ಕನ್ನಡಪ್ರಭ ವಾರ್ತೆ ಸಿಂದಗಿ ದಸರಾ ನವರಾತ್ರಿ ಹಬ್ಬದ ಪ್ರಯುಕ್ತ ವಿಶ್ವಶಾಂತಿಗಾಗಿ ಸಿಂದಗಿ ಪಟ್ಟಣದ ಸಾರಂಗಮಠದ ಶ್ರೀ ಸಾತವೀರೇಶ್ವರ ಸಭಾ ಭವನದಲ್ಲಿ ಸಾರಂಗಮಠದಿಂದ ಲಲಿತ ಸಹಸ್ರನಾಮ ಪಾರಾಯಣ ಹಮ್ಮಿಕೊಳ್ಳಲಾಗಿದೆ. ಅ.3 ರಿಂದ ಅ.10ರ ವರೆಗೆ ನಿತ್ಯ ಸಂಜೆ 5 ರಿಂದ 7 ಗಂಟೆಯವರೆಗೆ ಶಕ್ತಿ ಮಾತೆಯ ತಾರಕ ಮಂತ್ರಗಳಲ್ಲಿ ಒಂದಾಗಿರುವ ಲಲಿತ ಸಹಸ್ರನಾಮ ಪಾರಾಯಣ ಒಂದು ಕೋಟಿ ಜಪಯಜ್ಞಕ್ಕೆ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಗುರುವಾರ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ
ದಸರಾ ನವರಾತ್ರಿ ಹಬ್ಬದ ಪ್ರಯುಕ್ತ ವಿಶ್ವಶಾಂತಿಗಾಗಿ ಸಿಂದಗಿ ಪಟ್ಟಣದ ಸಾರಂಗಮಠದ ಶ್ರೀ ಸಾತವೀರೇಶ್ವರ ಸಭಾ ಭವನದಲ್ಲಿ ಸಾರಂಗಮಠದಿಂದ ಲಲಿತ ಸಹಸ್ರನಾಮ ಪಾರಾಯಣ ಹಮ್ಮಿಕೊಳ್ಳಲಾಗಿದೆ. ಅ.3 ರಿಂದ ಅ.10ರ ವರೆಗೆ ನಿತ್ಯ ಸಂಜೆ 5 ರಿಂದ 7 ಗಂಟೆಯವರೆಗೆ ಶಕ್ತಿ ಮಾತೆಯ ತಾರಕ ಮಂತ್ರಗಳಲ್ಲಿ ಒಂದಾಗಿರುವ ಲಲಿತ ಸಹಸ್ರನಾಮ ಪಾರಾಯಣ ಒಂದು ಕೋಟಿ ಜಪಯಜ್ಞಕ್ಕೆ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಗುರುವಾರ ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಶ್ರೀಗಳು, ಶ್ರೀಮಠ ಮಾಡುತ್ತಿರುವ ಕಾರ್ಯಕ್ರಮ ವಿಶ್ವದಲ್ಲಿ ಶಾಂತಿ ನೆಲಸಲಿ, ಮನುಕುಲಕ್ಕೆ ಒಳಿತಾಗಳಿ ಎನ್ನುವ ಉದ್ದೇಶದಿಂದ. ನಾವೆಲ್ಲ ಧರ್ಮದ ಹಾದಿಯಲ್ಲಿ ನಡೆದರೆ ಬದುಕು ಹಸನಾಗುತ್ತದೆ. ಇಂದು ಸಮಾಜದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಸಮಾಜವನ್ನು ಕಲುಷಿತ ಮಾಡುತ್ತಿವೆ. ನವರಾತ್ರಿಯಲ್ಲಿ ಶ್ರೀಮಠ ಪ್ರತಿ ವರ್ಷ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಸುಮಾರು 1 ಸಾವಿರ ಸದ್ಭಕ್ತರು ಲಲಿತ ಸಹಸ್ರನಾಮ ಜಪ ಕೈಗೊಂಡಿದ್ದರು. ಪ್ರತಿ ದಿನ 10 ಲಕ್ಷ ಲಲಿತ ಸಹಸ್ರನಾಮದ ಪಾರಾಯಣ ಮೊಳಗಿತು. ಅಂದರೆ 10 ದಿನ ನಡೆಯುವ ಕಾರ್ಯಕ್ರಮದಲ್ಲಿ ಒಟ್ಟು 1 ಕೋಟಿ ಲಲಿತ ಸಹಸ್ರನಾಮದ ಪಾರಾಯಣ ನಡೆಯಲಿದೆ.
ಕಾರ್ಯಕ್ರಮದಲ್ಲಿ ಕೊಣ್ಣೂರಿನ ಹೊರಗಿನ ಕಲ್ಯಾಣ ಮಠದ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಕನ್ನೋಳ್ಳಿಯ ಶ್ರೀ ಸಿದ್ದಲಿಂಗ ಶಿವಾಚಾರ್ಯರು ಸೇರಿದಂತೆ ಶ್ರೀಮಠದ ಭಕ್ತವೃಂದ ಭಾಗಿಯಾಗಿದ್ದರು.ಸಾರಂಗಮಠ ಸದಾ ಸಮಾಜಮುಖಿ ಕಾರ್ಯಕ್ರಮ ಮಾಡುತ್ತಿದೆ. ನವರಾತ್ರಿಯಲ್ಲಿ 1 ಕೋಟಿ ಲಲಿತ ಸಹಸ್ರನಾಮ ಪಾರಾಯಣ ಮಾಡುತ್ತಿರುವುದು ಮತ್ತು ಅದರಲ್ಲಿ ನಾವು ಭಾಗಿಯಾಗಿದ್ದು ಸಂತಸ ತಂದಿದೆ. ಶ್ರೀಮಠದ ವತಿಯಿಂದಲೇ ಸಿಂದಗಿಯ ವಿವಿಧ ಬಡಾವಣೆಗಳಲ್ಲಿ ಪಾರಾಯಣದ ನುರಿತ ತತ್ಞರಿಂದ ತರಬೇತಿ ನೀಡಲು ಅನುಕೂಲ ಮಾಡಿಕೊಟ್ಟಿದ್ದು ಉತ್ತಮ ಕಾರ್ಯ ಎಂದು ಪಟ್ಟಣದ ಸಂಗೀತಾ ಕತ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.