✔️ ರಿಲೀಸ್‌...ಸಮಾನತೆಗಾಗಿ ಹೋರಾಡಿದ ಕ್ರಾಂತಿ ಪುರುಷ ಬಸವಣ್ಣ: ಭೀಮುನಾಯಕ್

KannadaprabhaNewsNetwork |  
Published : May 11, 2024, 12:34 AM IST
 ಯಾದಗಿರಿಯ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಾಲಯದಲ್ಲಿ ವಿಶ್ವಗುರು ಬಸವಣ್ಣನವರ 891ನೇ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮರವರ 601ನೇ ಜಯಂತಿ ಆಚರಿಸಲಾಯಿತು. | Kannada Prabha

ಸಾರಾಂಶ

ಯಾದಗಿರಿಯ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಾಲಯದಲ್ಲಿ ವಿಶ್ವಗುರು ಬಸವಣ್ಣನವರ 891ನೇ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮರವರ 601ನೇ ಜಯಂತಿ ಆಚರಿಸಲಾಯಿತು.

ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಾಲಯದಲ್ಲಿ ಶರಣರ ಜಯಂತ್ಯುತ್ಸವ ಕನ್ನಡಪ್ರಭ ವಾರ್ತೆ ಯಾದಗಿರಿ

ಕಾಯಕವೇ ಕೈಲಾಸ ಎಂದು ವಿಶ್ವಕ್ಕೆ ಸಾರುವುದರ ಜೊತೆಗೆ ಸಮಾನತೆಗಾಗಿ ಹೋರಾಡಿದ 12ನೇ ಶತಮಾನದ ಮಹಾನ್ ಕ್ರಾಂತಿ ಪುರುಷ ಬಸವಣ್ಣನವರು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ. ಎನ್. ಭೀಮುನಾಯಕ ಹೇಳಿದರು.

ನಗರದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಕಾರ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 891ನೇ ಬಸವಣ್ಣ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ 601ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಬಸವಣ್ಣನವರು ಸಮಗ್ರ ಕ್ರಾಂತಿ ಯುಗಪುರುಷ, ವಚನಗಳ ಮೂಲಕ ಸಮಾಜದ ಅಂಕುಡೊಂಕು ತಿದ್ದಿದವರು ಎಂದರು.

ಹೇಮರೆಡ್ಡಿ ಮಲ್ಲಮ್ಮನ ಬಾಳು ಪವಿತ್ರ ಮೌಲ್ಯಗಳ, ಆದರ್ಶದ ಅತ್ಯಮೂಲ್ಯ ಕಣಜವಾಗಿದೆ. ಜೀವನವಿಡಿ ಕಷ್ಟವನ್ನುಂಡರೂ, ಇತರರು ಕಷ್ಟದಲ್ಲಿರುವಾಗ, ತನ್ನ ನೋವನ್ನೆಲ್ಲ ಮರೆತು ನೆರವು ನೀಡುತಿದ್ದರು. ಅವರ ಧೈರ್ಯ ಹಾಗೂ ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಈ ವೇಳೆ ಕರವೇ ಯುವ ಘಟಕ ಜಿಲ್ಲಾಧ್ಯಕ್ಷ ವಿಶ್ವರಾಧ್ಯ ದಿಮ್ಮೆ, ಅಂಬ್ರೇಶ ಹತ್ತಿಮನಿ, ಸಂತೋಷ ನಿರ್ಮಲಕರ್, ಹಣಮಂತ ಖಾನಳ್ಳಿ, ಸಾಹೇಬಗೌಡ ಗೌಡಗೇರಾ, ಸಿದ್ಧರಾಮರೆಡ್ಡಿ ಚಿನ್ನಾಕಾರ್, ಸಿದ್ದಪ್ಪ ಕ್ಯಾಸಪನಳ್ಳಿ, ಭೀಮರಾಯ ರಾಮಸಮುದ್ರ, ಶರಣು ಸಾಹುಕಾರ, ಶರಣಗೌಡ ಕನ್ಯಾಕೌಳೂರು, ನಾಗು ತಾಂಡೂಲ್ಕರ್, ಶಾಂತು ಕಲಾಲ್, ರಮೇಶ ಡಿ. ನಾಯಕ, ಇರ್ಫಾನ್ ಪಟೇಲ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!