ಕೊಂಬಾಡಿ: ಶ್ರೀನಾಗ ಬ್ರಹ್ಮಮೂಲ ಸ್ಥಾನದಲ್ಲಿ ಕಿರುವನ ನಿರ್ಮಾಣ

KannadaprabhaNewsNetwork |  
Published : Jun 19, 2025, 11:51 PM IST
19ಕೊಂಬಾಡಿ | Kannada Prabha

ಸಾರಾಂಶ

ಸಂವೇದನಾ ಪೌಂಡೇಶನ್ ಉಡುಪಿ. ಜಯಂಟ್ಸ್ ಗ್ರೂಪ್ ಬ್ರಹ್ಮಾವರ, ಸುವರ್ಣ ಎಂಟ್ರಪ್ರೈಸಸ್ ಬ್ರಹ್ಮಾವರ ಮತ್ತು ಕೃಷ್ಣ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಇಲ್ಲಿನ ಕೊಂಬಾಡಿ ನಾಗಬ್ರಹ್ಮ ಮೂಲ ಸ್ಥಾನದಲ್ಲಿ ಪರಿಸರ ದಿನಾಚರಣೆ ನೆರವೇರಿತು.

ಕನ್ನಡಪ್ರಭ ವಾರ್ತೆ ಉಡುಪಿ

ಸಂವೇದನಾ ಪೌಂಡೇಶನ್ ಉಡುಪಿ. ಜಯಂಟ್ಸ್ ಗ್ರೂಪ್ ಬ್ರಹ್ಮಾವರ, ಸುವರ್ಣ ಎಂಟ್ರಪ್ರೈಸಸ್ ಬ್ರಹ್ಮಾವರ ಮತ್ತು ಕೃಷ್ಣ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಇಲ್ಲಿನ ಕೊಂಬಾಡಿ ನಾಗಬ್ರಹ್ಮ ಮೂಲ ಸ್ಥಾನದಲ್ಲಿ ಪರಿಸರ ದಿನಾಚರಣೆ ಪ್ರಯುಕ್ತ ವಿವಿಧ ಬಗೆಯ ಗಿಡಗಳನ್ನು ನೆಟ್ಟು ಕಿರುವನ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.

ಸಂವೇದನಾ ಪೌಂಡೇಶನ್ ನ ಪ್ರಕಾಶ ಮಲ್ಪೆ ಮಾತನಾಡಿ, ಪ್ರತಿ ವಿದ್ಯಾರ್ಥಿಯೂ ಒಂದೊಂದು ಗಿಡ ನೆಟ್ಟು ಪೋಷಿಸಬೇಕು ಹಾಗೂ ಉಡುಪಿ ಜಿಲ್ಲೆಯ ಹಸಿರು ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಕರೆ ನೀಡಿದರು.

ಪರಿಸರ ಪ್ರೇಮಿ ಮಧುಸೂಧನ ಹೇರೂರು ಮಾತಾನಾಡಿ, ಪ್ರತಿ ನಾಗಬನದಲ್ಲಿ ಸಸ್ಯ ಸಂಕುಲದಿಂದಾಗಿ ವಿಶೇಷ ಸ್ಪಂದನೆ ಇರುತ್ತದೆ. ಪ್ರತಿಗಿಡ ಮರಗಳಿಗೆ ಅದರದ್ದೆ ಆದ ವೈಶಿಷ್ಠವಿದೆ. ಅದನ್ನು ವಿದ್ಯಾರ್ಥಿಗಳು ಅರಿತುಕೊಂಡು ಪರಿಸರ ಉಳಿಸುವದರಿಂದ ಮಾನವರಿಗೆ ಒಳಿತಾಗುತ್ತದೆ ಎಂದು ತಿಳಿಸಿದರುಮೂಡುಬೆಳ್ಳೆಯ ಜ್ಞಾನ ಗಂಗಾ ಪದವಿ ಪೂರ್ವ ಕಾಲೇಜು ಪ್ರಾಂಗಣದಲ್ಲಿ ನೆಡಲು ಪಾನ್ ಮಸಾಲ ವಿಶೇಷ ಗಿಡವನ್ನು ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಬಾಸ್ಕರ್ ಆಚಾರ್ಯ ಮತ್ತು ಸಹಯೋಜನಾಧಿಕಾರಿ ದಿವ್ಯಾ ಅವರಿಗೆ ನೀಡಲಾಯಿತು.

ಕೊಂಬಾಡಿ ಮೂಲಸ್ಥಾನದ ಅಧ್ಯಕ್ಷ ಆನಂದ ಟೈಲರ್, ಪ್ರಧಾನ ಕಾರ್ಯದರ್ಶಿ ದಿನೇಶ್ ಸಾಲಿಯಾನ್, ಬಿ ರವಿಂದ್ರನಾಥ್, ಖಚಾಂಚಿ ರಮೇಶ ಮೂಡಬೆಟ್ಟು. ಜಯಂಟ್ಸ್ ಅಧ್ಯಕ್ಷ ಅಣ್ಣಯ್ಯ ದಾಸ್, ಸಂವೇದನಾ ಪೌಂಡೆಶನ ನ ಸಂತೋಷ ಕುಂದರ್, ಸೂರಜ್ ಕಿದಿಯೂರು, ಗಿರೀಶ್ ಸುವರ್ಣ, ಡಾ.ಜಯರಾಮ್ ಭಟ್, ನಾಗರಾಜ ಮಧ್ಯಸ್ಥ ಉಪಸ್ಥಿತರಿದ್ದರು. ಸುಮಾರು ವಿವಿಧ ೨೦ ತಳಿಯ ೭೫ ಗಿಡಗಳನ್ನು ವಿದ್ಯಾರ್ಥಿಗಳು ಆಸಕ್ತಿಯಿಂದ ನೆಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!