ಕನ್ನಡಪ್ರಭ ವಾರ್ತೆ, ತುಮಕೂರು
ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಯಕ್ಷದೀವಿಗೆ ಸಂಸ್ಥೆಯು ಆಶ್ರಮದಲ್ಲಿ ಪ್ರಸ್ತುತಪಡಿಸಿದ ಕೃಷ್ಣಸಂಧಾನ ಯಕ್ಷಗಾನ ತಾಳಮದ್ದಳೆಯ ಸಂದರ್ಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಕೃಷ್ಣನದ್ದು ಅತ್ಯಂತ ವಿಶಿಷ್ಟವಾದ ವ್ಯಕ್ತಿತ್ವ. ವಿವಿಧ ವಯೋಮಾನದ, ವಿವಿಧ ಮನೋಧರ್ಮಗಳ ಮಂದಿಗೆ ಆತ ಭಿನ್ನವಾಗಿ ಕಾಣಿಸಿಕೊಳ್ಳುತ್ತಾನೆ. ಅವನ ವ್ಯಕ್ತಿತ್ವದಲ್ಲಿರುವ ವೈವಿಧ್ಯತೆಯಿಂದಲೇ ಆತ ಎಲ್ಲರಿಗೂ ಹತ್ತಿರವಾಗುತ್ತಾನೆ. ಕೃಷ್ಣ ಜನ್ಮಾಷ್ಟಮಿಗೆ ಭಾರತೀಯ ಪರಂಪರೆಯಲ್ಲಿ ವಿಶಿಷ್ಟ ಸ್ಥಾನವಿದೆ ಎಂದರು.ಕೃಷ್ಣಸಂಧಾನ ಪ್ರಸಂಗದ ಪಾತ್ರಗಳು ವರ್ತಮಾನಕ್ಕೆ ಹತ್ತಿರವಾಗಿವೆ. ಕೌರವ, ಕೃಷ್ಣ, ವಿದುರನಂತಹ ಪಾತ್ರಗಳು ನಮ್ಮ ಸುತ್ತಲಿನ ಸಮಾಜದಲ್ಲಿಯೂ ಕಂಡುಬರುತ್ತವೆ. ತಾನು ಹೇಳಿದ್ದೇ ಸರಿ ಎಂದು ನಂಬುವ ಕೌರವ, ಧರ್ಮದ ಚೌಕಟ್ಟೇನು ಎಂದು ಪ್ರತಿಪಾದಿಸುವ ಕೃಷ್ಣ, ಸೌಜನ್ಯ ಮತ್ತು ಕಾಠಿಣ್ಯ ಎರಡನ್ನೂ ಕಾಣಿಸುವ ವಿದುರ- ಎಲ್ಲ ಕಾಲದಲ್ಲೂ ಇರುತ್ತಾರೆ ಎಂದು ವಿಶ್ಲೇಷಿಸಿದರು.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯರಾದ ಆರತಿ ಪಟ್ರಮೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ ಪುತ್ತೂರು ರಮೇಶ ಭಟ್, ಚೆಂಡೆವಾದಕರಾಗಿ ಪಿ.ಜಿ. ಜಗನ್ನಿವಾಸರಾವ್, ಮದ್ದಳೆವಾದಕರಾಗಿ ಅವಿನಾಶ್ ಬೈಪಾಡಿತ್ತಾಯ, ಚಕ್ರತಾಳದಲ್ಲಿ ಸಂವೃತ ಶರ್ಮಾ ಸಹಕರಿಸಿದರು. ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ಶಶಾಂಕ ಅರ್ನಾಡಿ (ಕೌರವ), ಸಿಬಂತಿ ಪದ್ಮನಾಭ (ಕೃಷ್ಣ) ಹಾಗೂ ಆರತಿ ಪಟ್ರಮೆ (ವಿದುರ) ಪಾತ್ರನಿರ್ವಹಿಸಿದರು.