ಕನ್ನಡಪ್ರಭ ವಾರ್ತೆ ಮುನವಳ್ಳಿ
ಜೀವನದ ಸಾರ್ಥಕತೆಗೆ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಮಠದ ಸಮಾಜದ ಕೀರ್ತಿ ಹೆಚ್ಚುತ್ತದೆ. ಶ್ರೀಗಳು ಕೇವಲ ಧಾರ್ಮಿಕ ಕೇಂದ್ರಗಳನ್ನು ಮುನ್ನಡೆಸುವುದಲ್ಲದೆ, ಸಾವಿರಾರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡುತ್ತಿದ್ದಾರೆ ಎಂದು ಮುರುಘೇಂದ್ರ ಶ್ರೀಗಳು ಹೇಳಿದರು.ಪಟ್ಟಣದ ಸೋಮಶೇಖರ ಮಠದ ಸಭಾಭವನದಲ್ಲಿ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿ, ಭಕ್ತರ ಶ್ರೇಯೋಭಿವೃದ್ಧಿಯಲ್ಲಿ ಮಠದ ಅಭಿವೃದ್ದಿಯನ್ನು ಕಾಣುತ್ತೇನೆ. ಪಟ್ಟಣದ ಹಾಗೂ ಸುತ್ತಲಿನ ಗ್ರಾಮಗಳ ಭಕ್ತರ ವಿಶಾಲವಾದ ಗುಣದಿಂದ, ಗುರುಗಳನ್ನು ನೋಡುವದರಿಂದ ಸಮಾಜಕ್ಕೆ ಹೆಚ್ಚು ಸೇವೆ ಮಾಡಬೇಕು ಎಂದೆನಿಸುತ್ತದೆ ಎಂದರು.ಮುರುಗೋಡದ ನೀಲಕಂಠ ಶ್ರೀಗಳು, ಕಮತಗಿಯ ಹುಚ್ಚೇಶ್ವರ ಶ್ರೀಗಳು, ಸತ್ಸಂಗ ಆಶ್ರಮದ ಮುಕ್ತಾನಂದ ಶ್ರೀಗಳು, ಜಂಬಗಿ ಹಿರೇಮಠದ ಅಡವಿಸಿದ್ದೇಶ್ವರ ಶ್ರೀಗಳು, ಅಮಿನಗಡದ ಪ್ರಭುಶಂಕರರಾಜೇಂದ್ರ ಶ್ರೀಗಳು, ಅಂಕಲಗಿಯ ಡಾ.ಅಮರಸಿದ್ದೇಶ್ವರ ಶ್ರೀಗಳು, ಸವದತ್ತಿಯ ಬೀದರಿಕಲ್ಮಠದ ಬಸವಲಿಂಗ ದೇವರು, ಪುರಸಭೆ ಅಧ್ಯಕ್ಷ ಈಶ್ವರ ಕರಿಕಟ್ಟಿ, ಮುಖ್ಯಾಧಿಕಾರಿ ಎಮ್.ಎಮ್.ತಿಮ್ಮಾಣಿ, ಸದಾನಂದ ಕೌಜಲಗಿ, ವೀರೂಪಾಕ್ಷ ಮಾಮನಿ, ಜಗದೀಶ ಕೌಜಗಿರಿ, ಅಂಬ್ರೀಷ ಯಲಿಗಾರ, ಬಿ.ಬಿ.ಹೂಲಿಗೊಪ್ಪ, ಗಂಗಾಧರ ಗೊರಾಬಾಳ, ಶಿವು ಕಾಟೆ, ಶ್ರೀಶೈಲ ಗೋಪಶೆಟ್ಟಿ, ಅರುಣಗೌಡ ಪಾಟೀಲ, ಶಂಕರ ಗಯ್ಯಾಳಿ, ಮುರುಘರಾಜೇಂದ್ರ ಯೋಗ ವಿದ್ಯಾಕೇಂದ್ರದ ನಿರ್ದೇಶಕರು, ಶಿಕ್ಷಕರು, ಸಿಬ್ಬಂದಿ, ವಿವಿಧ ಸಂಘಗಳಿಂದ ಮುರುಘೇಂದ್ರ ಶ್ರೀಗಳಿಗೆ ಗುರುವಂದನೆ ಜರಗಿತು.
.