ಉತ್ತಮ ಅಡಕೆ ಬೆಳೆಗೆ ಮರಳು ಮಿಶ್ರಿತ ಕೆಂಪು ಮಣ್ಣು ಸೂಕ್ತ: ಡಾ.ಗಂಗಾಧರ ನಾಯ್ಕ್

KannadaprabhaNewsNetwork | Published : Feb 2, 2024 1:00 AM

ಸಾರಾಂಶ

ಉತ್ತಮ ಅಡಕೆ ಬೆಳೆಗಾಗಿ ಮರಳು ಮಿಶ್ರಿತ ಕೆಂಪು ಮಣ್ಣಿನ ತೋಟ ಸೂಕ್ತವಾಗಿದ್ದು, ಈ ಭಾಗದಲ್ಲಿ ಹಿಡಿಮುಂಡಿಗೆ, ಅಣಬೆ, ಎಲೆ ಚುಕ್ಕೆ, ಹಿಂಗಾರ ಒಣಗುವ ರೋಗ, ಎಳೆ ಕಾಯಿ ಉದುರುವ ರೋಗ ಕಂಡು ಬಂದಿದೆ ಎಂದು ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯ ಪ್ರಾಧ್ಯಾಪಕ, ಸಸ್ಯ ರೋಗ ಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಗಂಗಾಧರ ನಾಯ್ಕ್ ತಿಳಿಸಿದರು.

ಕನ್ನಡಪ್ರಭ ವಾರ್ತೆ, ತರೀಕೆರೆ

ಉತ್ತಮ ಅಡಕೆ ಬೆಳೆಗಾಗಿ ಮರಳು ಮಿಶ್ರಿತ ಕೆಂಪು ಮಣ್ಣಿನ ತೋಟ ಸೂಕ್ತವಾಗಿದ್ದು, ಈ ಭಾಗದಲ್ಲಿ ಹಿಡಿಮುಂಡಿಗೆ, ಅಣಬೆ, ಎಲೆ ಚುಕ್ಕೆ, ಹಿಂಗಾರ ಒಣಗುವ ರೋಗ, ಎಳೆ ಕಾಯಿ ಉದುರುವ ರೋಗ ಕಂಡು ಬಂದಿದೆ ಎಂದು ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯ ಪ್ರಾಧ್ಯಾಪಕ, ಸಸ್ಯ ರೋಗ ಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಗಂಗಾಧರ ನಾಯ್ಕ್ ತಿಳಿಸಿದರು.

ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ ಮಹಾವಿದ್ಯಾಲಯ ವಿದ್ಯಾರ್ಥಿನಿಯರು ಸಮೀಪದ ಬೇಲೇನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣ ಕೃಷಿ ಕಾರ್ಯನುಭವ ಕಾರ್ಯಕ್ರಮದಲ್ಲಿ ಅಡಿಕೆಗೆ ಬರುವ ರೋಗಗಳು ಮತ್ತು ಅದರ ನಿರ್ವಹಣೆ ಕುರಿತು ವಿಸ್ತೃತ ಮಾಹಿತಿ ನೀಡಿ ಮಾತನಾಡಿ,

ತರೀಕೆರೆ ಭಾಗದಲ್ಲಿ ಇವುಗಳಲ್ಲಿ ಹಿಡಿಮುಂಡಿಗೆ ರೋಗ ಅಪಾರ ಪರಿಣಾಮ ಬೀರುತ್ತಿರುವ ಕಾರಣ ಇದನ್ನು ನಿರ್ವಹಿಸಲು ಸರಿಯಾದ ಪ್ರಮಾಣದ ಗೊಬ್ಬರ (100:40:140 NPK) ಟೆಟ್ರಾಸೈಕ್ಲಿನ್ (1ಗ್ರಾಂ/ಲಿ ನೀರಿಗೆ) ಸಿಂಪಡಿಸಬೇಕು. ಸಣ್ಣ ಸಸಿ ಗಳಿಗೆ ಬರುವ ಎಲೆ ಚುಕ್ಕೆ ರೋಗದ ನಿರ್ವಹಣೆ ತುಂಬಾ ಮುಖ್ಯ, ಅಣಬೆ ರೋಗ ನಿರ್ವಹಿಸಲು ಹೆಕ್ಸಾಕೊನಜೋಲ್ ಪ್ರೊಪಿಕೊನಜೋಲ್ (2 ಮಿ.ಲಿ.ಲಿ ನೀರಿಗೆ) ಬುಡಕ್ಕೆ ಸಿಂಪಡಿಸಬೇಕು. ಬೋರಾನ್ ಪೋಷಕಾಂಶ ಸರಿಯಾದ ಪ್ರಮಾಣದಲ್ಲಿ ನೀಡುವುದರಿಂದ ಅಡಿಕೆ ಅಂಡೋಡಕ ರೋಗ ಬಾರದಂತೆ ತಡೆಯಬಹುದು ಎಂದರು.ಜೈವಿಕ ಗೊಬ್ಬರಗಳು ಟ್ರೈಕೊಡರ್ಮ್, ಸೂಡೊಮೊನಸ್ ಗಳು ಅಡಕೆ ಬಹುಪಾಲು ರೋಗಗಳ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು. ರೈತರು ಸಂಪನ್ಮೂಲ ವ್ಯಕ್ತಿಗಳಿಗೆ ಬೆಳೆ ಬಗ್ಗೆ ಇರುವ ಗೊಂದಲಗಳನ್ನು ಕೇಳಿ ಪರಿಹರಿಸಿಕೊಂಡರು. ಚಂದನ ಜಿ.ಪಿನಿರೂಪಿಸಿದರು. ಪನ್ನಗ ಬೋಗಾರ್ಸ ಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು.1ಕೆಟಿಆರ್.ಕೆ.1ಃ

ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ ಮಹಾವಿದ್ಯಾಲಯ ವಿದ್ಯಾರ್ಥಿನಿಯರು ಸಮೀಪದ ಬೇಲೇನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಅಡಿಕೆ ಬೆಳೆಯ ಪ್ರಮುಖ ರೋಗಗಳ ನಿವಾರಣೆಯ ಕುರಿತು ಪ್ರಾಧ್ಯಾಪಕರು ಸಸ್ಯ ರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಗಂಗಾಧರ ನಾಯ್ಕ್ ಮಾತನಾಡಿದರು.

Share this article