ಭಾರಿ ಮಳೆಗೆ ಮುಳುಗಿದ ಕೊಳ್ಳೇಗಾಲದ ಪಾರಂಪರಿಕ ವೆಸ್ಲಿ ಸೇತುವೆ

KannadaprabhaNewsNetwork |  
Published : Aug 02, 2024, 12:47 AM IST
ವೆಸ್ಲಿ | Kannada Prabha

ಸಾರಾಂಶ

ಕಾವೇರಿ ಪ್ರವಾಹದಿಂದ ಕೊಳ್ಳೇಗಾಲ ತಾಲೂಕಿನ ಶಿವನ ಸಮುದ್ರದ ಪಾರಂಪಾರಿಕ ವೆಸ್ಲಿ ಸೇತುವೆ ಮುಳುಗಡೆಯಾಗಿ ಸೇತುವೆಯ ತುದಿ ಹಾನಿಗೊಳಗಾಗಿದೆ. 2017ರಲ್ಲಿ ಸಂಭವಿಸಿದ ಪ್ರವಾಹದಲ್ಲೂ ಕೂಡ ವೆಸ್ಲಿ ಸೇತುವೆ ಸುಮಾರು 50 ಮೀ. ಉದ್ದಕ್ಕೆ ಕಲ್ಲುಗಳು ಕುಸಿತಕ್ಕೆ ಒಳಗಾಗಿತ್ತು.

ಕೊಳ್ಳೇಗಾಲ: ಕಾವೇರಿ ಪ್ರವಾಹದಿಂದ ತಾಲೂಕಿನ ಶಿವನ ಸಮುದ್ರದ ಪಾರಂಪಾರಿಕ ವೆಸ್ಲಿ ಸೇತುವೆ ಮುಳುಗಡೆಯಾಗಿ ಸೇತುವೆಯ ತುದಿ ಹಾನಿಗೊಳಗಾಗಿದೆ. 2017ರಲ್ಲಿ ಸಂಭವಿಸಿದ ಪ್ರವಾಹದಲ್ಲೂ ಕೂಡ ವೆಸ್ಲಿ ಸೇತುವೆ ಸುಮಾರು 50 ಮೀ. ಉದ್ದಕ್ಕೆ ಕಲ್ಲುಗಳು ಕುಸಿತಕ್ಕೆ ಒಳಗಾಗಿತ್ತು. ನಂತರ, 2 ಕೋಟಿ ವೆಚ್ಚದಲ್ಲಿ ಪುರಾತತ್ವ ಇಲಾಖೆ ದುರಸ್ತಿ ಪಡಿಸಿತ್ತು. ಆದರೀಗ ಮತ್ತೆ ಪ್ರವಾಹ ನೀರಿನ ರಭಸಕ್ಕೆ ಸೇತುವೆ ಮುಳುಗಡೆಯಾಗಿ ಹಾನಿಯಾಗಿದೆ. 1818 ರಲ್ಲಿ ಬ್ರಿಟಿಷರ ಕಾಲದಲ್ಲಿ ವೆಸ್ಲಿ ಸೇತುವೆ ನಿರ್ಮಾಣ ಮಾಡಲಾಗಿದೆ. 200 ವರ್ಷಗಳ ಇತಿಹಾಹ ಹೊಂದಿರುವ ಪಾರಂಪರಿಕ ಸೇತುವೆ ಇದಾಗಿದೆ. ಬ್ರಿಟಿಷ್ ರಾಯಭಾರಿ ವೆಸ್ಲಿ ಎಂಬವರ ನೆನಪಿನಲ್ಲಿ ನಿರ್ಮಿಸಿದ ಸೇತುವೆಯಾಗಿದೆ. ಮೆಪ್ಪಾಡಿಯಲ್ಲೇ ರಾಜೇಂದ್ರ ಅಂತ್ಯಕ್ರಿಯೆಚಾಮರಾಜನಗರ: ವಯನಾಡಿನ ಚೂರಲ್ ಮಲೆದಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಚಾ.ನಗರ ಮೂಲದ ದಂಪತಿಗಳ ಪೈಕಿ ರಾಜೇಂದ್ರ (50) ಅವರ ಶವ ಕೇರಳದ ಕೊಯಿಕ್ಕೂಡು ಸಮೀಪದ ನೆಲಂಬೂರಿನಲ್ಲಿ ಬುಧವಾರ ಪತ್ತೆಯಾಗಿದ್ದು, ಗುರುವಾರ ಮೆಪ್ಪಾಡಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಅವರ ಪತ್ನಿ ರತ್ನಮ್ಮ ಸಹ ಮೃತಪಟ್ಟಿದ್ದಾರೆಂದು ಹೇಳಲಾಗಿದ್ದು, ಅವರ ಶವ ಇನ್ನೂ ಸಿಕ್ಕಿಲ್ಲ. ರಾಜೇಂದ್ರ ಅವರ ತಂದೆ ಚಾ.ನಗರ ತಾಲೂಕಿನ ಚಿಕ್ಕಮೋಳೆಯವರು. ಇವರ ಕುಟುಂಬದವರು 50 ವರ್ಷಗಳ ಹಿಂದೆಯೇ ಚೂರಲ್ ಮಲಾದ ಟೀ ಎಸ್ಟೇಟ್‌ಗೆ ತೆರಳಿ ಗಾರೆ ಕೆಲಸ ಮಾಡಿಕೊಂಡಿದ್ದರು. ರಾಜೇಂದ್ರ ಅವರ ಪತ್ನಿ ಚಾ.ನಗರ ತಾಲೂಕಿನ ಇರಸವಾಡಿಯವರು. ರಾಜೇಂದ್ರ ಅವರು ಆರು ತಿಂಗಳ ಹಿಂದೆ ಗೃಹಪ್ರವೇಶ ಮಾಡಿದ್ದ ಮನೆ ಕೊಚ್ಚಿಕೊಂಡು ಹೋಗಿದ್ದು ದಂಪತಿಗೆ ಮಕ್ಕಳಿರಲಿಲ್ಲ ಎಂದು ತಿಳಿದು ಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ