ನವದೆಹಲಿಯಲ್ಲಿ ನಡೆಯಲಿರುವ ಭಾರತ ಪರ್ವ 25ರ ಕಾರ್ಯಕ್ರಮಕ್ಕೆ ಕೊಣ್ಣೂರ ಜೋಗತಿ ನೃತ್ಯ ತಂಡ ಆಯ್ಕೆ

KannadaprabhaNewsNetwork | Updated : Jan 21 2025, 12:57 PM IST

ಸಾರಾಂಶ

ಗಣರಾಜ್ಯೋತ್ಸವದ ಅಂಗವಾಗಿ ನವದೆಹಲಿಯಲ್ಲಿ ನಡೆಯಲಿರುವ ಭಾರತ ಪರ್ವ 25ರ ಕಾರ್ಯಕ್ರಮಕ್ಕೆ ಕರ್ನಾಟಕದಿಂದ ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಪ್ರಾಯೋಜಿತ ಕಲಾ ತಂಡವಾಗಿ ಗದಗ ಜಿಲ್ಲೆಯ ಕೊಣ್ಣೂರು ಗ್ರಾಮದ ಪ್ರಕಾಶ ಕ. ಚಂದಣ್ಣವರ ನೇತೃತ್ವದ ಜೈಕಿಸಾನ್‌ ಕಲಾ ತಂಡದ ಜೋಗತಿ ನೃತ್ಯ ಆಯ್ಕೆಗೊಂಡಿದೆ.

ನರಗುಂದ: ಗಣರಾಜ್ಯೋತ್ಸವದ ಅಂಗವಾಗಿ ನವದೆಹಲಿಯಲ್ಲಿ ನಡೆಯಲಿರುವ ಭಾರತ ಪರ್ವ 25ರ ಕಾರ್ಯಕ್ರಮಕ್ಕೆ ಕರ್ನಾಟಕದಿಂದ ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಪ್ರಾಯೋಜಿತ ಕಲಾ ತಂಡವಾಗಿ ಗದಗ ಜಿಲ್ಲೆಯ ಕೊಣ್ಣೂರು ಗ್ರಾಮದ ಪ್ರಕಾಶ ಕ. ಚಂದಣ್ಣವರ ನೇತೃತ್ವದ ಜೈಕಿಸಾನ್‌ ಕಲಾ ತಂಡದ ಜೋಗತಿ ನೃತ್ಯ ಆಯ್ಕೆಗೊಂಡಿದೆ.

2025ನೇ ಜ. 26ರಿಂದ ಜ. 31ರ ವರೆಗೆ ನಡೆಯುವ ದೇಶದ ಸಂಸ್ಕೃತಿ ಬಿಂಬಿಸುವ ಭಾರತ ಪರ್ವ 2025ರಲ್ಲಿ ಕರ್ನಾಟಕವನ್ನು ತಾಲೂಕಿನ ಕೊಣ್ಣೂರು ಜೈಕಿಸಾನ್‌ ಕಲಾತಂಡ ಪ್ರತಿನಿಧಿಸಲಿದೆ. ತಂಡದಲ್ಲಿ ಪಿ.ಕೆ. ಚಂದಣ್ಣವರ, ಐ.ಆರ್. ಬಾಳಪ್ಪನವರ, ಸಿ.ಬಿ. ಮ್ಯಾಗಲಮಾನಿ, ಪಿ.ಕೆ. ಕಡ್ಡಿ, ಎಸ್.ಆರ್. ಕಡ್ಡಿ, ಕೆ.ಎಂ. ಚಂದಣ್ಣವರ, ಬಾಬು ಬಾರಕೇರ, ಸಂದೀಪ, ಗೀತಾ ಚಂದಣ್ಣವರ, ಸಾವಿತ್ರಿ ಹುಜರತ್ತಿ ಸೇರಿದಂತೆ 10 ಜನರ ಕಲಾವಿದರು ಪಾಲ್ಗೊಳ್ಳಲಿದ್ದಾರೆ ಎಂದು ಸಂಸ್ಥಾಪಕ ಆರ್.ಬಿ. ಚಿನಿವಾಲರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಣ್ಣೂರ ವಿರಕ್ತಮಠದ ಡಾ. ಶಿವಕುಮಾರ ಮಹಾಸ್ವಾಮಿ, ಡಾ. ಶಿವಾನಂದ ದೇವರು, ಹಿರೇಮಠದ ಸಿದ್ದಲಿಂಗ ಶ್ರೀಗಳು, ಭೈರನಹಟ್ಟಿ ಶ್ರೀಗಳು, ಶಾಸಕ ಸಿ.ಸಿ. ಪಾಟೀಲ, ಮಾಜಿ ಶಾಸಕ ಬಿ.ಆರ್. ಯಾವಗಲ್ಲ, ರಾಜುಗೌಡ ಕೆಂಚನಗೌಡ, ಟಿ.ಬಿ. ಶಿರಿಯಾಪ್ಪಗೌಡ್ರ, ಗ್ರಾಪಂ ಅಧ್ಯಕ್ಷೆ ಸಿದ್ದಮ್ಮ ಕಳಸಣ್ಣವರ, ಇಸಾಕ್ ಮಸೂತಿಮನಿ, ಕೆ.ಎಚ್. ವಾಸನ, ಎಸ್.ಸಿ. ಶೇಬಣ್ಣವರ, ಕೆ.ಎಸ್. ಖೋದಾನಪುರ, ಮಂಜು ವಜ್ರಾಂಗಿ, ಬಿ.ವಿ. ನರಗುಂದ, ಕೆ.ಬಿ. ಹಿರೇಹೊಳಿ, ಎನ್.ಕೆ. ಸೋಮಾಪುರ, ಸಿ.ಆರ್. ಸಾಲಿಗೌಡ್ರ, ಬಾಬು ಹಿರೇಹೂಳಿ, ವಿ.ಎಸ್. ಕಂಬಳಿ, ಜಿ.ಬಿ. ಹುಜರತ್ತಿ, ಬಿ.ಎಚ್. ವಾಸನ, ಮುತ್ತು ಮಳಲಿ, ಸತ್ಯಪ್ಪ ಬಾರಕೇರ, ಎಂ.ಡಿ. ದೂಡಮನಿ, ಭರತಪ್ಪ ತಳವಾರ, ಖಾನಸಾಬ್‌ ಮಸೂತಿಮನಿ, ಮಹಮ್ಮದ ಶಫಿ ಖಾಜಿ, ಮಾನಪ್ಪ ಬಡಿಗೇರ, ಪುಂಡಲೀಕ ದಾಸರ ಹಾಗೂ ಗ್ರಾಮದ ಸಮಸ್ತ ಸಂಘಟನೆಗಳು ಮೆಚ್ಚುಗೆ ವ್ಯಕ್ತಪಡಿಸಿವೆ.

Share this article