₹5 ಕೋಟಿ ಕಾಮಗಾರಿಗೆ ಶಾಸಕ ಮಂಜುನಾಥ್‌ರಿಂದ ಗುದ್ದಲಿ ಪೂಜೆ

KannadaprabhaNewsNetwork |  
Published : Feb 12, 2026, 01:45 AM IST
ಶಾಸಕ ಎಂ.ಆರ್‌.ಮಂಜುನಾಥ್‌ ಅವರು ತಾಲೂಕಿನಲ್ಲಿ ₹5 ಕೋಟಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ಹುಗ್ಯಮ್ ಹಾಗೂ ಮಿಣ್ಯಮ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಒಟ್ಟು ₹5 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕ್ಷೇತ್ರದ ಶಾಸಕ ಎಂ.ಆರ್‌. ಮಂಜುನಾಥ್‌ರವರು ಗುದ್ದಲಿ ಪೂಜೆ ನೆರವೇರಿಸಿದರು.

- ಸಿಸಿ ರಸ್ತೆ, ಸೇತುವೆ, ಡಾಂಬರು ರಸ್ತೆ ಕಾಮಗಾರಿಗೆ ಚಾಲನೆ

---

ಕನ್ನಡಪ್ರಭ ವಾರ್ತೆ ಹನೂರು

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ಹುಗ್ಯಮ್ ಹಾಗೂ ಮಿಣ್ಯಮ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಒಟ್ಟು ₹5 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕ್ಷೇತ್ರದ ಶಾಸಕ ಎಂ.ಆರ್‌. ಮಂಜುನಾಥ್‌ರವರು ಗುದ್ದಲಿ ಪೂಜೆ ನೆರವೇರಿಸಿದರು.

ತಾಲೂಕಿನ ಪೆದ್ದನಪಾಳ್ಯ, ಹಂಚಿಪಾಳ್ಯ, ಮಿನ್ಯಮ್, ಹುಗ್ಯಮ್, ಹಾಗೂ ನಕ್ಕುಂದಿ ಗ್ರಾಮಗಳಲ್ಲಿ ಕಾಂಕ್ರೀಟ್‌ ರಸ್ತೆ, ಡಾಂಬರು ರಸ್ತೆ ಅಭಿವೃದ್ಧಿ ಹಾಗೂ ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಿದರು.

‘ಸ್ವತಂತ್ರ ಬಂದು 78 ವರ್ಷಗಳಾಗಿದ್ದರೂ ಹನೂರು ಕ್ಷೇತ್ರದ ಹಲವಾರು ಗ್ರಾಮಗಳಲ್ಲಿ ಸಮರ್ಪಕವಾಗಿ ಮೂಲಸೌಕರ್ಯ ನೀಡಲು ಸಾಧ್ಯವಾಗಿಲ್ಲ. ಸರ್ಕಾರದ ಸಹಕಾರದಿಂದ ಕಾಂಕ್ರೀಟ್‌ ರಸ್ತೆ ಹಾಗೂ ಸೇತುವೆ ಕಾಮಗಾರಿ ಕೈಗೊಳ್ಳಲು ₹5 ಕೋಟಿ ಅನುದಾನ ಬಂದಿದೆ’ ಎಂದರು.

ಈ ವೇಳೆ ಗ್ರಾ.ಪಂ ಮಾಜಿ ಅಧ್ಯಕ್ಷ ಮುರುಗೇಶ್, ಪಳನೀಸ್ವಾಮಿ, ಬಸವಣ್ಣ, ಹುಚ್ಚಯ್ಯ, ಮುನಿಯಪ್ಪ, ಶಿವು, ತಂಗವೇಲು, ಅರುಳ್‌ಸ್ವಾಮಿ, ಗುರುಮಲ್ಲಪ್ಪ, ಗುಂಡೂರಾವ್, ರಾಜೇಂದ್ರ, ಸೆಂದಿಲ್, ಶಿವ, ರಾಮು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ನಂಜುಂಡಸ್ವಾಮಿ, ವಸತಿ ಇಲಾಖೆಯ ನೋಡಲ್‌ ಅಧಿಕಾರಿ ಶ್ರೀಕಾಂತಪ್ಪ ಸೇರಿದಂತೆ ಇನ್ನಿತರರು ಇದ್ದರು.

---

11ಸಿಎಚ್‌ಎನ್‌60

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವನವೈಭವ... ಬತ್ತಿದ ಜಲಮೂಲ ಪುನಶ್ಚೇತನಕ್ಕೆ ಅರಣ್ಯಇಲಾಖೆ ಹೊಸ ಯೋಜನೆ
‘ಕನ್ನಡಪ್ರಭ’ ಸಂಪಾದಕ ಜೋಗಿ, ಕಬ್ಬಿನಾಲೆಗೆ ‘ಮಹಾಬಲ’ ಪ್ರಶಸ್ತಿ