ಪಂಚವರ್ಣಕ್ಕೆ ಹಸಿರು ರಥ ಹಸ್ತಾಂತರ

KannadaprabhaNewsNetwork |  
Published : Jul 16, 2026, 03:15 AM IST
14ಪಂಚವರ್ಣ | Kannada Prabha

ಸಾರಾಂಶ

ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಪರಿಸರ ಕಾಳಜಿ ಕಾರ್ಯಕ್ರಮಕ್ಕೆ ಸಾಮಾಜಿಕ ಮುಖಂಡ ರಿಷಿರಾಜ್ ಸಾಸ್ತಾನ ಅವರು ತಾಯಿ ರತ್ನಾ ಜೆ. ರಾಜ್ ಅವರ ಮೂಲಕ ಹಸಿರು ರಥವನ್ನು ಕೊಡುಗೆಯಾಗಿ ನೀಡಿದ್ದು, ಅದರ ಕೀಯನ್ನು ಶನಿವಾರ ಪಂಚವರ್ಣ ಸಂಘಟನೆ ಗೌರವ ಸಲಹೆಗಾರ ಆನಂದ್ ಸಿ. ಕುಂದರ್ ಅವರಿಗೆ ಹಸ್ತಾಂತರಿಸಿದರು.

ಕೋಟ: ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಪರಿಸರ ಕಾಳಜಿ ಕಾರ್ಯಕ್ರಮಕ್ಕೆ ಸಾಮಾಜಿಕ ಮುಖಂಡ ರಿಷಿರಾಜ್ ಸಾಸ್ತಾನ ಅವರು ತಾಯಿ ರತ್ನಾ ಜೆ. ರಾಜ್ ಅವರ ಮೂಲಕ ಹಸಿರು ರಥವನ್ನು ಕೊಡುಗೆಯಾಗಿ ನೀಡಿದ್ದು, ಅದರ ಕೀಯನ್ನು ಶನಿವಾರ ಪಂಚವರ್ಣ ಸಂಘಟನೆ ಗೌರವ ಸಲಹೆಗಾರ ಆನಂದ್ ಸಿ. ಕುಂದರ್ ಅವರಿಗೆ ಹಸ್ತಾಂತರಿಸಿದರು.ಈ ಸಂದರ್ಭ ಮಾತನಾಡಿದ ರಷಿರಾಜ್ ಸಾಸ್ತಾನ, ಪರಿಸರಕ್ಕಾಗಿ ತಮ್ಮನ್ನು ಸಮರ್ಪಣಾ ಮನೋಭಾವದಿಂದ ಸಮರ್ಪಿಸಿಕೊಂಡ ಪಂಚವರ್ಣ ಸಂಘಟನೆ ಪ್ರಕೃತಿ ಪ್ರೇಮದ ಕಾಳಜಿ ಎಲ್ಲಾ ಕೊಡುಗೆಗಿಂತ ಮಿಗಿಲಾದದ್ದು ಇನ್ನಷ್ಟು ಸಮಾಜಮುಖಿ ಕಾರ್ಯಗಳು ನಡೆಯಲು ನಮ್ಮೆಲ್ಲರ ಸಹಕಾರ ಇರುತ್ತದೆ ಎಂದರು.ಈ ಸಂದರ್ಭದಲ್ಲಿ ಸಾಹಿತಿ ನರೇಂದ್ರ ಕುಮಾರ್ ಕೋಟ, ಸ್ನೇಹಕೂಟದ ವಿಜಯಲಕ್ಷ್ಮೀ ಭಟ್, ಪಂಚವರ್ಣ ಸಂಘಟನೆ ಪ್ರಮುಖರಾದ ಶೇವಧಿ ಸುರೇಶ್ ಗಾಣಿಗ, ಮನೋಹರ್ ಪೂಜಾರಿ, ಲಲಿತಾ ಪೂಜಾರಿ, ಸಂಚಾಲಕ ಅಮೃತ್ ಜೋಗಿ, ಅಜಿತ್ ಆಚಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಬೆಳುವಾಯಿ ಘಟಕಕ್ಕೆ ಮುರಳಿಧರ್ ಎಸ್. ಅಧ್ಯಕ್ಷರಾಗಿ ಆಯ್ಕೆ
ಬಲೆಯಲ್ಲಿ ನರಳುತ್ತಿದ್ದ ಅಳಿವಿನಂಚಿನ ಆಲಿವ್ ರಿಡ್ಲಿ ರಕ್ಷಣೆ