ಕೋರೆಗಾಂವ್ ವಿಜಯೋತ್ಸವ ಸ್ವಾಭಿಮಾನದ ಸಂಕೇತ

KannadaprabhaNewsNetwork |  
Published : Jan 02, 2026, 02:15 AM IST
0 | Kannada Prabha

ಸಾರಾಂಶ

ನಗರದ ಟೌನ್‌ಹಾಲ್ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ಗುರುವಾರ ಅಂಬೇಡ್ಕರ್‌ಯುವ ಸೇನೆ ವತಿಯಿಂದ ಭೀಮ-ಕೋರೆಗಾಂವ್ ವಿಜಯೋತ್ಸವವನ್ನು ಸೇನೆಯ ಅಧ್ಯಕ್ಷ ಗಣೇಶ್ ಜಿ.ನೇತೃತ್ವದಲ್ಲಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ, ತುಮಕೂರುನಗರದ ಟೌನ್‌ಹಾಲ್ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ಗುರುವಾರ ಅಂಬೇಡ್ಕರ್‌ಯುವ ಸೇನೆ ವತಿಯಿಂದ ಭೀಮ-ಕೋರೆಗಾಂವ್ ವಿಜಯೋತ್ಸವವನ್ನು ಸೇನೆಯ ಅಧ್ಯಕ್ಷ ಗಣೇಶ್ ಜಿ.ನೇತೃತ್ವದಲ್ಲಿ ಆಚರಿಸಲಾಯಿತು.ತಮ್ಮನ್ನು ಅವಮಾನ ಮಾಡಿ, ಸಮಾನತೆಯನ್ನು ನಿರಾಕರಿಸಿದ ಮರಾಠರ ಎರಡನೇ ಬಾಜಿರಾಯನ 28 ಸಾವಿರ ಮರಾಠ ಸೈನಿಕರ ವಿರುದ್ಧ ಐದುನೂರು ಜನ ಮಹರ್ ಸೈನಿಕರು, ಸ್ವಾಭಿಮಾನಕ್ಕಾಗಿ ಭೀಮಾ ನದಿ ತೀರದ ಕೋರೆಗಾಂವ್ ಬಳಿ ನಡೆಸಿದ ಯುದ್ಧದ 208 ನೇ ವಿಜಯೋತ್ಸವದ ಅಂಗವಾಗಿ ಭೀಮಕೋರೆಗಾಂವ್‌ ಯುದ್ಧ ಸ್ಮಾರಕದ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಗೌರವ ಸೂಚಿಸುವ ಮೂಲಕ ಯುದ್ಧದಲ್ಲಿ ಮಡಿದ ಮಹರ್ ಸೈನ್ಯದ 22 ಜನರನ್ನು ಸ್ಮರಿಸಲಾಯಿತು.ಈ ವೇಳೆ ಮಾತನಾಡಿದ ಅಂಬೇಡ್ಕರ್‌ ಯುವ ಸೇನೆಯ ಜಿಲ್ಲಾಧ್ಯಕ್ಷ ಗಣೇಶ್.ಜಿ., ಭೀಮಕೋರೆಗಾಂವ್ ವಿಜಯೋತ್ಸವ ದೇಶದ ದಲಿತರಿಗೆ ಸ್ವಾಭಿಮಾನದ ಸಂಕೇತವಾಗಿದೆ.ದಲಿತರ ಸ್ವಾಭಿಮಾನಕ್ಕೆ, ಆತ್ಮಗೌರವಕ್ಕೆ ಧಕ್ಕೆಯಾದರೆ ಸಹಿಸುವುದಿಲ್ಲ ಎಂಬುದಕ್ಕೆ ಈ ಯುದ್ಧ ಸಾಕ್ಷಿಯಾಗಿದೆ ಎಂದರು.ಲಂಡನ್‌ನ ಕೊಲಂಬಿಯಾ ವಿವಿಯಲ್ಲಿ ಅಂಬೇಡ್ಕರ್‌ ಕಲಿಯುವ ವೇಳೆ ಅಲ್ಲಿನ ಲೈಬ್ರರಿಯಲ್ಲಿ ದೊರೆತ ಪುಸ್ತಕದಿಂದ ಎರಡನೇ ಬಾಜಿರಾಯನ ಸೈನ್ಯದ ವಿರುದ್ದ ದಲಿತರ ನಡೆಸಿದ ಸ್ವಾಭಿಮಾನಿ ಯುದ್ಧವನ್ನು ಅರಿತು,ಯುದ್ದದಲ್ಲಿ ಮಡಿದ ಮಹರ್ ಸೈನಿಕರಿಗಾಗಿ ಬ್ರಿಟಿಷ್ ಅಧಿಕಾರಿಗಳು ನಿರ್ಮಿಸಿದ್ದ ಸ್ಮಾರಕವನ್ನು ಪತ್ತೆ ಹಚ್ಚುವ ಮೂಲಕ ಇತಿಹಾಸದಲ್ಲಿ ಮುಚ್ಚಿ ಹೋಗಿದ್ದ ಮಹಾನ್‌ ಘಟನೆಯನ್ನು ಜಗತ್ತಿಗೆ ಪರಿಚಯಿಸಿದರು. ಬಾಬಾ ಸಾಹೇಬರು ತಾವು ಬದುಕಿದಷ್ಟು ವರ್ಷ ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಜನವರಿ 1 ರಂದು ಭೀಮ-ಕೋರೆಗಾಂವ್‌ ಯುದ್ದ ಸ್ಮಾರಕಕ್ಕೆ ಭೇಟಿ ನೀಡಿ, ಮಡಿದ ಯೋಧರಿಗೆ ನಮನ ಸಲ್ಲಿಸುವ ಕೆಲಸ ಮಾಡುತ್ತಿದ್ದರು. ಅದೇ ರೀತಿಯಲ್ಲಿ ನಾವುಗಳ ಸಹ ಪ್ರತಿವರ್ಷ ಜನವರಿ 1 ರಂದು ಮಡಿದ ಯೋಧರ ಸ್ಮರಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.ಮುಖಂಡರಾದ ಸೌಭಾಗ್ಯಮ್ಮ ಮಾತನಾಡಿ, ಇತಿಹಾಸದ ಪುಟಗಳಲ್ಲಿ ಮುಚ್ಚಿ ಹೋಗಿದ್ದ ಭೀಮಕೋರೆಗಾಂವ್ ಹೋರಾಟವನ್ನು ತಮ್ಮಅಧ್ಯಯನ ಮೂಲಕ ಹೊರತಂದು ದಲಿತರು ಸಹ ವೀರರೇ, ಅವರ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಸಹಿಸುವುದಿಲ್ಲ ಎಂಬುದಕ್ಕೆ 500 ಜನ ಮಹರ್ ಸೈನಿಕರು 28 ಸಾವಿರ ಮರಾಠರ ಪೇಶ್ವೆ ಸೈನಿಕರನ್ನು ಸದೆ ಬಡಿದ ಈ ಯುದ್ಧವೇ ಸಾಕ್ಷಿ. ಇದು ನಮ್ಮೆಲ್ಲರ ಸ್ವಾಭಿಮಾನವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದರು.ಡಿಎಸ್‌ಎಸ್ ಮುಖಂಡಪಿ.ಎನ್.ರಾಮಯ್ಯ ಮಾತನಾಡಿ, ಭೀಮಾ ಕೋರೆಗಾಂವ್‌ ಯುದ್ಧ ದಲಿತರ ಸ್ವಾಭಿಮಾನದ ಸಂಕೇತ. ಇದನ್ನುಜಗತ್ತಿನ ಮುಂದೆ ಸಾಕ್ಷಾಧಾರಗಳ ಮೂಲಕ ತೆರೆಡಿದುವ ಮೂಲಕ ಬಾಬಾ ಸಾಹೇಬರು, ದಲಿತರಿಗೆ ಒಂದು ಎದೆಗಾರಿಕೆಯನ್ನು ಮೂಡಿಸಿದ್ದಾರೆ ಎಂದರು.ದಲಿತ ಮುಖಂಡರಾದದಾಸಪ್ಪ ಮಾತನಾಡಿ, ಇತಿಹಾಸದ ಪುಟಗಳಲ್ಲಿ ಹುದುಗಿದ್ದ ಭೀಮಕೋರೆಗಾಂವ್‌ಯುದ್ಧದ ವಿಚಾರವನ್ನು ಭಾರತೀಯರಿಗೆ ಪರಿಚಯಿಸಿ, ನಮ್ಮಆತ್ಮಾಭಿಮಾನ ಹೆಚ್ಚುವಂತೆ ಬಾಬಾ ಸಾಹೇಬರು ಮಾಡಿದ್ದಾರೆ. ದಲಿತರೆಂದರೆ ಗುಲಾಮರು ಎಂದು ಹಂಗಿಸುತ್ತಿದ್ದ ಜನರಿಗೆ ಭೀಮಕೋರೆಗಾಂವ್‌ ಯುದ್ದ ಒಂದು ಎಚ್ಚರಿಕೆಯ ಸಂಕೇತ ಎಂದರು. ಈ ವೇಳೆ ಮುಖಂಡರಾದ ಆಟೋ ಶಿವರಾಜು,ಡಿ.ಕೆ.ಇಂದ್ರಕುಮಾರ್, ಪಾಲಿಕೆ ಮಾಜಿ ಸದಸ್ಯ ನಯಾಜ್, ನರಸಿಂಹಮೂರ್ತಿ, ದೊಡ್ಡಯ್ಯ,ದಾಸಪ್ಪ, ಲಕ್ಷ್ಮೀಕಾಂತ್, ಮಾರುತಿ, ಪಾಲಿಕೆ ನೌಕರರ ಸಂಘದ ಗೌರವಾಧ್ಯಕ್ಷ ಆಂಜನಪ್ಪ, ಸೌಭಾಗ್ಯ, ಕಿರಣ್, ಲೋಕೇಶ್, ಶೆಟ್ಟಾಳಯ್ಯ, ಮಂಜುನಾಥ್, ಹಾಲೇಶ್ ಮತ್ತಿತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಯಕತ್ವ ಬದಲಾವಣೆ ಗೊಂದಲದ ನಡುವೆಯೇ ಕಸರತ್ತು ಸಿದ್ದರಾಮಯ್ಯ ಬಜೆಟ್‌ ತಯಾರಿ
ಬಳ್ಳಾರಿ - ಗುಂಡೇಟಿಗೆ ಯುವಕ ಬಲಿ - ನಗರದಲ್ಲಿ 144 ಸೆಕ್ಷನ್ ಜಾರಿ