ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗೆ ಒತ್ತು: ದರ್ಶನ್

KannadaprabhaNewsNetwork |  
Published : Sep 14, 2026, 03:00 AM IST
 ಲೋಕಾರ್ಪಣೆ | Kannada Prabha

ಸಾರಾಂಶ

ಇಂದಿನ ಈ ಕಾಲಘಟ್ಟದಲ್ಲಿ ಯುಪಿಎಸ್ಸಿ, ಕೆಪಿಎಸ್ಸಿ, ಐಎಎಸ್,‌ಕೆಎಎಸ್, ಬ್ಯಾಂಕಿಂಗ್ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿಯೂ ಸ್ಪರ್ಧೆಗಳು ಹೆಚ್ಚಾಗಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಚೆನ್ನೈ, ತಮಿಳುನಾಡು ಮೊದಲಾದ ದೂರದ ಊರುಗಳಿಗೆ ಹೋಗಿ ತರಬೇತಿ ಪಡೆಯುವ ಬದಲು ಇದೀಗ ಮಂಗಳೂರು ಕೂಡಾ ಸ್ಪರ್ಧಾತ್ಮಕ ಪರೀಕ್ಷಾ‌ ತರಬೇತಿಯ ಕೇಂದ್ರವಾಗಿ ರೂಪುಗೊಳ್ಳುವ ಸೂಚನೆ ದೊರೆತಿದೆ ಎಂದು ದ.ಕ.ಜಿಲ್ಲಾ ಜಿಲ್ಲಾಧಿಕಾರಿ ದರ್ಶನ್ ಎಚ್ ವಿ

ಉಳ್ಳಾಲ

ಇಂದಿನ ಈ ಕಾಲಘಟ್ಟದಲ್ಲಿ ಯುಪಿಎಸ್ಸಿ, ಕೆಪಿಎಸ್ಸಿ, ಐಎಎಸ್,‌ಕೆಎಎಸ್, ಬ್ಯಾಂಕಿಂಗ್ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿಯೂ ಸ್ಪರ್ಧೆಗಳು ಹೆಚ್ಚಾಗಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಚೆನ್ನೈ, ತಮಿಳುನಾಡು ಮೊದಲಾದ ದೂರದ ಊರುಗಳಿಗೆ ಹೋಗಿ ತರಬೇತಿ ಪಡೆಯುವ ಬದಲು ಇದೀಗ ಮಂಗಳೂರು ಕೂಡಾ ಸ್ಪರ್ಧಾತ್ಮಕ ಪರೀಕ್ಷಾ‌ ತರಬೇತಿಯ ಕೇಂದ್ರವಾಗಿ ರೂಪುಗೊಳ್ಳುವ ಸೂಚನೆ ದೊರೆತಿದೆ ಎಂದು ದ.ಕ.ಜಿಲ್ಲಾ ಜಿಲ್ಲಾಧಿಕಾರಿ ದರ್ಶನ್ ಎಚ್ ವಿ ಹೇಳಿದರು.

ಅವರು ಮಂಗಳೂರು ವಿವಿಯ 47 ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ಮತ್ತು ಮಂಗಳೂರು ವಿವಿ ಸ್ಟಡಿಸರ್ಕಲ್ ನ್ನು ಗುರುವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅಧ್ಯಕ್ಷತೆ ವಹಿಸಿ ಮಾತನಾಡಿ, 47 ನೇ ವರ್ಷಗಳ ಇತಿಹಾಸದಲ್ಲಿ ಅನೇಕ ಏಳುಬೀಳುಗಳ ನಡುವೆ ವಿವಿಯು ಎಲ್ಲರ ಸಹಕಾರದಿಂದ ಅನೇಕ ಸಾಧನೆ ಮೂಲಕ ಮುನ್ನಡೆಯುತ್ತದೆ ಎಂದರು.

ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕದರೆ ಕೇವಲ ಪುಸ್ತಕಗಳು ಸಾಕಾಗದು, ಇತರ ಪಠ್ಯೇತರ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳಬೇಕು ಎಂದರು.

ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರೇನ್ ಪಿ, ದ.ಕ.ಜಿ.ಪಂ. ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ನರ್ವಡೆ ವಿನಾಯಕ್ ಕರ್ಭಾರಿ, ವಿಶ್ರಾಂತ ಕುಲಸಚಿವರಾದ ರಾಜು ಮೊಗವೀರ, ಇನ್ ಸೈಟ್ ಐಎಎಸ್ ಸಂಸ್ಥಾಪಕರಾದ ವಿನಯ್ ಕುಮಾರ್ ಜಿ, ಸ್ಪರ್ಧಾತ್ಮಕ ಪರೀಕ್ಷೆ ತರಬೇತುದಾರರಾದ ನಿಖಿಲ್ ಗೌಡ, ಪರೀಕ್ಷಾಂಗ ಕುಲಸಚಿವ ಪ್ರೊ.ದೇವೇಂದ್ರಪ್ಪ, ಹಣಕಾಸು ಅಧಿಕಾರಿ ಪಂಚಲಿಂಗಸ್ವಾಮಿ ಮತ್ತಿತರರಿದ್ದರು.

ಕುಲಸಚಿವ ಸಂತೋಷ್ ಬಿ ಜಗಲಸಾರ ಪ್ರಾಸ್ತಾವಿಕ ಮಾತನಾಡಿದರು. ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಪ್ರೊ.ಗಣೇಶ್ ಸಂಜೀವ್ ವಂದಿಸಿದರು. ಡಾ.ಯಶುಕುಮಾರ್ ನಿರೂಪಿಸಿದರು.ವಿವಿಗಳಲ್ಲಿ ಉದ್ಯೋಗ ಮಾಹಿತಿ ಕೇಂದ್ರಗಳು ಇದ್ದರೂ ಐ ಎಎಸ್, ಕೆ ಎಎಸ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಬೇಕಾದ ಪೂರಕ ಅವಕಾಶಗಳು ಕಡಿಮೆಯಿತ್ತು. ಮಂಗಳೂರು ವಿವಿಯಲ್ಲಿ ಉದ್ಘಾಟನೆಗೊಂಡಿರುವ ಸ್ಟಡಿ ಸರ್ಕಲ್ ಮೂಲಕ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಸಾಮರ್ಥ್ಯ, ಅವಕಾಶ ಹೆಚ್ಚಾಗಲಿ.

-ಕೆ.ರಾಜು ಮೊಗವೀರ ವಿಶ್ರಾಂತ ಕುಲಸಚಿವರು, ಮಂಗಳೂರು ವಿವಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಂಗಳೂರು ಸಚಿವ ಸಂಪುಟ ಸಭೆಗೆ ಬಿಜೆಪಿ ದ.ಕ.ದ 44 ಬೇಡಿಕೆಗಳ ಪಟ್ಟಿ ಸಲ್ಲಿಕೆ
ಜನತೆಗೆ ಪ್ರಜಾ ಸೇವೆಯಡಿ ನ್ಯಾಯ ದೊರೆಯಲು ಅವಕಾಶ: ಅಶೋಕ್ ರೈ