ಕನ್ನಡಪ್ರಭ ವಾರ್ತೆ ಕುಶಾಲನಗರಕುಶಾಲನಗರ ತಾಲೂಕಿನ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶನೀಶ್ವರ ದೇವಾಲಯಕ್ಕೆ ಸುತ್ತೂರು ಮಹಾ ಸಂಸ್ಥಾನದ ಶ್ರೀ ಶಿವರಾತ್ರೀಶ್ವರ ದೇಶೀಕೇಂದ್ರ ಸ್ವಾಮೀಜಿ ಭೇಟಿ ನೀಡಿದರು.
ಬಳಿಕ ದೇವಾಲಯದ ಧರ್ಮದರ್ಶಿ ಶತ ವಯೋಮಾನದ ಆಸುಪಾಸಿನಲ್ಲಿರುವ ದೇವಾಲಯದ ಧರ್ಮದರ್ಶಿ ಎಲ್ಲೂಬಾಯಿ ಅವರು ಅನಾರೋಗ್ಯಕ್ಕೆ ತುತ್ತಾಗಿರುವುದರಿಂದ ಅವರ ಯೋಗ ಕ್ಷೇಮ ವಿಚಾರಿಸಿದ ಶ್ರೀಗಳು ವೈದ್ಯಕೀಯ ನೆರವು ನೀಡುವ ಬಗ್ಗೆಯೂ ಚರ್ಚಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ದೇವಾಲಯದ ಧರ್ಮದರ್ಶಿಗಳಾದ ಎಲ್ಲೂಬಾಯಿ ಸುತ್ತೂರು ಮಠದ ಹಿರಿಯ ಜಗದ್ಗುರು ಶ್ರೀ ರಾಜೇಂದ್ರ ಸ್ವಾಮೀಜಿಗಳಿಂದ ಶಿವ ದೀಕ್ಷೆ ಪಡೆದಿದ್ದರಿಂದ ಎಲ್ಲೂಬಾಯಿ ಅವರನ್ನು ಸೌಜನ್ಯಯುತವಾಗಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಆಶೀರ್ವಾದ ನೀಡಲಾಯಿತು ಎಂದರು.ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕೊಡ್ಲಿಪೇಟೆ ಕಿರಿ ಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ತೊರೆನೂರು ಮಠದ ಶ್ರೀ ಮಲ್ಲೇಶ ಸ್ವಾಮೀಜಿ, ಕೊಡಗು ವಚನ ಸಾಹಿತ್ಯ ವೇದಿಕೆ ಅಧ್ಯಕ್ಷ ಕೆ.ಎಸ್.ಮೂರ್ತಿ, ಮಾಜಿ ಜಿ ಪ ಸದಸ್ಯ ವಿಪಿ ಶಶಿಧರ್, ಬಸವನಹಳ್ಳಿ ಲ್ಯಾಂಪ್ಸ್ ಅಧ್ಯಕ್ಷ ಅರುಣ್ ರಾವ್, ದೇವಾಲಯದ ಪ್ರಮುಖರಾದ ಸುನಿಲ್ ರಾವ್, ಮತ್ತಿತರರಿದ್ದರು.