ಕೂಟ ಮಹಾಜಗತ್ತು ಕೇಂದ್ರ ಮಹಾಧಿವೇಶನ ಕೃತಜ್ಞತಾ ಸಭೆ

KannadaprabhaNewsNetwork |  
Published : Oct 15, 2026, 02:45 AM IST
ಕೇಂದ್ರ ಮಹಾಧಿವೇಶನ ಯಶಸ್ಸು: ಪ್ರಯುಕ್ತ ಕೃತಜ್ಞತಾ ಸಭೆ ನಡೆಯಿತು | Kannada Prabha

ಸಾರಾಂಶ

ಕೋಟ ಮಹಾಜಗತ್ತು ಸಾಲಿಗ್ರಾಮ ಮಂಗಳೂರು ಅಂಗಸಂಸ್ಥೆಯ ವತಿಯಿಂದ ಆಯೋಜಿಸಲಾದ ಕೇಂದ್ರ ಮಹಾಧಿವೇಶನದ ಯಶಸ್ಸಿನ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಸಹಕರಿಸಿದ ಗಣ್ಯರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮ ನಡೆಯಿತು.

ಮಂಗಳೂರು: ಕೋಟ ಮಹಾಜಗತ್ತು ಸಾಲಿಗ್ರಾಮ ಮಂಗಳೂರು ಅಂಗಸಂಸ್ಥೆಯ ವತಿಯಿಂದ ಆಯೋಜಿಸಲಾದ ಕೇಂದ್ರ ಮಹಾಧಿವೇಶನದ ಯಶಸ್ಸಿನ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಸಹಕರಿಸಿದ ಗಣ್ಯರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮ ನಡೆಯಿತು.

ಮಹಾಧಿವೇಶನದ ಸವಿನೆನಪಿಗಾಗಿ ಪ್ರಕಟಿಸಲಾದ ‘ನರಸಿಂಹ ಪ್ರಭಾ’ ಸ್ಮರಣ ಸಂಚಿಕೆಯ ರೂಪುಗೊಳಿಸುವಿಕೆಯಲ್ಲಿ ವಿಶೇಷ ಕೊಡುಗೆ ನೀಡಿದವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ಸಂಘಟನಾ ಕಾರ್ಯದರ್ಶಿ ವಲಯ ೨ರ ಮಧೂರು ಕೃಷ್ಣಪ್ರಸಾದ್ ಅಡಿಗ ಮಾತನಾಡಿ, ಬೃಹತ್ ಕಾರ್ಯಕ್ರಮ ಸಮರ್ಥವಾಗಿ ಒಗ್ಗೂಡಿಸಿದ ಮಂಗಳೂರು ಅಂಗಸಂಸ್ಥೆಯ ತಂಡದ ಕಾರ್ಯವೈಖರಿ ಇತರ ಅಂಗಸಂಸ್ಥೆಗಳಿಗೂ ಮಾದರಿಯಾಗಿದೆ ಎಂದರು.

ಮಂಗಳೂರು ಅಂಗಸಂಸ್ಥೆಯ ಅಧ್ಯಕ್ಷ ಶ್ರೀಧರ ಹೊಳ್ಳ ಮಾತನಾಡಿ, ‘ನರಸಿಂಹ ಪ್ರಭಾ’ ಸ್ಮರಣ ಸಂಚಿಕೆ ಮಹಾಧಿವೇಶನದ ಸ್ಮೃತಿಗಳನ್ನು ದಾಖಲಿಸುವ ಮಹತ್ವದ ಪ್ರಯತ್ನ ಎಂದರು.

‘ನರಸಿಂಹ ಪ್ರಭಾ’ ಸ್ಮರಣ ಸಂಚಿಕೆಯ ಮುಖಪುಟ ಚಿತ್ರಿಸಿದ ಹಿರಿಯ ಚಿತ್ರಕಲಾವಿದ ಗಣೇಶ ಸೋಮಯಾಜಿ, ಮುದ್ರಿಸಿಕೊಟ್ಟ ಆಕೃತಿ ಪ್ರಿಂಟರ್ಸ್‌ನ ಮಾಲಕ ನಾಗೇಶ್ ಕಲ್ಲೂರು ಹಾಗೂ ಛಾಯಾಚಿತ್ರಗಳ ಮೂಲಕ ಸಂಚಿಕೆಯ ಸೊಬಗನ್ನು ಹೆಚ್ಚಿಸಿದ ಛಾಯಾಗ್ರಾಹಕ ಗಣೇಶ ಚಕ್ರಪಾಣಿ ಅವರನ್ನು ಅಭಿನಂದಿಸಲಾಯಿತು.

ಸ್ಮರಣ ಸಂಚಿಕೆಯ ಸಂಪಾದಕ ಅಡೂರು ಕೃಷ್ಣ ರಾವ್, ಕೇಂದ್ರ ಉಪಾಧ್ಯಕ್ಷ ಸದಾಶಿವ ಐತಾಳ, ಮಂಗಳೂರು ಅಂಗಸಂಸ್ಥೆಯ ಉಪಾಧ್ಯಕ್ಷ ಪ್ರಭಾಕರ ಐತಾಳ, ಕೋಶಾಧಿಕಾರಿ ಪದ್ಮನಾಭ ಮಯ್ಯ, ಸದಸ್ಯರಾದ ಪ್ರಸನ್ನ ಇರುವೈಲು, ಗಣೇಶ ಕೆರಂಕಿ, ಸಿವಿಲ್ ಎಂಜಿನಿಯರ್ ರಂಗನಾಥ ಐತಾಳ, ಸಿಎ ಚಂದಮೋಹನ, ಪೊಳಲಿ ಸುಬ್ಬರಾವ್, ನೂಯಿ ಪಟೇಲ್ ಬಾಲಕೃಷ್ಣ ರಾವ್, ಜ್ಯೋತಿಷಿ ಶ್ರೀರಂಗ ಐತಾಳ ಕದ್ರಿ, ಮಹಿಳಾ ವೇದಿಕೆಯ ಅಧ್ಯಕ್ಷೆ ಪ್ರಭಾ ಎಸ್. ರಾವ್, ಉಪಾಧ್ಯಕ್ಷೆ ಲಲಿತಾ ಉಪಾಧ್ಯಾಯ ಮತ್ತಿತರರಿದ್ದರು. ಕಾರ್ಯದರ್ಶಿ ಜಿ.ಕೆ. ಮಯ್ಯ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುನರೂರು ಕ್ಷೇತ್ರ ಬ್ರಹ್ಮಕಲಶ ಲಾಂಛನ ಬಿಡುಗಡೆ
ಕುಂಟಿಕಾನಮಠ ದೇವಸ್ಥಾನದಲ್ಲಿ ನವರಾತ್ರಿ ಆಚರಣೆ