ಕೋರೆಗಾಂವ್‌ ವಿಜಯಸ್ತಂಭ ದಲಿತರ ಸಾಹಸ ಪ್ರತೀಕ

KannadaprabhaNewsNetwork |  
Published : Jan 02, 2025, 12:31 AM IST
1ಕೆಡಿವಿಜಿ4-ದಾವಣಗೆರೆಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ದಲಿತ ಪರ ಸಂಘಟನೆಗಳ ಒಕ್ಕೂಟದಿಂದ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಿಸಲಾಯಿತು. | Kannada Prabha

ಸಾರಾಂಶ

ಮಹಾರಾಷ್ಟ್ರದ ಭೀಮಾ ತೀರದ ಕೋರೆಗಾಂವ್‌ನಲ್ಲಿ 28 ಸಾವಿರ ಪೇಶ್ವೆ ಸೈನಿಕರನ್ನು ಮಣಿಸಿದ ಘಟನೆ ಸ್ಮರಣಾರ್ಥ ನಗರದಲ್ಲಿ ಬುಧವಾರ ದಲಿತ ಸಂಘಟನೆಗಳ ಒಕ್ಕೂಟದಿಂದ 206ನೇ ಭೀಮಾ ಕೋರೆಗಾಂವ್‌ ವಿಜಯೋತ್ಸವ ಆಚರಿಸಲಾಯಿತು.

- ಭೀಮಾ ಕೋರೆಗಾಂವ್‌ ವಿಜಯೋತ್ಸವ ಸಂಭ್ರಮಾಚರಣೆಯಲ್ಲಿ ಹೆಗ್ಗೆರೆ ರಂಗಪ್ಪ ಅಭಿಮತ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಮಹಾರಾಷ್ಟ್ರದ ಭೀಮಾ ತೀರದ ಕೋರೆಗಾಂವ್‌ನಲ್ಲಿ 28 ಸಾವಿರ ಪೇಶ್ವೆ ಸೈನಿಕರನ್ನು ಮಣಿಸಿದ ಘಟನೆ ಸ್ಮರಣಾರ್ಥ ನಗರದಲ್ಲಿ ಬುಧವಾರ ದಲಿತ ಸಂಘಟನೆಗಳ ಒಕ್ಕೂಟದಿಂದ 206ನೇ ಭೀಮಾ ಕೋರೆಗಾಂವ್‌ ವಿಜಯೋತ್ಸವ ಆಚರಿಸಲಾಯಿತು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಭೀಮಾ ಕೋರೆಗಾಂವ್‌ನ ವೀರರ ಪರ ಜಯಘೋಷ ಹಾಕಿದರು. ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.

ಡಿಎಸ್‌ಎಸ್‌ ಹಿರಿಯ ಮುಖಂಡ ಹೆಗ್ಗೆರೆ ರಂಗಪ್ಪ ಮಾತನಾಡಿ, ಮಹಾರಾಷ್ಟ್ರದಲ್ಲಿ ಬಾಜಿರಾಯನ ಆಳ್ವಿಕೆಯ ಕಾಲದಲ್ಲಿ ಬ್ರಿಟಿಷರು ಉತ್ತರ ಭಾರತದಲ್ಲಿ ಆಳುತ್ತಿದ್ದರು. ಆಂಗ್ಲೋ-ಮರಾಠ ಯುದ್ಧದಲ್ಲಿ 2 ಸಲವೂ ಪೇಶ್ವೆಗಳನ್ನು ಸೋಲಿಸಲು ಸಾಧ್ಯವಾಗಿರದ ಬ್ರಿಟಿಷರು ಅಸಹಾಯಕರಾಗಿದ್ದರು. ಆದರೆ, ಮಹಾರೆಜಿಮೆಂಟ್ ಬಳಸಿ, ₹28 ಸಾವಿರ ಜನ ಪೇಶ್ವೆ ಸೈನಿಕರನ್ನು 1.1.1881ರಂದು ನಡೆದ ಯುದ್ಧದಲ್ಲಿ ಸೋಲಿಸುವ ಕೆಲಸ ಮಾಡಿದರು ಎಂದರು.

ಆಂಗ್ಲೋ-ಮರಾಠರ ಮಧ್ಯೆ ನಡೆದ ಅಂದಿನ ಯುದ್ಧದಲ್ಲಿ 28 ಸಾವಿರ ಪೇಶ್ವೆ ಸೈನಿಕರನ್ನು ಸೋಲಿಸಿ, ಈ ಪೈಕಿ 13 ಸಾವಿರಕ್ಕೂ ಹೆಚ್ಚು ಪೇಶ್ವೆ ಸೈನಿಕರು ಸಾವನ್ನಪ್ಪುತ್ತಾರೆ. ಕೇವಲ 25 ಜನ ಮಹಾ ರೆಜಿಮೆಂಟ್‌ನ ಸೈನಿಕರು ಹುತಾತ್ಮರಾಗುತ್ತಾರೆ. ಭೀಮಾ ನದಿಯ ತಟದ ಕೋರೆಗಾಂವ್‌ನಲ್ಲಿ ನಡೆದ ಅಂದಿನ ಯುದ್ಧದ ವಿಜಯದ ಸಂಕೇತವಾಗಿ ಅಲ್ಲಿ ಧ್ವಜಸ್ತಂಭ ನಿರ್ಮಾಣ ಮಾಡಿ, ಹುತಾತ್ಮ ಸೈನಿಕರ ಹೆಸರನ್ನು ಕೆತ್ತಲಾಗಿದೆ ಎಂದು ತಿಳಿಸಿದರು.

ಮರಾಠರ ವಿರುದ್ಧದ ಗೆಲುವಿನ ಸಂಭ್ರಮದಲ್ಲಿದ್ದ ಬ್ರಿಟಿಷರು, ನಿಮಗೆ ಏನು ಬೇಕೋ ಕೇಳಿ ಎಂದು ತಿಳಿಸುತ್ತಾರೆ. ಆಗ ರೆಜಿಮೆಂಟ್‌ನ ಸೈನಿಕರು ನಮಗೆ ಶಿಕ್ಷಣ ಕೊಡಿಸುವಂತೆ ಕೇಳುತ್ತಾರೆ. ನಂತರದಿಂದ ಈವರೆಗೂ ಭೀಮಾ ಕೋರೆಗಾಂವ್‌ ವಿಜಯಸ್ತಂಭದೊಂದಿಗೆ ಐತಿಹಾಸಿಕ ಕ್ಷೇತ್ರವಾಗಿ ರೂಪುಗೊಂಡಿದೆ. ಅಂಬೇಡ್ಕರ್ 1927ರಿಂದ ತಮ್ಮ ಜೀವಿತಾವಧಿವರೆಗೆ ಈ ವಿಜಯಸ್ತಂಭದ ಸ್ಥಳಕ್ಕೆ ಭೇಟಿ ನೀಡುತ್ತಿದ್ದರು. ದಲಿತರ ಸ್ವಾಭಿಮಾನ ಸಂಕೇತವಾಗಿ ಇಂದಿಗೂ ದೇಶಾದ್ಯಂತ ಈ ವಿಜಯೋತ್ಸವ ಆಚರಿಸಲಾಗುತ್ತಿದೆ. ಬಳಕ ದೇಶದಲ್ಲಿ ಸಾರ್ವಜನಿಕ ಶಿಕ್ಷಣ ಜಾರಿಗೊಳಿಸಲಾಯಿತು ಎಂದರು.

ಒಕ್ಕೂಟದ ಹಿರಿಯ ಮುಖಂಡ ಎಚ್.ಮಲ್ಲೇಶ ಹರಿಹರ, ಜಿಗಳಿ ಹಾಲೇಶ, ಪುರದಾಳ ಪರಮೇಶ, ಎಲ್.ಜಯಣ್ಣ, ಬಾತಿ ಸಿದ್ದೇಶ, ಶಶಿಧರ ಶಿರಮಗೊಂಡನಹಳ್ಳಿ, ಮಲ್ಲೇಶ ಚಿಕ್ಕನಹಳ್ಳಿ, ಐರಣಿ ಚಂದ್ರು, ನಿಟ್ಟುವಳ್ಳಿ ಉಮೇಶ, ನಿಂಗರಾಜ ಶಿರಮಗೊಂಡನಹಳ್ಳಿ, ನಾಗರಾಜ ಚಿಕ್ಕನಹಳ್ಳಿ, ರಾಮನಗರ ನಿಂಗಪ್ಪ, ತಿಪ್ಪೇರುದ್ರಪ್ಪ, ನಾಗೇಶ, ಮೇಗಳಗೆರೆ ಮಂಜು, ಎಚ್.ಸಿ. ಮಲ್ಲಪ್ಪ, ಬಿ.ಹನುಮಂತಪ್ಪ, ಕಾರ್ಮಿಕ ಮುಖಂಡರಾದ ಆವರಗೆರೆ ಚಂದ್ರು, ಇಪ್ಟಾದ ಐರಣಿ ಚಂದ್ರು ಇತರರು ಇದ್ದರು.

- - -

ಬಾಕ್ಸ್ * ಮಹರ್‌ಗಳ ವೀರತೆಗೆ ಕೋರೇಗಾವ್‌ ಸಾಕ್ಷಿ ಹಿರಿಯ ಕಾರ್ಮಿಕ ಮುಖಂಡ ಆವರಗೆರೆ ಎಚ್‌.ಜಿ.ಉಮೇಶ ಮಾತನಾಡಿ, ಭೀಮಾ ಕೋರೆಗಾಂವ್‌ ಕದನವು ಇತಿಹಾಸದ ಪುಟಗಳಲ್ಲಿ ಅತ್ಯಂತ ಮಹತ್ವದ ಕದನವಾಗಿ ದಾಖಲಾಗಿದೆ. ಬ್ರಿಟಿಷರ ಈಸ್ಟ್‌ ಇಂಡಿಯಾ ಕಂಪನಿ ಮತ್ತು ಮರಾಠ ಸಾಮ್ರಾಜ್ಯದ ಮಧ್ಯೆ ಮಹತ್ವದ ಮುಖಾಮುಖಿ ಇದಾಗಿದೆ. ಕ್ಯಾಪ್ಟನ್ ಫ್ರಾನ್ಸಿಸ್‌ ಸ್ಟೌಂಟನ್‌ ನೇತೃತ್ವದ ಕೇವಲ 800 ಸೈನಿಕರ ಬಲವಾದ ಬ್ರಿಟಿಷರ ಪಡೆಯು ಮರಾಠ ಸೇನೆಯನ್ನು ಎದುರಿಸುತ್ತದೆ. ಬ್ರಿಟಿಷರ ಪಡೆಯಲ್ಲಿ ಹೆಚ್ಚಾಗಿ ದಲಿತ, ಉಪ ಜಾತಿಯಾದ ಮಹರ್‌ಗಳಿಂದಲೇ ರಚಿತವಾಗಿತ್ತು. ಮಹರ್‌ಗಳಿದ್ದ ಪಡೆಯ ವೀರಾವೇಶದ ಹೋರಾಟದಿಂದಲೇ ಭೀಮಾ ಕೋರೆಗಾಂವ್‌ ಕದನದಲ್ಲಿ ಬ್ರಿಟಿಷರ ಗೆಲುವಿಗೆ ಕಾರಣವೂ ಆಯಿತು ಎಂದು ತಿಳಿಸಿದರು.

- - - -1ಕೆಡಿವಿಜಿ4.ಜೆಪಿಜಿ:

ದಾವಣಗೆರೆಯ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ದಲಿತ ಪರ ಸಂಘಟನೆಗಳ ಒಕ್ಕೂಟದಿಂದ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ
‘ಆತ್ಮನಿರ್ಭರ ಭಾರತ’ಕ್ಕೆ ಅಮೆಜಾನ್ ಪುಷ್ಟಿ