ವಿಶ್ವದಾಖಲೆಯೊಂದಿಗೆ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾಮೇಳನಕ್ಕೆ ತೆರೆ

KannadaprabhaNewsNetwork |  
Published : Nov 16, 2026, 02:45 AM IST
ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾಮೇಳದ ಗಿನ್ನೆಸ್‌ ದಾಖಲೆ ಘೋಷಣಾ ಹಸ್ತಾಂತರಿಸಲಾಯಿತು | Kannada Prabha

ಸಾರಾಂಶ

ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನದ ಅಂಗವಾಗಿ ‘ಬಹು ಗಾಯಕರ ವಿಭಾಗ’ದಲ್ಲಿ 12 ದಿನ, 12 ಗಂಟೆ, 12 ನಿಮಿಷಗಳ ಕಾಲ ನಿರಂತರ ಗಾಯನ ಪ್ರಸ್ತುತಪಡಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದು, ಈ ಮೂಲಕ ಸಾಂಸ್ಕೃತಿಕ ಸಂಘಟನೆ ‘ಮಾಂಡ್ ಸೊಭಾಣ್’ ಇತಿಹಾಸದ ಪುಟಗಳಲ್ಲಿ ತನ್ನ ಹೆಸರನ್ನು ಅಚ್ಚೊತ್ತಿದೆ.

ಮಂಗಳೂರು: ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನದ ಅಂಗವಾಗಿ ‘ಬಹು ಗಾಯಕರ ವಿಭಾಗ’ದಲ್ಲಿ 12 ದಿನ, 12 ಗಂಟೆ, 12 ನಿಮಿಷಗಳ ಕಾಲ ನಿರಂತರ ಗಾಯನ ಪ್ರಸ್ತುತಪಡಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದು, ಈ ಮೂಲಕ ಸಾಂಸ್ಕೃತಿಕ ಸಂಘಟನೆ ‘ಮಾಂಡ್ ಸೊಭಾಣ್’ ಇತಿಹಾಸದ ಪುಟಗಳಲ್ಲಿ ತನ್ನ ಹೆಸರನ್ನು ಅಚ್ಚೊತ್ತಿದೆ.

ಕಾರ್ಯಕ್ರಮ ಸಮಾರೋಪ ಮತ್ತು ದಾಖಲೆ ಘೋಷಣಾ ಸಮಾರಂಭ ಭಾನುವಾರ ಸಂಜೆ ನಡೆಯಿತು. ಅನಿವಾಸಿ ಉದ್ಯಮಿ, ದಾನಿ ಡಾ.ರೊನಾಲ್ಡ್ ಕೊಲಾಸೊ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾಂಡ್ ಸೊಭಾಣ್‌ನ ಅಪ್ರತಿಮ ಸಂಘಟನಾ ಚಾತುರ್ಯ ಮತ್ತು ಶಿಸ್ತನ್ನು ಶ್ಲಾಘನೀಯ. ಈ ಸಾಧನೆ ದಾಖಲೆಗಳ ಪುಸ್ತಕದ ಜೊತೆಗೆ ಜನರ ಮನಸ್ಸಿನಲ್ಲೂ ಶಾಶ್ವತವಾಗಿ ಉಳಿಯಲಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮಾತನಾಡಿ, ಎರಿಕ್ ಒಝೇರಿಯೊ ಅವರು ಕೊಂಕಣಿ ಭಾಷೆ ಮತ್ತು ಸಂಸ್ಕೃತಿಗೆ ಹೊಸ ಆಯಾಮ ನೀಡಿ, ಅದನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ‘ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನದಂತಹ ಕಾರ್ಯಕ್ರಮಗಳು ಜಾತಿ, ಮತ, ಧರ್ಮಗಳನ್ನು ಮೀರಿದ ಏಕತೆಗೆ ಉತ್ತಮ ನಿದರ್ಶನವಾಗಿವೆ. ಇಂದು ಕೊಂಕಣಿ ಸಮುದಾಯ ನಮ್ಮ ಇಡೀ ಪ್ರದೇಶಕ್ಕೆ ಹೆಮ್ಮೆ ತಂದಿದೆ ಎಂದರು.

ನಿರಂತರ ಗಾಯನ ದಾಖಲೆ ಪ್ರಯತ್ನದ ನಿರ್ದೇಶಕ ಜೋಯೆಲ್ ಪಿರೇರಾ ಅವರನ್ನು ಸನ್ಮಾನಿಸಲಾಯಿತು. ಸಹ ನಿರ್ದೇಶಕರಾದ ಆಲ್ವಿನ್ ನೊರೊನ್ಹಾ (ಬಜಪೆ), ಫಾ.ಆಲ್ವಿನ್, ಸೈಮನ್ ಬಜಾಲ್, ಅನಿಲ್ ಪತ್ರಾವೊ ಸೇವೆಯನ್ನು ಗೌರವಿಸಲಾಯಿತು. ಮಹಾ ಸಮ್ಮೇಳನದ ಪೋಷಕರು, ಸಹ-ಪೋಷಕರು ಮತ್ತು ದಾನಿಗಳನ್ನು ಗೌರವಿಸಲಾಯಿತು.

ಭಾರತೀಯ ಸಾಗರೋತ್ತರ ಕಾಂಗ್ರೆಸ್ ಉಸ್ತುವಾರಿ ಡಾ.ಆರತಿ ಕೃಷ್ಣ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮೈಕೆಲ್ ಡಿಸೋಜ, ಜಾಯ್ಸ್ ಒಝೇರಿಯೊ, ಸ್ವಪ್ನಿಲ್ ದಂಗಾರಿಕರ್, ಸ್ವಾಗತ ಸಮಿತಿ ಉಪಾಧ್ಯಕ್ಷ ರಾಯ್ ಕ್ಯಾಸ್ಟೆಲಿನೊ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್, ಗೋವಾ ಸಂಯೋಜಕ ಮೈಕೆಲ್ ಗ್ರೇಸಿಯಸ್, ಕಲಾಂಗಣ ಅಧ್ಯಕ್ಷ ರೊನಾಲ್ಡ್ ಡಿ ''''ಮೆಂಡೋನ್ಸಾ, ನವೀನ್ ಲೋಬೊ ಮತ್ತು ಎಲ್ರಾನ್ ರೊಡ್ರಿಗಸ್ ಮತ್ತಿತರರು ಇದ್ದರು.ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ.ಪಿಂಟೊ ಸ್ವಾಗತಿಸಿದರು. ಅರುಣ್ ರಾಜ್ ನಿರೂಪಿಸಿದರು.

ಸಂಭ್ರಮದ ತೆರೆ:

12 ದಿನಗಳ ಕಾಲ ನಿರಂತರವಾಗಿ ನಡೆದ ಈ ಕಾರ್ಯಕ್ರಮದ ಮೂಲಕ 300 ತಂಡಗಳು, 7,235 ಗಾಯಕರು ಮತ್ತು 4,596 ಹಾಡುಗಳನ್ನು ಒಂದೆಡೆ ಸೇರಿಸಿದ್ದವು. ಗಾಯನದ ಅಂತಿಮ ಹಂತ ತಲುಪುವ ವೇಳೆಗೆ ಪುರಭವನದ ಒಳಗೆ ಹಾಗೂ ಹೊರಗೆ ಸೇರಿದ್ದ ಬಾರೀ ಸಂಖ್ಯೆಯ ಜನರು ಸಂಭ್ರಮಿಸಿದರು. ಸಂಜೆ ವೇಳೆಗೆ ದಾಖಲೆಯಾಗುತ್ತಿದ್ದಂತೆ ಗಾಯಕರು, ಪ್ರೇಕ್ಷಕರು, ಗಣ್ಯರು ಕುಣಿದು ಸಂಭ್ರಮಿಸಿದರು.

ಕೊಂಕಣಿ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಮಾಂಡ್ ಸೊಭಾಣ್‌ನ ಅಭಿಯಾನ ಮುಂದುವರಿಯಲಿದ್ದು, ಮುಂದಿನ ಪ್ರಮುಖ ಕಾರ್ಯಕ್ರಮವಾಗಿ ಡಿ.6ರಂದು ಕಲಾಂಗಣದಲ್ಲಿ ‘ಬೈಲಾ ಇಂಟರ್‌ನ್ಯಾಷನಲ್ ಸೂಪರ್ ಶೋ’ ನಡೆಯಲಿದೆ ಎಂದು ಪಿಂಟೊ ಘೋಷಿಸಿದರು.

--------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವಕರಲ್ಲಿ ದೇಶಪ್ರೇಮ, ಸಾಮಾಜಿಕ ಹೊಣೆ ಮೇಳೈಸಲಿ
ಹಿಂದೂ ಅಲ್ಪ ಸಂಖ್ಯಾತರಾದರೆ ಅಪಾಯ ಕಟ್ಟಿಟ್ಟ ಬುತ್ತಿ: ಕೃಷ್ಣಾನಂದ ಕಾಮತ್‌