ಸೆ.14ರಿಂದ ಕೋಡಿಕಲ್‌ ಸಾರ್ವಜನಿಕ ಶ್ರೀ ಗಣೇಶೋತ್ಸವ

KannadaprabhaNewsNetwork |  
Published : Aug 29, 2026, 02:00 AM IST
ಸಮಿತಿಯ ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು | Kannada Prabha

ಸಾರಾಂಶ

ವಿಶ್ವಹಿಂದೂ ಪರಿಷತ್‌ ಬಜರಂಗದಳ ಕೋಡಿಕಲ್‌ ಶಾಖೆ ಮತ್ತು ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 18ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮ ಸೆ.14ರಿಂದ 16ರವರೆಗೆ ವಿಶ್ವಕುಮಾರ ಜೋಯಿಸರ ನೇತೃತ್ವದಲ್ಲಿ ಕೋಡಿಕಲ್ ಕಟ್ಟೆಯ ಬಳಿ ನಡೆಯಲಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ತಿಳಿಸಿದರು.

ಮಂಗಳೂರು: ವಿಶ್ವಹಿಂದೂ ಪರಿಷತ್‌ ಬಜರಂಗದಳ ಕೋಡಿಕಲ್‌ ಶಾಖೆ ಮತ್ತು ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 18ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮ ಸೆ.14ರಿಂದ 16ರವರೆಗೆ ವಿಶ್ವಕುಮಾರ ಜೋಯಿಸರ ನೇತೃತ್ವದಲ್ಲಿ ಕೋಡಿಕಲ್ ಕಟ್ಟೆಯ ಬಳಿ ನಡೆಯಲಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ತಿಳಿಸಿದರು.ಅವರು ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆ.30ರಂದು ಗಣೇಶ ಚತುರ್ಥಿ ಪ್ರಯುಕ್ತ ಕೋಡಿಕಲ್‌ ಶಾಲಾ ವಠಾರದಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿದೆ ಅಂದು ಬೆಳಗ್ಗೆ 9ಕ್ಕೆ ಸ್ಪರ್ಧೆಗಳಿಗೆ ಸುರತ್ಕಲ್‌ ಎಎಸೈ ವಿನಯ್‌ ಕುಮಾರ್‌ ಚಾಲನೆ ನೀಡುವರು. ಬೆಳಗ್ಗೆ 9ರಿಂದ ಮಧ್ಯಾಹ್ನ 1ರ ವರೆಗೆ ಪ್ರಾದೇಶಿಕ ರಕ್ತಪೂರಣ ಕೇಂದ್ರ ವೆನ್ಲಾಕ್‌ ಜಿಲ್ಲಾಸ್ಪತ್ರೆ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಯಲಿದೆ ಎಂದರು.

ಸೆ.14ರಂದು ಕೋಡಿಕಲ್‌ ಕಟ್ಟೆ ಬಳಿ ಬೆಳಗ್ಗೆಯಿಂದ ರಾತ್ರಿವರೆಗೂ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. 6.30ಕ್ಕೆ ಶ್ರೀ ಮಹಾಗಣಪತಿ ವಿಗ್ರಹವನ್ನು ಮೆರವಣಿಗೆಯಲ್ಲಿ ಗಣೇಶ ಮಂಟಪಕ್ಕೆ ತರುವುದು, 9ಕ್ಕೆ ಶ್ರೀ ಮಹಾಗಣಪತಿ ಬಿಂಬ ಪ್ರತಿಷ್ಠೆ ನಡೆಯಲಿದೆ. 9.30ಕ್ಕೆ ಧ್ವಜಾರೋಹಣ, ವಂದೇ ಮಾತಂ ಹಾಗೂ ದೀಪ ಬೆಳಗಿಸಿ ಉದ್ಘಾಟನೆ, 10.30ಕ್ಕೆ ಮಹಾಗಣಪತಿ ಹೋಮ, ಮಧ್ಯಾಹ್ನ ಪೂಜೆ, ಮಧ್ಯಾಹ್ನ 3ರಿಂದ ಹರಿನಾಮ ಸಂಕೀರ್ತನೆ, ಸಂಜೆ 6ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ವಿಹಿಂಪ ಪ್ರಾಂತ ಸಹಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸುನೀಲ್‌ ಕುಲಕರ್ಣಿ ಧಾರ್ಮಿಕ ಪ್ರವಚನ ನೀಡುವರು. ರಾತ್ರಿ 8ಕ್ಕೆ ರಂಗಪೂಜೆ, ಮಹಾಪೂಜೆ ನಡೆಯಲಿದೆ. ರಾತ್ರಿ 9ಕ್ಕೆ ತುಳು ಪೌರಾಣಿಕ ನಾಟಕ ಪೊರೆಪುದಪ್ಪೆ ಜಲದುರ್ಗೆ ಪ್ರದರ್ಶನಗೊಳ್ಳಲಿದೆ. ಸೆ.15ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಂಜೆ 6ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ, ರಾತ್ರಿ ಮಹಾಪೂಜೆ ಬಳಿಕ ಒಂತೆ ಲೇಟಾಂಡ್‌ ನಾಟಕ ಪ್ರದರ್ಶನಗೊಳ್ಳಲಿದೆ. ಸೆ.16ರಂದು ಸಂಜೆ 6 ಗಂಟೆಗೆ ವಿಸರ್ಜನಾ ಪೂಜೆ ನಡೆದು, ಗಣೇಶ ಮಂಟಪದಿಂದ ಶ್ರೀ ವಿನಾಯಕನ ವೈಭವದ ಶೋಭಾಯಾತ್ರೆ ಕೋಡಿಕಲ್‌ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ದಂಬೆಲ್‌ನ ಫಲ್ಗುಣಿ ನದಿಯಲ್ಲಿ ವಿಸರ್ಜಿಸಲ್ಪಡುತ್ತದೆ ಎಂದರು.ಸಮಿತಿಯ ಅಧ್ಯಕ್ಷ ಮನೋಜ್‌ ಕುಮಾರ್‌ ಅವರು ಸಂಘಟನೆಯ ಸೇವಾ ಕಾರ್ಯಗಳ ಬಗ್ಗೆ ತಿಳಿಸಿದರು.

ಪ್ರಮುಖರಾದ ಕಿರಣ್‌ ಜೋಗಿ, ಸತೀಶ್‌ ಶೆಟ್ಟಿ, ಹರಿಪ್ರಸಾದ್‌ ಶೆಟ್ಟಿ, ಮಹೇಶ್ ಕೋಡಿಕಲ್‌ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡಕ್ಕಾಗಿ ಎಲ್ಲ ಭೇದ ಮರೆತು ಒಗ್ಗಟ್ಟಿನ ಹೋರಾಟ ಅವಶ್ಯ
ಹುನಗುಂದ ತಾಲೂಕು ಬರಪೀಡಿತವೆಂದು ಘೋಷಿಸಿ