ಕು.ತೇಜೋಮಯಿ ರಾಮಪ್ಪ ಗದ್ದಿಗೆ ಗೌರವ ಸನ್ಮಾನ

KannadaprabhaNewsNetwork |  
Published : Jun 12, 2026, 04:00 AM IST
ಗದ್ದಿ | Kannada Prabha

ಸಾರಾಂಶ

ಬೆಂಗಳೂರು ನಗರದ ಚಾಮರಾಜ ಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆದ ಭರವಸೆಯ ಬೆಳಕು ಪ್ರಶಸ್ತಿ ಹಾಗೂ ಶಿಕ್ಷಕರ ಸಾಹಿತ್ಯ ಸಮ್ಮೇಳನದಲ್ಲಿ ಪ್ರಾರ್ಥನಾ ನೃತ್ಯ ಮಾಡಿದ ಕು.ತೇಜೋಮಯಿ ರಾಮಪ್ಪ ಗದ್ದಿ ಅವಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಂಗಳೂರು ನಗರದ ಚಾಮರಾಜ ಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆದ ಭರವಸೆಯ ಬೆಳಕು ಪ್ರಶಸ್ತಿ ಹಾಗೂ ಶಿಕ್ಷಕರ ಸಾಹಿತ್ಯ ಸಮ್ಮೇಳನದಲ್ಲಿ ಪ್ರಾರ್ಥನಾ ನೃತ್ಯ ಮಾಡಿದ ಕು.ತೇಜೋಮಯಿ ರಾಮಪ್ಪ ಗದ್ದಿ ಅವಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗಕಲಾವಿದರ ಸಾಧಕರ ಮಾತಾ ಪ್ರಕಾಶನ (ರಿ) ಕರ್ನಾಟಕ ಕಡಲಬಾಳು ಅವರು ಕಾರ್ಯಕ್ರಮ ಆಯೋಜಿಸಿದರು.ಹಗರಿಬೊಮ್ಮನಹಳ್ಳಿಯ ಹಾಲಶಂಕರ ಮಠದ ಹಾಲಸಿದ್ದೇಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಕನ್ನಡ ಪ್ರಾಧ್ಯಾಪಕರು ಹಾಗೂ ಭಾಷಾತಜ್ಞ ಡಾ.ಬಿ.ಪ್ರಹ್ಲಾದ ರೆಡ್ಡಿ ಉದ್ಘಾಟಿಸಿದರು. ನಾಡ ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಸುರೇಂದ್ರ ಗುಡ್ಡೆ ಹೋಟೆಲ್ ಅಧ್ಯಕ್ಷತೆ ವಹಿಸಿದ್ದರು. ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗಕಲಾವಿದರ ಸಾಧಕರ ಮಾತಾ ಪ್ರಕಾಶನ (ರಿ) ಕರ್ನಾಟಕದ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಡಾ.ನಾಗರಾಜ ತಂಬ್ರಹಳ್ಳಿ, ಬಾದಾಮಿ ಕುಳಗೇರಿ ಕ್ರಾಸ್‌ನ ಜಿ.ಜಿ.ಹಕ್ಕಾಪಕ್ಕಿ ಶಾಲೆಯ ಸಹಶಿಕ್ಷಕಿ ಶಶಿಕಲಾ ಮಲಕಾಜಪ್ಪ ಅಂಗಡಿ, ಮುಷ್ಟಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿ ನಾಗರತ್ನಾ ಕೆ.ಪಟ್ಟದಕಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉತ್ತಮ ಕಾರ್ಯಗಳಿಂದ ಜೀವನದಲ್ಲಿ ಸಾರ್ಥಕತೆ: ಮುರುಘೇಂದ್ರ ಶ್ರೀ
ಜೀವ ತುಂಬಿಕೊಂಡ ರಬಕವಿ-ಮಹಿಷವಾಡಗಿ ಸೇತುವೆ!