ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ತಾಲೂಕಿನ ಕೋರವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಂಗಮೇಶ ಛಾಯಾಗೋಳ ಅವರು ಸತತವಾಗಿ 3ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ತಾಲೂಕಿನ ಕೋರವಾರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ಐದು ವರ್ಷಗಳ ಅವಧಿಯ ನಿರ್ದೇಶಕರ ಮಂಡಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಂಗಮೇಶ ಛಾಯಾಗೋಳ ಹಾಗೂ ಉಪಾಧ್ಯಕ್ಷರಾಗಿ ಶರಣಪ್ಪ ತಾಳಿಕೋಟಿ ಅವರು ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಲೀಲಾವತಿ ಗೌಡ ತಿಳಿಸಿದರು.
ನಂತರ ಮಾತನಾಡಿದ ನೂತನ ಅಧ್ಯಕ್ಷ ಸಂಗಮೇಶ ಛಾಯಾಗೋಳ, ಗ್ರಾಮದ ರೈತರ ಮತ್ತು ಸಾರ್ವಜನಿಕ ಜೀವನದಲ್ಲಿ ನನ್ನನ್ನು ನಾನು ತೊಡಗಿಸಿಕೊಂಡು, ಸಹಕಾರ ಮತ್ತು ಸಹಬಾಳ್ವೆ ತತ್ವದಲ್ಲಿ ಸೇವೆ ಮಾಡುತ್ತಿದ್ದೇನೆ. ಅಮೂಲ್ಯವಾಗಿರುವ ಪ್ರೇರಣೆ, ಸಹಕಾರ ಸದಾ ಇರಲಿ, ಸಂಘವನ್ನು ಇನ್ನೂ ಉತ್ತರೋತ್ತರವಾಗಿ ಬೆಳೆಸೋಣ. ಸಂಘ ಕಳೆದ ಹದಿನೈದು ವರ್ಷದ ಅವಧಿಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಸಂಘದ ವ್ಯವಹಾರ ₹8 ಕೋಟಿ ದಾಟಿದೆ ಎಂದರು.ನನ್ನ ಆಡಳಿತ ಅವಧಿಯಲ್ಲಿ ನೂತನವಾಗಿ ಪಿಕೆಪಿಎಸ್ ಕಟ್ಟಡ ನಿರ್ಮಾಣ, ಡಿಸಿಸಿ ಬ್ಯಾಂಕ್ ಹಾಗೂ ಹೊಸ ಯೋಜನೆಗಾಗಿ ಸುಮಾರು 2 ಎಕರೆ ಜಮೀನು ಖರೀದಿ ಹಾಗೂ ತೊಗರಿ ಹಾಗೂ ಕಡ್ಲೆಬೀಜ ಖರೀದಿ ಹಾಗೂ ವಿತರಣೆ ಮಾಡುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಿದ ಕೀರ್ತಿ ಎಲ್ಲ ಆಡಳಿತ ಮಂಡಳಿಯ ಸದಸ್ಯರಿಗೆ ಸಲ್ಲುತ್ತದೆ. ಸಂಘದ ಬೆಳವಣಿಗೆಗೆ ಸಿಬ್ಬಂದಿ ಶ್ರಮ, ಷೇರುದಾರರು, ಗ್ರಾಹಕರ ವಿಶ್ವಾಸದಿಂದ ಬ್ಯಾಂಕ್ ಬೆಳೆದಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗಾಗಿ ಎಲ್ಲರ ಸಹಕಾರ ಬೇಕು ಎಂದು ಕೋರಿದರು.ಈ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರನ್ನು ರೈತ ಸಂಘದಿಂದ ಸನ್ಮಾನಿಸಲಾಯಿತು.
ಈ ವೇಳೆ ನೂತನವಾಗಿ ಆಯ್ಕೆಯಾದ ನಿರ್ದೇಶಕ ಮಂಡಳಿ ಸದಸ್ಯರಾದ ಸುಬ್ಬನಗೌಡ ಪೊಲೀಸಪಾಟೀಲ, ನಾನಾಗೌಡ ಬೋರಾವತ, ಶರಣಬಸವ ಸುಂಬಡ, ಗುರಣ್ಣ ಅಂಗಡಿ, ಸೋಮಶೇಖರ ಹಿರೇಮಠ, ಬಾಬಾಸಾಹೇಬ ಕೊಟಗಿ, ಇಸ್ಮೈಲ್ ವಡಗೇರಿ, ಚಿದಾನಂದ ಚವ್ಹಾಣ, ಭೀಮರಾಯ ತಳವಾರ, ಗ್ರಾಮದ ಪ್ರಮುಖರಾದ ಮಲ್ಲನಗೌಡ ಬಿರಾದಾರ, ಅಪ್ಪುಗೌಡ ಪಾಟೀಲ, ಶ್ರೀನಾಥಗೌಡ ಪಾಟೀಲ, ಹನುಮಂತರಾಯ ಸಾಲವಾಡಗಿ, ಭೋಜಪ್ಪಗೌಡ ಬಿರಾದಾರ, ಬಸನಗೌಡ ಬಿರಾದಾರ, ಶರಣಗೌಡ ಪಾಟೀಲ, ಸಂಗಮೇಶ ಮ್ಯಾಗೇರಿ, ಬಿ.ಸಿ.ಹೊನಮಟ್ಟಿ, ಪ್ರಭುಲಿಂಗಯ್ಯ ಮೇಲಿನ ಮಠ, ಹಾಗೂ ರೈತ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.