ಕೃಷ್ಣಾ ನದಿಗೆ ಮತ್ತೆ ಜೀವ ಕಳೆ: ಚಿಕ್ಕಪಡಸಲಗಿ ಬ್ಯಾರೇಜ್‌ ದಾಟಿದ ನೀರು

KannadaprabhaNewsNetwork |  
Published : Jul 06, 2026, 03:15 AM IST
ಜಮಖಂಡಿ ತಾಲುಕಿನ ಕೃಷ್ಣಾ ನದಿಯಲ್ಲಿ ನೀರು ಬಂದಿದ್ದು ರೈತರು ಹರ್ಷ ವ್ಯಕ್ತ ಪಡಿಸಿದ್ದಾರೆ, ಭಾನುವಾರ ಮಧ್ಯಾಹ್ನ ನೀರು ಚಿಕ್ಕಪಡಸಲಗಿ ತಲುಪಿದೆ. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಜಮಖಂಡಿಬರಗಾಲದಿಂದ ಬಸವಳಿದಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕೃಷ್ಣಾ ನದಿಗೆ ರಾಜಾಪೂರ ಬ್ಯಾರೇಜ್‌ನಿಂದ ಬಿಡುಗಡೆ ಗೊಳಿಸಿದ್ದ ನೀರು ಭಾನುವಾರ ಚಿಕ್ಕಪಡಸಲಗಿ ಬ್ಯಾರೇಜ್‌ ದಾಟಿ ಮುಂದಕ್ಕೆ ಹರಿಯುತ್ತಿದ್ದು, ರೈತಾಪಿ ವರ್ಗ ಸಂತಸ ವ್ಯಕ್ತ ಪಡಿಸಿದೆ.

ಕನ್ನಡಪ್ರಭ ವಾರ್ತೆ ಜಮಖಂಡಿ

ಬರಗಾಲದಿಂದ ಬಸವಳಿದಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕೃಷ್ಣಾ ನದಿಗೆ ರಾಜಾಪೂರ ಬ್ಯಾರೇಜ್‌ನಿಂದ ಬಿಡುಗಡೆ ಗೊಳಿಸಿದ್ದ ನೀರು ಭಾನುವಾರ ಚಿಕ್ಕಪಡಸಲಗಿ ಬ್ಯಾರೇಜ್‌ ದಾಟಿ ಮುಂದಕ್ಕೆ ಹರಿಯುತ್ತಿದ್ದು, ರೈತಾಪಿ ವರ್ಗ ಸಂತಸ ವ್ಯಕ್ತ ಪಡಿಸಿದೆ.

ನೀರಿಲ್ಲ, ಮುಂಗಾರು ಮಳೆಯು ತಡವಾಗಿದ್ದರಿಂದ ಬಿತ್ತನೆ ಕಾರ್ಯ ಕುಂಠಿತಗೊಂಡಿತ್ತು. ಕಬ್ಬು ಬಿತ್ತನೆ ಮಾಡಿದ್ದ ರೈತರು ನದಿಯಲ್ಲಿ ನೀರಿಲ್ಲದೇ ಬೆಳೆಗಳು ಒಣಗುವ ಭೀತಿ ಎದುರಿಸುತ್ತಿದ್ದರು. ನದಿಗೆ ನೀರು ಬಂದಿದ್ದರಿಂದ ರೈತಾಪಿ ವಲಯ ಹರ್ಷವ್ಯಕ್ತ ಪಡಿಸಿದ್ದು, ಮುಂಗಾರು ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ನದಿಯಲ್ಲಿ ನೀರು ಬತ್ತಿ ಹೋಗಿದ್ದರಿಂದ ಇದ್ದ ಬೋರ್‌ವೆಲ್‌ಗಳು ನೀರಿನ ಕೊರತೆ ಅನುಭವಿಸುತ್ತಿದ್ದವು. ಇದರಿಂದ ಬೆಳೆಸಿದ ಬೆಳೆ ನಾಶವಾಗುವ ಭೀತಿಯಲ್ಲಿದ್ದವರಿಗೆ ನದಿಯಲ್ಲಿ ನೀರು ಬಂದಿರುವುದು ಸಂತಸ ಮೂಡಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯುತ್ ಸಂಪರ್ಕವಿಲ್ಲದ ಗ್ರಾಮ ಚಾವಡಿ!
ಬನ್ನಂಜೆ ಗೋವಿಂದಾಚಾರ್ಯರದ್ದು ಮಾದರಿ ಜೀವನ