ಬುದ್ಧ, ಅಂಬೇಡ್ಕರ್ ಅನುಯಾಯಿ ಕೋಣಸಾಲೆ ನರಸರಾಜು

KannadaprabhaNewsNetwork |  
Published : Dec 18, 2025, 12:30 AM IST
16ಕೆಎಂಎನ್ ಡಿ15  | Kannada Prabha

ಸಾರಾಂಶ

ಬುದ್ಧನ ಅನುಯಾಯಿಯಾದ ಡಾ.ಅಂಬೇಡ್ಕರ್ ಅವರು ಸಮಾಜ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ಸಮಾನತೆ, ಭಾತೃತ್ವ, ಸಹೋದರತ್ವ, ಸಹಬಾಳ್ವೆ ಯನ್ನು ಸಂವಿಧಾನ ಅಳವಡಿಸುವ ಮೂಲಕ ಸಾಮಾಜಿಕ ಸಮಾನತೆ ಸಾರಿ ಇಂದು ಪರಿನಿಬ್ಬಾಣ ಹೊಂದಿರಬಹುದು. ಆದರೆ, ಅವರ ಆದರ್ಶ ಅಮರವಾಗಿವೆ.

ಕನ್ನಡಪ್ರಭ ವಾರ್ತೆ ಮದ್ದೂರು

ಅಂಬೇಡ್ಕರ್ ಅನುಯಾಯಿಯಾಗಿ ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ದಸಂಸ ಹಿರಿಯ ಕಾರ್ಯಕರ್ತ ಕೋಣಸಾಲೆ ನರಸರಾಜು ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ಪ್ರಾಮಾಣಿಕವಾಗಿ ತೊಡಗಿಸಿಕೊಂಡಿದ್ದರು ಎಂದು ಕೆ.ಟಿ.ಶಿವಕುಮಾರ್ ತಿಳಿಸಿದರು.

ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಾಲೂಕು ದಲಿತ ಸಾಹಿತ್ಯ ಪರಿಷತ್‌ನಿಂದ ಡಾ.ಬಿ.ಆರ್.ಅಂಬೇಡ್ಕರ್ ಪರಿನಿಬ್ಬಾಣ ದಿನ ಹಾಗೂ ಕದಸಂಸ ಹಿರಿಯ ಕಾರ್ಯಕರ್ತ ಕೋಣಸಾಲೆ ರಾಜು ನೆರವು ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬುದ್ಧನ ಅನುಯಾಯಿಯಾದ ಡಾ.ಅಂಬೇಡ್ಕರ್ ಅವರು ಸಮಾಜ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ಸಮಾನತೆ, ಭಾತೃತ್ವ, ಸಹೋದರತ್ವ, ಸಹಬಾಳ್ವೆ ಯನ್ನು ಸಂವಿಧಾನ ಅಳವಡಿಸುವ ಮೂಲಕ ಸಾಮಾಜಿಕ ಸಮಾನತೆ ಸಾರಿ ಇಂದು ಪರಿನಿಬ್ಬಾಣ ಹೊಂದಿರಬಹುದು. ಆದರೆ, ಅವರ ಆದರ್ಶ ಅಮರವಾಗಿವೆ ಎಂದರು.

ಕೋಣಸಾಲೆ ರಾಜು ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿ ಅಗತ್ಯವಿರುವವರಿಗೆ ವೃದ್ಧಾಪ್ಯ, ವಿಧವಾ ವೇತನ ಅಂಗವಿಕಲರ ವೇತನ, ವಿದ್ಯಾರ್ಥಿಗಳಿಗೆ ಜಾತಿ ಪ್ರಮಾಣ ಪತ್ರ ಕೊಡಿಸುವ ಮೂಲಕ ಸಮಾಜ ಸೇವೆ ಸಲ್ಲಿಸಿದ್ದಾರೆ ಎಂದು ಸ್ಮರಿಸಿದರು.

ಕೋಣಸಾಲೆ ರಾಜು ಕುಟುಂಬಕ್ಕೆ ರಾಣಿ ಐಶ್ವರ್ಯ ಡೆವಲಪರ್ಸ್ ಮುಖ್ಯಸ್ಥ ಎಚ್.ಎಲ್.ಸತೀಶ್ ವೈಯಕ್ತಿಕವಾಗಿ 20 ಸಾವಿರ ರು. ನೀಡಿದ್ದಾರೆ. ಒಟ್ಟಾರೆ ರಾಜು ಕುಟುಂಬಕ್ಕೆ 60,000 ಸಾವಿರ ರು. ನೆರವು ನೀಡಲಾಯಿತು ಎಂದರು.

ತಾಲೂಕು ದಸಾಪ ಜಿಲ್ಲಾಧ್ಯಕ್ಷ ಹುರಗಲವಾಡಿ ರಾಮಯ್ಯ, ಡಾ.ಅಂಬೇಡ್ಕರ್ ರವರು ಶೋಷಿತರಿಗೆ ಮತದಾನ ಹಕ್ಕುನ್ನು ನೀಡುವ ಮೂಲಕ ಶೋಷಿತ ವರ್ಗಗಳ ಧ್ವನಿಯಾದರು. ಹಾಗಾಗಿ ಅಂಬೇಡ್ಕರ್ ಅದರ್ಶ ಜೀವಂತ ಎಂದರು.

ಕಾರ್ಯಕ್ರಮದಲ್ಲಿ ಕದಸಂಸ ರಾಜ್ಯ ಸಂಘಟನಾ ಸಂಚಾಲಕ ಸೋಮನಹಳ್ಳಿ ಅಂದಾನಿ, ಬಿ.ವಿ.ಹಳ್ಳಿ ನಾರಾಯಣ್, ಬಿ.ಎಂ.ಸತ್ಯ, ಗೌರವಾಧ್ಯಕ್ಷೆ ಸುಶೀಲಮ್ಮ, ಅಹಿಂದ ಸಂರಕ್ಷಣಾ ವೇದಿಕೆ ಅಧ್ಯಕ್ಷ ಮಲವರಾಜ್, ರಾಜ್ಯ ವೈಜ್ಞಾನಿಕ ಪರಿಷತ್ ಅಧ್ಯಕ್ಷ ಡಿ.ಸಿ.ಮಹೇಂದ್ರ ದಸಾಪ ಪ್ರಧಾನ ಕಾರ್ಯದರ್ಶಿ ಡಾ.ಮಲ್ಲೀಕೇಶ್, ಉಪಾಧ್ಯಕ್ಷರಾದ ಸರೋಜಮ್ಮ, ಲಿಂಗರಾಜು, ಬಸವರಾಜು, ಸಹ ಕಾರ್ಯದರ್ಶಿ ರಾಚಯ್ಯ ಚಾಮನಹಳ್ಳಿ, ಇಂದಿರಾ ರಾಜು, ನಿರ್ದೇಶಕರಾದ ಬೂದಗುಪ್ಪೆ ಪುಟ್ಟಲಿಂಗಯ್ಯ, ರಮೇಶ್ ತೂಬಿನಕರೆ, ಶೋಭಾ ಶಿವಣ್ಣ, ಪ್ರಮೀಳಾ ವೆಂಕಟೇಶ್, ಕೆ.ಜೆ.ಗೋವಿಂದರಾಜ್, ಮಲ್ಲೇಶ್ ಬೆಕ್ಕಳೆಲೆ, ರಮೇಶ್ ತೂಬಿನಕರೆ, ಪ್ರಸನ್ನ, ಚಂದ್ರಶೇಖರ್, ಗುರುಸಿದ್ದು, ಮಲ್ಲಿಕ್, ಮುಖಂಡರಾದ ಅಹಿಂದ ಸಂರಕ್ಷಣಾ ವೇದಿಕೆ ಶಶಿಕುಮಾರ್, ಪಿ.ಶ್ರೀನಿವಾಸ ಶೆಟ್ಟಿ, ಅಶಿಪ್ ಪಾಷಾ, ನಳಿನ, ರುಕ್ಮಿಣಿ, ಶಿಕ್ಷಕರಾದ ನಾಗೇಶ್, ವೆಂಕಟೇಶ್, ಲೋಕೇಶ್, ಸಿದ್ದಲಿಂಗಯ್ಯ, ರಮೇಶ್ ಹಾಗೂ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆಯಿಂದ ಆಹಾರ ಮೇಳ, ವಸ್ತು ಪ್ರದರ್ಶನ
ಚಲುವರಾಯಸ್ವಾಮಿ ಅವರಿಂದಲೇ ಹಿಟ್ ಆಂಡ್ ರನ್ ಕೆಲಸ: ಸಿ.ಎಸ್.ಪುಟ್ಟರಾಜು