ಕನ್ನಡಪ್ರಭ ವಾರ್ತೆ ಕೋಲಾರ೨೦೧೩ರ ಚುನಾವಣೆಯಲ್ಲಿ ಮುಳಬಾಗಿಲು ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಕೊತ್ತೂರು ಮಂಜುನಾಥ್ ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿ ಚುನಾಯಿತರಾಗಿದ್ದರು ಎಂಬ ಪ್ರಕರಣದ ಸಂಬಂಧ ಮತ್ತೊಮ್ಮೆ ಕಾಲಾವಕಾಶ ನೀಡಲು ಹೈಕೋರ್ಟ್ ನಿರಾಕರಿಸಿದೆ.ಸೆ.೧೨ರಂದು ನಡೆದ ವಿಚಾರಣೆ ವೇಳೆ ಸೆ.೧೯ರಂದು ‘ನಿಮ್ಮ ಆಕ್ಷೇಪಗಳು ಏನಿದ್ದರೂ ಸಲ್ಲಿಸಲೇಬೇಕು’ ಎಂದು ಕಟ್ಟಪ್ಪಣೆ ಮಾಡಿದ್ದ ನ್ಯಾ.ನಾಗಪ್ರಸನ್ನ ಗುರುವಾರ ಸಹ ಕೊತ್ತೂರು ಪರ ವಕೀಲ ಇರ್ಷಾದ್‌ಖಾನ್ ಮತ್ತೊಮ್ಮೆ ಕಾಲಾವಕಾಶ ಕೋರಿದಾಗ ನಿರಾಕರಿಸಿದರು.ಜಾತಿ ಪ್ರಮಾಣಪತ್ರ ನಕಲಿಕೊತ್ತೂರು ಮಂಜುನಾಥ್ ಜಾತಿ ಪ್ರಮಾಣಪತ್ರವು ನಕಲಿ ಎಂದು ಈ ಹಿಂದೆಯೇ ಹೈಕೋರ್ಟ್ ಹೇಳಿತ್ತು. ಅದರ ವಿರುದ್ಧ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಸುಪ್ರೀಂಕೋರ್ಟ್ ಹಿಂದಿನ ತೀರ್ಪಿನ ಪ್ರಭಾವಕ್ಕೆ ಒಳಗಾಗದೆ ಜಿಲ್ಲಾಧಿಕಾರಿ ನೇತೃತ್ವದ ಜಾತಿ ನಿರ್ಧರಣಾ ಸಮಿತಿ ನೀಡಿದ್ದ ವರದಿ ಆಧರಿಸಿ ಹೊಸದಾಗಿ ವಿಚಾರಣೆ ನಡೆಸಿ ಕೇಸು ಇತ್ಯರ್ಥಗೊಳಿಸಿ ಎಂದು ಹೈಕೋರ್ಟ್‌ಗೆ ಸೂಚಿಸಿತ್ತು.ಅದರ ಆಧಾರದ ಮೇಲೆ ವಿಚಾರಣೆ ನಡೆಸಿದ ನಾನೇ ಒಂದು ವರ್ಷದ ಹಿಂದೆ ಆರೋಪಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆದೇಶಿಸಿದ್ದೇನೆ. ಒಂದು ವರ್ಷವಾದರೂ ಮುಂದುವರೆಸಿಕೊಂಡು ಹೋದರೆ ಹೇಗೆ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು. ಕ್ರಿಮಿನಲ್ ಕೇಸ್ ದಾಖಲಿಸಿಲ್ಲ
ಮಧ್ಯಪ್ರವೇಶಿಸಿದ ಸರ್ಕಾರಿ ಅಭಿಯೋಜಕ ಎಂ.ಜಗದೀಶ್, ಜಿಲ್ಲಾಧಿಕಾರಿ ಸಲ್ಲಿಸಿದ ವರದಿಯಲ್ಲಿ ಕೊತ್ತೂರು ಮಂಜುನಾಥ್ ಬುಡ್ಗ ಜಂಗಮದವರಲ್ಲ, ಬೈರಾಗಿ ಜನಾಂಗಕ್ಕೆ ಸೇರಿದವರು ಎಂದು ಸ್ಪಷ್ಟಪಡಿಸಿದ್ದಾರೆ. ನೀವೇ ಜಾತಿ ಪ್ರಮಾಣಪತ್ರ ನಕಲಿಯಾಗಿದ್ದು ಕ್ರಿಮಿನಲ್ ಕೇಸು ದಾಖಲಿಸಬೇಕೆಂದು ಸೂಚಿಸಿ ಒಂದು ವರ್ಷವಾದರೂ ಇನ್ನೂ ಕ್ರಮ ಆಗದಿದ್ದರೆ ಹೇಗೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಜಗದೀಶ್ ಪ್ರಶ್ನಿಸಿದರು.ಹಿಂದಿನ ವಿಚಾರಣೆ ವೇಳೆಯೇ ನಿಮಗೆ ಆಕ್ಷೇಪಣೆ ಸಲ್ಲಿಸಲು ಸೆ.೧೯ ಕೊನೆಯ ಗಡುವು ಎಂದು ತಿಳಿಸಿದ್ದೆ. ನಿಮ್ಮ ವಾದ ಏನಾದರೂ ಇದ್ದರೆ ಹೇಳಿ, ಇಲ್ಲವೇ ಅಂತಿಮ ತೀರ್ಪು ನೀಡಲಾಗುವುದು ಎಂದು ಕೊತ್ತೂರು ಪರ ವಕೀಲರಿಗೆ ಸೂಚಿಸಿದ ನ್ಯಾಯಾಧೀಶರು, ತೀರ್ಪು ಪ್ರಕಟಿಸುವ ದಿನಾಂಕವನ್ನು ಕಾದಿರಿಸಿ ಮುಂದೂಡಿದರು.