ಕೃಷ್ಣಾ ಬಿ ಸ್ಕೀಂ ಕೇಂದ್ರದ ಮೇಲೆ ಆರೋಪ ಸಲ್ಲದು -ಶಾಸಕ ಸಿ.ಸಿ. ಪಾಟೀಲ

KannadaprabhaNewsNetwork |  
Published : Jul 22, 2025, 12:15 AM IST
(21ಎನ್.ಆರ್.ಡಿ3 ಸುದ್ದಿಗೋಷ್ಟಿಯಲ್ಲಿ ಶಾಸಕ ಸಿ.ಸಿ.ಪಾಟೀಲ ಮಾತನಾಡುತ್ತಿದ್ದಾರೆ.)  | Kannada Prabha

ಸಾರಾಂಶ

. ಕೃಷ್ಣಾ ಬಿ ಸ್ಕೀಂ ಜಾರಿಗೆ ಅಗತ್ಯವಿರುವ ಕ್ರಮಗಳನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳಬೇಕು. ಆದರೆ ಕೇಂದ್ರದ ಮೇಲೆ ಅನಗತ್ಯ ಆರೋಪ ಮಾಡುವುದು ಸಲ್ಲದು ಎಂದು ಶಾಸಕ ಸಿ.ಸಿ. ಪಾಟೀಲ ತಿರುಗೇಟು ನೀಡಿದರು.

ನರಗುಂದ: ಕೃಷ್ಣಾ ಬಿ ಸ್ಕೀಂ ಜಾರಿಗೆ ಅಗತ್ಯವಿರುವ ಕ್ರಮಗಳನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳಬೇಕು. ಆದರೆ ಕೇಂದ್ರದ ಮೇಲೆ ಅನಗತ್ಯ ಆರೋಪ ಮಾಡುವುದು ಸಲ್ಲದು ಎಂದು ಶಾಸಕ ಸಿ.ಸಿ. ಪಾಟೀಲ ತಿರುಗೇಟು ನೀಡಿದರು.ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಎಚ್.ಕೆ. ಪಾಟೀಲರ ಆರೋಪಕ್ಕೆ ತಿರುಗೇಟು ನೀಡಿದ ಅವರು, ರಾಜ್ಯ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ನಿರಂತರ ದೆಹಲಿಗೆ ತೆರಳುತ್ತಾರೆ. ಆಗ ಕೇಂದ್ರ ನೀರಾವರಿ ಸಚಿವರನ್ನು ಈ ವಿಷಯವಾಗಿ ಭೇಟಿಯಾಗಿಲ್ಲ. ಒಮ್ಮೆಯೂ ರಾಜ್ಯ ಸರ್ಕಾರದಿಂದ ನಿಯೋಗ ತೆಗೆದುಕೊಂಡು ಹೋಗಿಲ್ಲ‌. ಇದರಿಂದಲೇ ಕೃಷ್ಣ ಯೋಜನೆ ಮೇಲೆ ರಾಜ್ಯ ಸರ್ಕಾರದ ಕಾಳಜಿ ಏನೆನ್ನುವುದು ಗೊತ್ತಾಗುತ್ತದೆ ಎಂದರು.

ಕಳಸಾ-ಬಂಡೂರಿ ಯೋಜನೆ ಅನುಷ್ಠಾನಗೊಳಿಸುವಲ್ಲಿ ಕಾಂಗ್ರೆಸ್‌ನ ಪ್ರಯತ್ನ ಶೂನ್ಯ. ಈ ಯೋಜನೆ ಪ್ರಗತಿ ಹಂತದಲ್ಲಿರಲು ಬಿಜೆಪಿ ಕಾರಣ. ಮುಂದೆ ಬಜೆಪಿಯೃ ಅದನ್ನು ಪೂರ್ಣಗೊಳಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರೈತ ಬಂಡಾಯದ ನೆನಪು ಸಾರ್ಥಕ: 1980ರಲ್ಲಿ ನಡೆದ ರೈತ ಬಂಡಾಯ ರಾಜ್ಯದಲ್ಲಿ ರೈತ ಸಂಘದ ಹುಟ್ಟಿಗೆ ಕಾರಣವಾಯಿತು. ಆದರೆ ಇಲ್ಲಿಯವರೆಗೆ ರೈತ ಸ್ಮಾರಕ ನಿರ್ಮಾಣ ಗೊಂಡಿದ್ದಿಲ್ಲ. ಈಗ ದೇಸಾಯಿಗೌಡ ಪಾಟೀಲ, ಸಲೀಂ ಮೇಗಲಮನಿ ಭೂದಾನ ಮಾಡಿದ ಪರಿಣಾಮ ಅದೇ ಸ್ಥಳದಲ್ಲೇ ಈಗ ಸಚಿವ ಎಚ್.ಕೆ. ಪಾಟೀಲರು ಅಡಿಗಲ್ಲು ಹಾಕುವ ಮೂಲಕ ಚಾಲನೆ ನೀಡಿದ್ದಾರೆ. ಇದರಿಂದ 45 ವರ್ಷದ ಕನಸು ನನಸಾಗಿದೆ ಎಂದರು. ಯೂರಿಯಾ ಗೊಬ್ಬರದ ಕೊರತೆ ನೀಗಿಸಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಗದಗ ಜಿಲ್ಲೆಗೆ 700 ಟನ್ ಬಿಡುಗಡೆಯಾಗಿದೆ. ಅದರಲ್ಲಿ 300 ಟನ್ ನರಗುಂದಕ್ಕೆ ಬಿಡುಗಡೆಯಾಗಿದೆ. ಶೀಘ್ರ ಇದರಿಂದ ರೈತರಿಗೆ ಗೊಬ್ಬರ ಕೊರತೆ ನೀಗಲಿದೆ ಎಂದರು. ಈ ಸಂದರ್ಭದಲ್ಲಿ ಅಜ್ಜಪ್ಪ ಹುಡೇದ, ಉಮೇಶಗೌಡ ಪಾಟೀಲ, ಬಾಬುಗೌಡ ಪಾಟೀಲ, ಎಸ್.ಆರ್. ಪಾಟೀಲ, ದೇಸಾಯಿಗೌಡ ಪಾಟೀಲ, ಬಿ.ಬಿ. ಐನಾಪುರ, ಮುತ್ತು ರಾಯರಡ್ಡಿ, ಚಂದ್ರಶೇಖರ ದಂಡಿನ, ಪ್ರಕಾಶಗೌಡ ತಿರಕನಗೌಡ್ರ, ನಾಗನಗೌಡ ಪಾಟೀಲ, ಗುರುಪ್ಪ ಆದಪ್ಪನವರ, ಬಿ.ಎಸ್. ಪಾಟೀಲ, ಮಲ್ಲಪ್ಪ ಮೇಟಿ, ನಿಂಗಣ್ಣ ಗಾಡಿ, ಸಲೀಂ ಮೇಗಲಮನಿ, ಬಸವಣ್ಣಪ್ಪ ಸುಂಕದ, ಶಂಕರಗೌಡ ಯಲ್ಲಪ್ಪಗೌಡ್ರ, ನಾಗರಾಜ ನೆಗಳೂರ, ನವೀನ ಪಾಟೀಲ, ಅನೀಲ ಧರಿಯಣ್ಣವರ, ವಿಠಲ ಹವಾಲ್ದಾರ, ಹುಸೇನಸಾಬ ನವಲೆ, ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ