ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ನಿಯಮ ಪಾಲಿಸದ ಕೆಎಸ್ಸಾರ್ಟಿಸಿ ಚಾಲಕರಿಗೆ ದಂಡ - ನಿಗಮ ಎಚ್ಚರಿಕೆ

KannadaprabhaNewsNetwork |  
Published : Jul 19, 2024, 02:02 AM ISTUpdated : Jul 19, 2024, 05:57 AM IST
ಕೆಎಸ್ಸಾರ್ಟಿಸಿ | Kannada Prabha

ಸಾರಾಂಶ

ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ನಿಯಮ ಪಾಲಿಸದ ಕೆಎಸ್ಸಾರ್ಟಿಸಿ ಚಾಲಕರಿಗೆ ದಂಡ ವಿಧಿಸುವುದಾಗಿ ನಿಗಮ ಎಚ್ಚರಿಕೆ ನೀಡಿದೆ.

 ಬೆಂಗಳೂರು ;  ಬೆಂಗಳೂರು-ಮೈಸೂರು ಹೆದ್ದಾರಿನಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ಬಸ್‌ ಚಾಲನೆ ಮಾಡುವ ಚಾಲಕರಿಗೆ ₹500 ರಿಂದ ₹2 ಸಾವಿರವರೆಗೆ ದಂಡ ವಿಧಿಸುವುದಾಗಿ ಕೆಎಸ್ಸಾರ್ಟಿಸಿ ತಿಳಿಸಿದೆ.

ಬೆಂಗಳೂರು-ಮೈಸೂರು ಹೆದ್ದಾರಿನಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ಪತ್ತೆಗಾಗಿ ಇಂಟೆಲಿಜೆಂಟ್‌ ಟ್ರಾಫಿಕ್‌ ಮ್ಯಾನೇಜ್‌ಮೆಂಟ್ ಸಿಸ್ಟಂ ಅಳವಡಿಸಲಾಗಿದೆ. ಅದರಂತೆ ಹೆದ್ದಾರಿಯುದ್ದಕ್ಕೂ ನಿಯಮಿತವಾಗಿ ಉನ್ನತ ತಾಂತ್ರಿಕ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಕ್ಯಾಮೆರಾದಲ್ಲಿ ಕೆಎಸ್ಸಾರ್ಟಿಸಿ ಬಸ್‌ಗಳು ನಿಯಮ ಉಲ್ಲಂಘಿಸುವುದು ಪತ್ತೆಯಾಗುತ್ತಿದ್ದು, ಸಂಚಾರ ನಿಯಮ ಉಲ್ಲಂಘಿಸುವ ಬಸ್‌ಗಳ ಚಾಲಕರಿಗೆ ದಂಡ ವಿಧಿಸುವುದಾಗಿ ತಿಳಿಸಲಾಗಿದೆ.

ಅತಿವೇಗದ ಚಾಲನೆಗೆ ₹2 ಸಾವಿರ, ಅಪಾಯಕಾರಿ ಚಾಲನೆ, ವಾಹನ ಚಾಲನೆ ಸಮಯದಲ್ಲಿ ಮೊಬೈಲ್‌ ಬಳಕೆ, ನಿಲುಗಡೆ ರಹಿತ ಸ್ಥಳದಲ್ಲಿ ಬಸ್‌ ನಿಲ್ಲಿಸುವುದು, ಸಂಚಾರಿ ಪೊಲೀಸರ ಆದೇಶ ಪಾಲಿಸದಿರುವುದು, ನಿಶಬ್ದ ವಲಯದಲ್ಲಿ ಹಾರ್ನ್‌ ಮಾಡುವುದು, ತುರ್ತು ವಾಹನಗಳ ಸಂಚಾರಕ್ಕ ಸ್ಥಳಾವಕಾಶ ನೀಡದಿರುವುದಕ್ಕೆ ತಲಾ ₹1 ಸಾವಿರ ಹಾಗೂ ವಾಹನ ಚಾಲನೆ ಮಾಡುವಾಗ ಏಕಾಏಕಿ ಪಥ ಬದಲಾವಣೆ, ಏಕಮುಖ ರಸ್ತೆಯಲ್ಲಿ ವಾಹನ ಚಾಲನೆ, ಟ್ರಾಫಿಕ್‌ ಸಿಗ್ನಲ್‌ ಜಂಪ್‌ಗೆ ತಲಾ ₹500 ದಂಡ ವಿಧಿಸಲಾಗುವುದು ಎಂದು ನಿಗಮ ಹೇಳಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೇಣುಕರು ಲಿಂಗಾಯತ ಸಮುದಾಯದ ಮಹಾನ್ ಆಚಾರ್ಯ
ಜಿಲ್ಲಾದ್ಯಂತ 1200 ಪ್ರೌಢಶಾಲೆಗಳಲ್ಲಿ ಕಾನೂನು ಅರಿವು