ಚನ್ನಪಟ್ಟಣ: ಯೋಗೇಶ್ವರ್ ಅವರ ಗೆಲುವಿನ ಹಿನ್ನೆಲೆಯಲ್ಲಿ ಚನ್ನಪಟ್ಟಣದ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿತ್ತು. ಪ್ರಮಾಣ ಪತ್ರ ಸ್ವೀಕರಿಸಿದ ಬಳಿಕ ಕೆಂಗಲ್ ನಲ್ಲಿ ವಿಶೇಷ ಪೂಜೆ ಸಲ್ಲಿಸಿದ ಯೋಗೇಶ್ವರ್ ಅವರನ್ನು ಚನ್ನಪಟ್ಟಣದ ಶೇರ್ವಾ ವೃತ್ತದಿಂದ ಮಂಗಳವಾರಪೇಟೆಯಲ್ಲಿನ ಕಾಂಗ್ರೆಸ್ ಕಚೇರಿವರೆಗೂ ಬೃಹತ್ ರ್ಯಾಲಿ ನಡೆಸಿ, ಮೆರವಣಿಗೆ ಮೂಲಕ ಕರೆ ತರಲಾಯಿತು.
ರ್ಯಾಲಿಯಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್, ವಿಧಾನ ಪರಿಷತ್ ಸದಸ್ಯ ರವಿ, ಶಾಸಕರಾದ ಕದಲೂರು ಉದಯ್, ರಂಗನಾಥ್, ಇಕ್ಬಾಲ್ ಹುಸೇನ್ ಸೇರಿದಂತೆ ಅನೇಕರು ಹಾಜರಿದ್ದರು. ಮೆರೆವಣಿಗೆ ಹಿನ್ನಲೆಯಲ್ಲಿ ಗಂಟೆಗಳ ಕಾಲ ಟ್ರಾಫಿಕ್ ಚನ್ನಪಟ್ಟಣದ ಗಾಂಧಿ ಭವನದ ಮುಂಭಾಗ ಯೋಗೇಶ್ವರ್ ಅವರ 60 ಅಡಿಯ ಬೃಹತ್ ಕಟೌಟ್ ನಿರ್ಮಿಸಲಾಗಿತ್ತು.
ಕೋಟ್...........ನನ್ನ ತಾಲೂಕಿನ ನೀರಾವರಿ, ಸರ್ಕಾರದ ಜನಪರ ಯೋಜನೆಗಳು ನನ್ನ ಕೈ ಹಿಡಿದಿದೆ. ತಾಲೂಕಿನ ಜನರೊಂದಿಗೆ ಕಾಂಗ್ರೆಸ್ ನನನ್ನು ಕೈ ಬಿಡಲಿಲ್ಲ. ಬಿಜೆಪಿ-ಜೆಡಿಎಸ್ಗೆ ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಏನೆಲ್ಲ ಬದಲಾವಣೆಯಾಗಲಿದೆ ಎಂಬುದು ತಿಳಿಯುತ್ತದೆ. ನನ್ನ ಶಕ್ತಿ ಮೀರಿ ಜನರ ಅಭಿವೃದ್ಧಿಗೆ ಶ್ರಮಿಸುತ್ತೆನೆ.
-ಯೋಗೇಶ್ವರ್, ನೂತನ ಶಾಸಕರು, ಚನ್ನಪಟ್ಟಣ ಕ್ಷೇತ್ರ(ವಿಜಯೋತ್ಸವದ ಫೋಟೋ ಬಳಸಿ ಸರ್)