ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ಕೋರೇಗಾಲ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ 10 ಸ್ಥಾನಗಳಲ್ಲಿ 9 ಸ್ಥಾನಗಳು ಕಾಂಗ್ರೆಸ್ ಬೆಂಬಲಿತರ ಪಾಲಾಗಿವೆ.ಸಂಘದ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಚಿನ್ನವೆಂಕಟೇಗೌಡ, ಕೆ.ಕುಳ್ಳೇಗೌಡ, ವೆಂಕಟೇಗೌಡ, ಕೆ.ಶ್ರೀನಿವಾಸ್, ಜಯರಾಮು, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಬೋಸಯ್ಯ, ಮಹಿಳಾ ಮೀಸಲು ಕ್ಷೇತ್ರದಿಂದ ಜಯಾ, ಗೌರಮ್ಮ, ಹಿಂದುಳಿದ ವರ್ಗ-ಬಿ ನಿಂದ ದಾಸೇಗೌಡ ಹಾಗೂ ಜೆಡಿಎಸ್ ಬೆಂಬಲಿತ ಕೆ.ಮರಿಸ್ವಾಮಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಡಿ.ಆಶಾ ಕಾರ್ಯನಿರ್ವಹಿಸಿದರು.
ಸಂಘದ ಮಾಜಿ ಸಿಇಒ ಕೆ.ನಂಜೇಗೌಡ ಮಾತನಾಡಿ, ಗ್ರಾಮದ ಸ್ಥಳೀಯ ಕಾಂಗ್ರೆಸ್ ಮುಖಂಡರ ಪರಿಶ್ರಮದಿಂದ 10 ಸ್ಥಾನಗಳಲ್ಲಿ 9 ಸ್ಥಾನಗಳಿಗೆ ಗೆಲುವು ಸಾಧಿಸಿದ್ದೇವೆ. ಆಡಳಿತ ಮಂಡಳಿಯ ಅಧಿಕಾರವು ಕಾಂಗ್ರೆಸ್ ವಶವಾಗಿದೆ. ರೈತರಿಗೆ ಹೈನುಗಾರಿಕೆಯೇ ಜೀವಾಳ. ಸರ್ಕಾರ ಹಾಗೂ ಇಲಾಖೆಯಿಂದ ಸಿಗುವ ಸವಲತ್ತುಗಳನ್ನು ರೈತರಿಗೆ ಸಮರ್ಪಕವಾಗಿ ತಲುಪಿಸುವ ಕೆಲಸವನ್ನು ಆಡಳಿತ ಮಂಡಳಿ ಮಾಡಲಿದೆ. ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರ ಸಹಕಾರದಿಂದ ಸಂಘದ ಅಭಿವೃದ್ಧಿಗೆ ಮುಂದಾಗುತ್ತೇವೆ ಎಂದರು.ಇದೇ ವೇಳೆ ಮುಖಂಡರಾದ ಗಿರೀಗೌಡ, ಬಸವರಾಜು, ಸುರೇಶ್, ಗೆಡ್ಡೇಗೌಡ, ರೋಹಿತ್, ಸಂದೀಪ್, ಶಿವಲಿಂಗಯ್ಯ, ಲಕ್ಷ್ಮಣ, ಸಿದ್ದರಾಜು, ಕುಮಾರ್ ಸೇರಿದಂತೆ ಹಲವರು ನೂತನ ನಿರ್ದೇಶಕರನ್ನು ಅಭಿನಂದಿಸಿದರು.ತಾಲೂಕು ರೈತ ಸಂಘದ ಪದಾಧಿಕಾರಿಗಳ ಆಯ್ಕೆ
ಶ್ರೀರಂಗಪಟ್ಟಣ:ಪಟ್ಟಣದ ಹೊರವಲಯದ ಪ್ರವಾಸಿ ಮಂದಿರದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡರ ಅಧ್ಯಕ್ಷತೆಯಲ್ಲಿ ತಾಲೂಕು ರೈತ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.ಸಂಘದ ನೂತನ ಕಾರ್ಯಾಧ್ಯಕ್ಷರಾಗಿ ನೆಲಮನೆ ಶಂಭುಗೌಡ, ಉಪಾಧ್ಯಕ್ಷರಾಗಿ ದೊಡ್ಡಪಾಳ್ಯ ಜಯರಾಮು, ಪಾಲಹಳ್ಳಿ ನರಸಿಂಹಯ್ಯ, ಅಚ್ಚಪ್ಪನಕೊಪ್ಪಲು ಲೋಕೇಶ್, ತಡಗವಾಡಿ ನಿಂಗೇಗೌಡ, ಸಂಚಾಲಕರಾಗಿ ಪಾಂಡು, ಪ್ರಧಾನ ಕಾರ್ಯದರ್ಶಿಯಾಗಿ ಮಹದೇವಪುರದ ಕೇಶವ, ಸಂಘಟನಾ ಕಾರ್ಯದರ್ಶಿಯಾಗಿ ಎಂ.ಶೆಟ್ಟಹಳ್ಳಿ ಪುರುಷೋತ್ತಮ್, ಸಹಕಾರ್ಯದರ್ಶಿಯಾಗಿ ಶಶಿಧರ್, ಡಿ.ಎಂ.ಕೃಷ್ಣೇಗೌಡ ಅವರನ್ನು ನೇಮಿಸಲಾಯಿತು.ಈ ವೇಳೆ ರಾಜ್ಯ ಕಾರ್ಯದರ್ಶಿ ಪ್ರಸನ್ನಕುಮಾರ್, ತಾಲೂಕು ರೈತ ಸಂಘದ ಅಧ್ಯಕ್ಷ ಮರಳಗಾಲ ಕೃಷ್ಣೇಗೌಡ, ಮುಖಂಡರಾದ ಕೃಷ್ಣಪ್ಪ, ಬಿ.ಎಸ್.ರಮೇಶ್, ಶಂಕರೇಗೌಡ ಸೇರಿದಂತೆ ಇತರ ಗ್ರಾಮಗಳ ರೈತ ಮುಖಂಡರು ಹಾಜರಿದ್ದರು.