ಭಟ್ಕಳ ಬಂದರಿನಲ್ಲಿ ಕೊಂಕಣಿ ಸಾಹಿತ್ಯ ಪರಿಷತ್‌ನಿಂದ ಸಿಗ್ಮೆ ಪೊರಬ್ -2026 ಕಾರ್ಯಕ್ರಮಕನ್ನಡಪ್ರಭ ವಾರ್ತೆ ಭಟ್ಕಳ
ನಂತರ ಮಾತನಾಡಿದ ಅವರು, ಕೊಂಕಣಿ ಭಾಷೆ ಯಾವುದೇ ಧರ್ಮ, ಜಾತಿಗೆ ಸೀಮಿತವಾಗಿಲ್ಲ. ಎಲ್ಲಾ ಧರ್ಮದವರೂ ಕೊಂಕಣಿ ಮಾತನಾಡುತ್ತಾರೆ. ಕೊಂಕಣಿ ಭಾಷೆ, ಸಂಸ್ಕೃತಿ ಅಧ್ಯಯನಕ್ಕೆ ಕಳೆದ 32 ವರ್ಷಗಳ ಹಿಂದೆ ಹುಟ್ಟಿಕೊಂಡ ಕೊಂಕಣಿ ಸಾಹಿತ್ಯ ಅಕಾಡೆಮಿ ಉಳಿಸಿ ಬೆಳೆಸಿಕೊಳ್ಳಬೇಕು. ಅಕಾಡೆಮಿಗೆ ವರ್ಷಕ್ಕೆ ₹50 ಲಕ್ಷ ಸರಕಾರದಿಂದ ಅನುದಾನ ನೀಡಲಾತ್ತಿದೆ. ಈ ಹಣದಿಂದಲೇ ಕಾರ್ಯಕ್ರಮ, ಅಧ್ಯಯನ ಎಲ್ಲವೂ ಆಗಬೇಕಿದೆ ಎಂದ ಅವರು, ಕೊಂಕಣಿ ಅಕಾಡೆಮಿಯ ಶಾಖೆಯನ್ನು ಭಟ್ಕಳದಲ್ಲೂ ಸ್ಥಾಪಿಸಲು ಮುಂದಾಗಬೇಕು. ಆ ನಿಟ್ಟಿನಲ್ಲಿ ಅಕಾಡೆಮಿಯ ಪದಾಧಿಕಾರಿಗಳ ಪ್ರಯತ್ನ ಆಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಅಲ್ವಾರೀಸ್, ಮಾಜಿ ಅಧ್ಯಕ್ಷ ರೊಯ್ ಕ್ಯಾಸ್ತಲಿನೋ, ತಂಝೀಂ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಮಾತನಾಡಿದರು. ಕೊಂಕಣಿ ಖಾರ್ವಿ ಸಮಾಜದ ಅಧ್ಯಕ್ಷ ಸುಬ್ರಾಯ ಖಾರ್ವಿ, ಕೊಂಕಣಿ ಖಾರ್ವಿ ಸಮಾಜದ ಟ್ರಸ್ಟಿ ರತ್ನಾಕರ ಖಾರ್ವಿ, ಕೊಂಕಣಿ ಖಾರ್ವಿ ಸಮಾಜದ ಕಲಾಮಂಡ್ ಸಂಚಾಲಕ ಶ್ರೀಧರ ಎಂ. ಖಾರ್ವಿ, ಅಖಿಲ ಭಾರತ ಖಾರ್ವಿ ಮಹಾಜನ ಸಭಾದ ಅಧ್ಯಕ್ಷ ರವಿ ನಾಯಕ, ಖಾರ್ವಿ ಸಮುದಾಯದ ಹಿರಿಯ ಮುಖಂಡ ವಸಂತ ಖಾರ್ವಿ ಉಪಸ್ಥಿತರಿದ್ದರು.ಸಮಾರಂಭದಲ್ಲಿ ಸಚಿವ ಮಂಕಾಳ ವೈದ್ಯ, ಹಿರಿಯರಾದ ವಸಂತ ಖಾರ್ವಿ ಮತ್ತು ನಾರಾಯಣ ಖಾರ್ವಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಸಿಗ್ಮೆ ವೊರಬ್ ನಡೆಯಿತು.ಭಟ್ಕಳ ಬಂದರು ಅಭಿವೃದ್ಧಿಗೆ ₹185 ಕೋಟಿ ಯೋಜನೆಭಟ್ಕಳ ಮಾವಿನಕುರ್ವೆ ಬಂದರಿನ ಸಮಗ್ರ ಅಭಿವೃದ್ಧಿಗೆ ₹185 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ ಎಂದು ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್. ವೈದ್ಯ ಹೇಳಿದರು. ಭಟ್ಕಳ ಬಂದರಿನಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಟ್ಕಳ ಬಂದರು ಅಭಿವೃದ್ಧಿ ಮಾಡಲಾಗುತ್ತಿದೆ. ಹೂಳಿನ ಸಮಸ್ಯೆ ತಪ್ಪಿಸಲು ₹10 ಕೋಟಿ ವೆಚ್ಚದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಲಾಗುವುದು. ಹಿಂದಿನ ಸರಕಾರ ಇದ್ದಾಗ ಮೀನುಗಾರರು ಸಮರ್ಪಕ ಸೀಮೆಎಣ್ಣೆ, ಡಿಸೀಲ್ ಸಿಗದೇ ತೊಂದರೆ ಅನುಭವಿಸುತ್ತಿದ್ದರು. ಆದರೆ ನಾನು ಸಚಿವನಾದ ಬಳಿಕ ಮೀನುಗಾರರ ದೋಣಿಗೆ ಬೇಕಾದಷ್ಟು ಸೀಮೆಎಣ್ಣೆ, ಡಿಸೇಲ್ ನೀಡಲಾಗುತ್ತಿದೆ. ಮೀನುಗಾರಿಕೆಗೆ ಹೋಗುವ ಮೀನುಗಾರರಿಗೆ ಇಲಾಖೆಯಿಂದಲೇ ಲೈಫ್ ಜಾಕೆಟ್ ನೀಡಲಾಗುತ್ತಿದೆ. ಮೀನುಗಾರಿಕೆ ಸಂದರ್ಭ ಮೀನುಗಾರರು ದುರ್ಮರಣಕ್ಕೀಡಾದರೆ 24 ಗಂಟೆಯಲ್ಲಿ ಇಲಾಖೆಯಿಂದ ₹10 ಲಕ್ಷ ಪರಿಹಾರ ಕುಟುಂಬಕ್ಕೆ ನೀಡುವ ಕೆಲಸ ಮಾಡಲಾಗುತ್ತಿದೆ. ಮೀನುಗಾರರಿಗೆ ಅನುಕೂಲವಾಗಲು ಮೀನುಗಾರರಿಗೆ 10 ಸಾವಿರ ಮನೆಗಳನ್ನು ಮಂಜೂರಿಸಲಾಗಿದೆ. ಮೀನುಗಾರಿಕೆ ಇಲಾಖೆ ಮೀನುಗಾರರ ಸ್ನೇಹಿಯಾಗಿ ಕೆಲಸ ನಿರ್ವಹಿಸುತ್ತಿದೆ. ಇಲಾಖೆಯಲ್ಲಿರುವ ಮನೆ ಸೌಲಭ್ಯ ಸೇರಿದಂತೆ ವಿವಿಧ ಯೋಜನೆಗಳನ್ನು ಮೀನುಗಾರರು ಸದುಪಯೋಗಪಡಿಸಿಕೊಳ್ಳಬೇಕೆಂದರು.