ಕನ್ನಡಪ್ರಭ ವಾರ್ತೆ ಹುಕ್ಕೇರಿ
ವಿದ್ಯಾರ್ಥಿಗಳಿಗೆ ಜ್ಞಾನ, ಕೌಶಲ್ಯ ಮತ್ತು ಮೌಲ್ಯಗಳನ್ನು ಕಲಿಸಿ ಅವರ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಇವರ ಪಾತ್ರ ಕೇವಲ ಪುಸ್ತಕದ ಜ್ಞಾನ ನೀಡುವುದಕ್ಕೆ ಸೀಮಿತವಾಗಿರದೇ ಮಗುವಿನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಅತ್ಯಮೂಲ್ಯವಾಗಿದೆ. ಇಂಥ ಅನುಪಮ ಸೇವೆಯಲ್ಲಿ ತೊಡಗಿರುವ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಅವಿರತ ಶ್ರಮಿಸುತ್ತಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಂಟಿ ಕಾರ್ಯದರ್ಶಿ ಎಂ.ಬಿ.ನಾಯಿಕ ಹೇಳಿದರು.ಪಟ್ಟಣದಲ್ಲಿ ನಡೆದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಪಾಠ ಮಾಡುವ ಮತ್ತು ಸಮಾಜಕ್ಕೆ ಉತ್ತಮ ಮಾರ್ಗದರ್ಶಕರಾಗಿರುವ ಶಿಕ್ಷಕರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮತ್ತು ಸಮಸ್ಯೆಗಳ ಪರಿಹಾರಕ್ಕೆ ಒಗ್ಗಟ್ಟು ಪ್ರದರ್ಶಿಸಬೇಕು. ಇದಕ್ಕಾಗಿ ಸಂಘಟನೆ ಬಲಪಡಿಸುವ ಅಗತ್ಯವಿದೆ ಎಂದರು.ಇದೇ ವೇಳೆ ಸಂಘದ ನೂತನ ಅಧ್ಯಕ್ಷರನ್ನಾಗಿ ಕೆ.ಕೆ.ಪಾಟೀಲ, ಪ್ರಧಾನ ಕಾರ್ಯದರ್ಶಿಯನ್ನಾಗಿ ಎಸ್.ಎನ್.ಸುತಾರ, ಉಪಾಧ್ಯಕ್ಷರನ್ನಾಗಿ ಸುಜಾತಾ ನಾವಿ, ಎಸ್.ಎ.ಮಾವಿನಕಟ್ಟಿ, ಖಜಾಂಚಿಯನ್ನಾಗಿ ವಿ.ಪಿ.ಮಾಳಿ, ಸಂಘಟನಾ ಕಾರ್ಯದರ್ಶಿಗಳನ್ನಾಗಿ ಆರ್.ಆರ್.ತಳವಾರ, ಜಿ.ಎಸ್.ಹಟ್ಟಿ, ಸಹಕಾರ್ಯದರ್ಶಿಗಳನ್ನಾಗಿ ಕೆ.ವಿ.ವಾಘರಾಳಕರ, ಎಸ್.ಎಂ.ಜಮಾದಾರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸಂಘಕ್ಕೆ ಒಟ್ಟು 19 ಜನ ಶಿಕ್ಷಕ ಪ್ರತಿನಿಧಿಗಳನ್ನು ಅವರೋಧವಾಗಿ ಆಯ್ಕೆ ಮಾಡಲಾಗಿದೆ. ಸಾಮಾನ್ಯ ಕ್ಷೇತ್ರದಿಂದ ಬೆಲ್ಲದ ಬಾಗೇವಾಡಿ ಕೆಎಚ್‌ಪಿಎಸ್ ಎಸ್.ಆರ್.ಖಾನಾಪೂರೆ, ಶೇಲಾಪೂರ ಕೆಎಚ್‌ಪಿಎಸ್ ಬಿ.ಬಿ.ಅಂಗಡಿ, ಗಾಂಧಿನಗರ ಕೆಎಚ್‌ಪಿಎಸ್ ವಿ.ಎಂ.ನಾಯಿಕ, ಬೆಣಿವಾಡ ತೋಟ ಕೆಎಲ್‌ಪಿಎಸ್ ಕೆ.ಕೆ.ಪಾಟೀಲ, ಕೋಟ ಕೆಎಚ್‌ಪಿಎಸ್ ಎಸ್.ಎನ್.ಸುತಾರ, ಹೊಸ ಬಸ್ಸಾಪೂರ ಕೆಎಲ್‌ಪಿಎಸ್ ಆರ್.ಆರ್.ತಳವಾರ, ಬಸ್ಸಾಪೂರ ಕೆಎಚ್‌ಪಿಬಿಎಸ್ ಎಸ್.ಎ.ಮಾವಿನಕಟ್ಟಿ, ಅಮ್ಮಿನಬಾವಿ ಕೆಎಚ್‌ಪಿಎಸ್ ವಿ.ಪಿ.ಮಾಳಿ, ಹಳೆ ಗುಡಗನಟ್ಟಿ ಕೆಎಲ್‌ಪಿಎಸ್ ವಿ.ಎ.ಬಡಿಗೇರ, ಬುಗಟೆ ಆಲೂರ ಎಂಎಚ್‌ಪಿಎಸ್ ಕೆ.ವಿ.ವಾಘರಾಳಕರ, ಹೆಬ್ಬಾಳ ಕೆಎಚ್‌ಪಿಜಿಎಸ್ ಪಿ.ಜಿ.ಹೊನಗುಡಿ, ರಕ್ಷಿ ಕೆಎಚ್‌ಪಿಎಸ್ ಎನ್.ಎಸ್.ದೇವರಮನಿ ಅವರು ಆಯ್ಕೆಯಾಗಿದ್ದಾರೆ.ಮಹಿಳಾ ಪ್ರತಿನಿಧಿಗಳಾಗಿ ಬಾಡ ಕೆಎಚ್‌ಪಿಎಸ್ ಸಂಗೀತಾ ಕುಂಬಾರ, ಹಂಚಿನಾಳ ಕೆಎಚ್‌ಪಿಎಸ್ ಸುಜಾತಾ ನಾವಿ, ಇಸ್ಲಾಂಪೂರ ಕೆಎಚ್‌ಪಿಎಸ್ ಜಿ.ಎಸ್.ಹಟ್ಟಿ, ಸಂಕೇಶ್ವರ ಅಂಕಲಿ ರಸ್ತೆ ಕೆಎಚ್‌ಪಿಎಸ್ ಆರ್.ಎಸ್.ಭಂಡಾರಿ, ಶಿಂಧಿಹಟ್ಟಿ ಕೆಎಚ್‌ಪಿಎಸ್ ಯು.ಎನ್.ಕಂಬಳಿ, ಯಮಕನಮರಡಿ ಯುಎಚ್‌ಪಿಎಸ್ ಎಸ್.ಎಂ.ಜಮಾದಾರ ಅವರನ್ನು ಆಯ್ಕೆ ಮಾಡಲಾಯಿತು.ನಿರ್ದೇಶಕರಾದ ಎಸ್.ಎಸ್.ಹಿರೇಮಠ, ಎಂ.ಎಸ್.ನಂದಿ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎನ್.ಮಗದುಮ್ಮ, ಆರ್.ಎಸ್.ಅಂಬ್ರಿ, ವಿ.ಡಿ.ನರಸನ್ನವರ, ಜೆ.ವಿ.ದಳವಾಯಿ, ಎಲ್.ಎಸ್.ನಾಶಿಪುಡಿ ಮತ್ತಿತರರು ಉಪಸ್ಥಿತರಿದ್ದರು.ಚುನಾವಣಾಧಿಕಾರಿಯಾಗಿ ಎನ್.ಬಿ.ತೇರದಾಳ, ಸಹಾಯಕ ಚುನಾವಣಾಧಿಕಾರಿಯಾಗಿ ಎಸ್.ಎಂ.ಹುಲ್ಲೋಳಿ ಕರ್ತವ್ಯ ನಿರ್ವಹಿಸಿದರು. ಸಂಘಟನಾ ಕಾರ್ಯದರ್ಶಿ ಬಿ.ಆರ್.ತಳವಾರ ನಿರೂಪಿಸಿದರು. ನಿರ್ದೇಶಕ ಎನ್.ಎಸ್.ದೇವರಮನಿ ವಂದಿಸಿದರು.