)
ಕನ್ನಡಪ್ರಭ ವಾರ್ತೆ ಬೆಂಗಳೂರು
ಈ ಇಬ್ಬರ ನಿವಾಸಗಳ ಮೇಲೆ ಮಂಗಳವಾರ ಬೆಳಗ್ಗೆ ದಾಳಿ ನಡೆಸಿದ್ದ ಇ.ಡಿ. ಅಧಿಕಾರಿಗಳು ರಾತ್ರಿ ಬಂಧಿಸಿದ್ದರು. ತಡರಾತ್ರಿ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಿದ್ದರು. ಈ ವೇಳೆ ಬುಧವಾರ ಮಧ್ಯಾಹ್ನ 3ಗಂಟೆವರೆಗೆ ಇಬ್ಬರನ್ನೂ ಇ.ಡಿ.ವಶಕ್ಕೆ ನೀಡಿ ಆದೇಶಿಸಿದ್ದರು. ಬಳಿಕ ವಿಚಾರಣೆ ಮಾಡಿದ ಇ.ಡಿ.ಅಧಿಕಾರಿಗಳು ಬುಧವಾರ ಮಧ್ಯಾಹ್ನ ಇಬ್ಬರು ಆರೋಪಿಗಳನ್ನು ಪಿಎಂಎಲ್‌ಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆ ಸಂಬಂಧ 14 ದಿನಗಳ ಕಾಲ ವಶಕ್ಕೆ ನೀಡುವಂತೆ ಕೋರಿದರು.
ಇದಕ್ಕೆ ಆರೋಪಿಗಳ ಪರ ವಕೀಲರು ಆಕ್ಷೇಪಿಸಿದರು. ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದರು. ಈ ವೇಳೆ ಇ.ಡಿ. ಪರ ವಕೀಲ ಮಧು ಎನ್.ರಾವ್ ಅವರು ಆರೋಪಿಗಳು ಇ.ಡಿ. ವಶಕ್ಕೆ ಏಕೆ ಬೇಕು? ಹಗರಣದಲ್ಲಿ ಇವರ ಪಾತ್ರವೇನು? ಇವರು ಅಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಸಿಕ್ಕಿರುವ ಸಾಕ್ಷ್ಯಗಳು ಮೊದಲಾದ ವಿಚಾರಗಳನ್ನು ಎಳೆ ಎಳೆಯಾಗಿ ನ್ಯಾಯಾಲಯದ ಗಮನಕ್ಕೆ ತಂದರು. ಮಧ್ಯಂತರ ಜಾಮೀನು ಅರ್ಜಿ ಪರಿಗಣಿಸದಂತೆ ಮನವಿ ಮಾಡಿದರು. ಸುಧೀರ್ಘ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಅ.19ರ ವರೆಗೆ ಆರೋಪಿಗಳನ್ನು ಇ.ಡಿ.ವಶಕ್ಕೆ ನೀಡಿ ಆದೇಶಿಸಿತು.ಇಬ್ಬರು ಆರೋಪಿಗಳು ಇ.ಡಿ ತನಿಖೆಗೆ ಸಹಕರಿಸಬೇಕು. ವಿನಾಕಾರಣ ವೈದ್ಯಕೀಯ ವರದಿ ತೆಗೆದುಕೊಂಡು ಬರಬಾರದು. ಸರಿಯಾಗಿ ತನಿಖೆಗೆ ಸಹಕರಿಸಬೇಕು ಎಂದು ನ್ಯಾಯಾಲಯವು ಸೂಚಿಸಿತು. ಕಸ್ಟಡಿ ವೇಳೆ ಆರೋಪಿಗಳಿಗೆ ಅಗತ್ಯ ವೈದ್ಯಕೀಯ ತಪಾಸಣೆ ನಡೆಸಬೇಕು. ಔಷಧಿಗಳನ್ನು ಒದಗಿಸಬೇಕು ಎಂದು ನ್ಯಾಯಾಲಯವು ಇ.ಡಿ ಅಧಿಕಾರಿಗಳಿಗೆ ಸೂಚಿಸಿತು.
ಕಕ್ಷಿದಾರನಿಗೆ ಆರೋಗ್ಯ ಸಮಸ್ಯೆ:
ಇ.ಡಿ ಅಧಿಕಾರಿಗಳು ಈ ಹಿಂದೆ ತಮ್ಮ ಕಕ್ಷಿದಾರನ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಿ ಎರಡು ದಿನಗಳ ಕಾಲ ಶೋಧಿಸಿದ್ದರು. ಈ ವೇಳೆ ಅವರಿಗೆ ಯಾವುದೇ ದಾಖಲೆಗಳು ಸಿಕ್ಕಿಲ್ಲ. ಇದೀಗ ಎರಡನೇ ಬಾರಿ ದಾಳಿ ಮಾಡಿ ಬಂಧಿಸಿ ಅನವಶ್ಯಕವಾಗಿ ವಶಕ್ಕೆ ಕೇಳುತ್ತಿದ್ದಾರೆ. ಮತ್ತೆ ವಶಕ್ಕೆ ಪಡೆಯುವ ಅಗತ್ಯವಿಲ್ಲ. ನೋಟಿಸ್ ಕೊಟ್ಟು ವಿಚಾರಣೆ ಮಾಡಬಹುದಿತ್ತು. ಹೀಗಾಗಿ ತಮ್ಮ ಕಕ್ಷಿದಾರರಿಗೆ ಮಧ್ಯಂತರ ಜಾಮೀನು ನೀಡುವಂತೆ ಕೋರಿದರು.
ಆರೋಪಿ ಗೀತಾ ಅವರು ನಾನು ನವರಾತ್ರಿ ಹಬ್ಬದ ಪ್ರಯುಕ್ತ ಮಗಳಿಗಾಗಿ ಉಪವಾಸ ವ್ರತ ನಡೆಸುತ್ತಿರುವುದಾಗಿ ನ್ಯಾಯಾಲಯದಲ್ಲಿ ಇ.ಡಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಕಸ್ಟಡಿ ಅವಧಿಯಲ್ಲಿ ಉಪವಾಸ ಮಾಡಲು ಅವಕಾಶವಿಲ್ಲ. ನೀವು ತನಿಖೆಗೆ ಸಹಕರಿಸಬೇಕು. ಉಪವಾಸ ಮಾಡಿದರೆ ಆರೋಗ್ಯದಲ್ಲಿ ಏರುಪೇರಾಗಲಿದೆ. ಹೀಗಾಗಿ ಉಪವಾಸ ಮಾಡಲು ಅವಕಾಶವಿಲ್ಲ ಎಂದು ಹೇಳಿದ್ದಾರೆ. ಈ ವಿಚಾರವನ್ನು ನಿಮ್ಮ ಕಕ್ಷಿದಾರರಿಗೆ ಸೂಕ್ತ ರೀತಿ ತಿಳಿಸುವಂತೆ ಅವರ ವಕೀಲರಿಗೂ ಇ.ಡಿ. ಅಧಿಕಾರಿಗಳು ಹೇಳಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಆರೋಪಿ ಶಿವಶಂಕರಪ್ಪ ಸಾಹುಕಾರ್ ಬಂಧನ ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಇ.ಡಿ ಅಕ್ರಮವಾಗಿ ಶಿವಶಂಕರಪ್ಪ ಅವರನ್ನು ಬಂಧಿಸಿದೆ. ಈ ಹಿಂದೆ ಎರಡು ದಿನ ದಾಳಿ ಮಾಡಿ ಪರಿಶೀಲಿಸಿದಾಗ ಯಾವುದೇ ದಾಖಲೆ ಸಿಕ್ಕಿಲ್ಲ. ಈಗ ತರಾತುರಿಯಲ್ಲಿ ಯಾವುದೇ ನೋಟಿಸ್ ನೀಡದೆ ಬಂಧಿಸಿದ್ದಾರೆ. ಹೀಗಾಗಿ ಈ ಬಂಧನ ಕ್ರಮವನ್ನು ಪರಿಶೀಲಿಸುವಂತೆ ಆರೋಪಿ ಪರ ವಕೀಕರು ಕೋರಿದರು. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಇ.ಡಿ ಪರ ವಕೀಲರಿಗೆ ಸೂಚಿಸಿದ ನ್ಯಾಯಾಲಯವು ಅ.19ರಂದು ಈ ಅರ್ಜಿ ವಿಚಾರಣೆ ನಡೆಸುವುದಾಗಿ ತಿಳಿಸಿತು.