಲಿ ‘ಹಸಿರು ಜೀವ’ ಅಭಿಯಾನಕ್ಕೆ ಚಾಲನೆ

KannadaprabhaNewsNetwork |  
Published : Jun 09, 2025, 12:55 AM IST
7ಹಸಿರುಜೀವ | Kannada Prabha

ಸಾರಾಂಶ

ಕೋಡಿ ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಕೋಟದ ಪಂಚವರ್ಣ ಸಂಘಟನೆ ಸಂಯೋಜನೆಯೊಂದಿಗೆ, ಶಿಶು ಅಭಿವೃದ್ದಿ ಯೋಜನೆ ಬ್ರಹ್ಮಾವರ, ಸಮನ್ವಯ ಸಂಜೀವಿನಿ ಒಕ್ಕೂಟ ಕೋಡಿ ಇವರ ಸಹಕಾರದೊಂದಿಗೆ ಮೂರು ತಿಂಗಳ ‘ಪರಿಸರಸ್ನೇಹಿ - ಹಸಿರು ಜೀವ ಅಭಿಯಾನ’ಕ್ಕೆ ಚಾಲನೆ ದೊರೆಯಿತು.

ಕನ್ನಡಪ್ರಭ ವಾರ್ತೆ ಕುಂದಾಪುರ

ಕಾಡು ಕಡಿದು ನಾಡು ಮಾಡುವ ತವಕದಲ್ಲಿ ಮನುಕುಲ ತಮ್ಮ ಉಸಿರಿನ ಮೂಲವನ್ನೇ ನಾಶ ಮಾಡುತ್ತಿದ್ದಾನೆ. ಇದನ್ನು ಇನ್ನಾದರೂ ತಡೆಯಬೇಕಾದರೆ ಇಂದಿನಿಂದಲೇ ಪ್ರತಿಯೊಬ್ಬರೂ ಗಿಡ ನಡುವ ಸಂಕಲ್ಪ ಮಾಡಬೇಕು ಎಂದು ಕೋಡಿ ಗ್ರಾಮ ಪಂಚಾಯಿತಿ ಪೂರ್ವಾಧ್ಯಕ್ಷ ಪ್ರಭಾಕರ್ ಮೆಂಡನ್ ಹೇಳಿದರು.ಅವರು ಕೋಡಿ ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಕೋಟದ ಪಂಚವರ್ಣ ಸಂಘಟನೆ ಸಂಯೋಜನೆಯೊಂದಿಗೆ, ಶಿಶು ಅಭಿವೃದ್ದಿ ಯೋಜನೆ ಬ್ರಹ್ಮಾವರ, ಸಮನ್ವಯ ಸಂಜೀವಿನಿ ಒಕ್ಕೂಟ ಕೋಡಿ ಇವರ ಸಹಕಾರದೊಂದಿಗೆ ಮೂರು ತಿಂಗಳ ‘ಪರಿಸರಸ್ನೇಹಿ - ಹಸಿರು ಜೀವ ಅಭಿಯಾನ’ಕ್ಕೆ ಚಾಲನೆ ನೀಡಿ ಮಾತನಾಡಿದರು.ಪಂಚವರ್ಣದ ಪರವಾಗಿ ರವೀಂದ್ರ ಕೋಟ ಹಸಿರು ಜೀವ ಅಭಿಯಾನದ ಕುರಿತು ಸಮಗ್ರ ಮಾಹಿತಿ ನೀಡಿ ಇಡೀ ಜಿಲ್ಲೆಗೆ ಮಾದರಿ ಎಂಬಂತೆ ಒಂದು ಪಂಚಾಯಿತಿ ಮೂರು ತಿಂಗಳು ಗಿಡ ನೆಡುವ ಹಸಿರು ಜೀವ ಸಂಕಲ್ಪ ಯೋಜನೆ ನಿಜಕ್ಕೂ ಶ್ಲಾಘನೀಯ ಕಾರ್ಯ ಎಂದರು.ಕೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಖಾರ್ವಿ ಅಧ್ಯಕ್ಷತೆ ವಹಿಸಿ ಗಿಡ ವಿತರಿಸಿ ಹಸಿರು ಜೀವ ಅಭಿಯಾನ ಉದ್ಘಾಟಿಸಿದರು. ಪಂಚಾಯಿತಿ ಸದಸ್ಯರಾದ ಕೃಷ್ಣ ಪೂಜಾರಿ ಪಿ., ಸತೀಶ್ ಕುಂದರ್, ಕೋಟದ ಪಂಚವರ್ಣದ ಪ್ರಮುಖರಾದ ಕೇಶವ ಆಚಾರ್ ಕೋಟ, ಶಿಶು ಅಭಿವೃದ್ಧಿ ಇಲಾಖೆ ಲಕ್ಷ್ಮೀ, ಹಸಿರು ಅಭಿಯಾನದ ರುವಾರಿಗಳಾದ ಅಂಗನವಾಡಿ, ಸಂಜೀವಿನಿಯ ಸೇನಾನಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ನಿರ್ವಹಿಸಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಹಸಿರು ಜೀವ ಅಭಿಯಾನ ಕೋಡಿ ಭಾಗದ ಮಾರ್ಗದರ್ಶಿ ಯಮುನಾ ಎಲ್. ಕುಂದರ್ ವಂದಿಸಿ ತಮ್ಮ ಹಸಿರು ಅಭಿಯಾನದ ಅನುಭವಗಳನ್ನು ಸಭೆಯಲ್ಲಿ ಹಂಚಿಕೊಂಡರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ